'ಖೇಲ್ ರತ್ನ'  ಪ್ರಶಸ್ತಿಗೆ ಕಾಮನ್ವೆಲ್ತ್ ಚಿನ್ನ ವಿಜೇತ ಬಜರಂಗ್ ಪುನಿಯಾ ಹೆಸರು ಶಿಫಾರಸು

ಏಷ್ಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದ ಕುಸ್ತಿಪಟು ಬಜರಂಗ್ ಪುನಿಯಾ ಈ ಬಾರಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ  ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. 
ಬಜರಂಗ್ ಪುನಿಯಾ
ಬಜರಂಗ್ ಪುನಿಯಾ

ನವದೆಹಲಿ: ಏಷ್ಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದ ಕುಸ್ತಿಪಟು ಬಜರಂಗ್ ಪುನಿಯಾ ಈ ಬಾರಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ  ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಆಯ್ಕೆ ಸಮಿತಿಯ ಎರಡು ದಿನಗಳ ಸಭೆ ಪ್ರಾರಂಭಿಕ ದಿನವಾದ ಇಂದು  12 ಸದಸ್ಯರ ಆಯ್ಕೆ ಸಮಿತಿಯು ಅವರ ಹೆಸರನ್ನು ಅಂತಿಮಗೊಳಿಸಿತು. ಈ ಸಮಿತಿಯಲ್ಲಿ ಭೈಚುಂಗ್ ಭುಟಿಯಾ ಮತ್ತು ಎಂ ಸಿ ಮೇರಿ ಕೋಮ್ ಇನ್ನಿತರರು ಸಹ ಇದ್ದರು.

"ಭಜರಂಗ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರ ಹೆಸರು ಸರ್ವಾನುಮತದ ಆಯ್ಕೆಯಾಗಿದೆ" ಎಂದು ನಂಬಲರ್ಹ ಮೂಲಗಳು  ಪಿಟಿಐಗೆ ತಿಳಿಸಿದೆ.

ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಹೆಸರು ಅಂತಿಮಗೊಳಿಸುವ ಜೊತೆಗೆ 12 ಸದಸ್ಯರ ಸಮಿತಿಯು ಶನಿವಾರ  ಅತ್ಯುನ್ನತ ಗೌರವಕ್ಕಾಗಿ ಇನ್ನೊಬ್ಬ ಕ್ರೀಡಾಪಟುವನ್ನು ಹೆಸರಿಸುವ ಸಾಧ್ಯತೆ ಇದೆ  ಎಂದು ಮೂಲಗಳು ತಿಳಿಸಿವೆ.

"ಈ ಪ್ರಶಸ್ತಿಗೆ ಅರ್ಹವಾದ ಸಾಧನೆಗಳನ್ನು ನಾನು ಹೊಂದಿದ್ದೇನೆ. ಪ್ರಶಸ್ತಿಗಳು ಅತ್ಯಂತ ಅರ್ಹರಾದವರಿಗೆ ಸಿಗಬೇಕು ಎಂದು ನಾನು ಯಾವಾಗಲೂ ಹೇಳಿದ್ದೇನೆ" ಎಂದು ಬಜರಂಗ್ ಜಾರ್ಜಿಯಾದಿಂದ ಪಿಟಿಐಗೆ ತಿಳಿಸಿದ್ದಾರೆ.

ಕಳೆದ ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ 65 ಕೆಜಿ ತೂಕದ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಜರಂಗ್ ಚಿನ್ನದ ಪದಕ ಗೆದ್ದಿದ್ದರು.ಅಲ್ಲದೆ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಅದೇ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಪದಕ ಗೆದ್ದಿದ್ದು ಸಧ್ಯ ಮುಂಬರುವ  ಟೋಕಿಯೊ ಒಲಿಂಪಿಕ್ಸ್‌ಗಾಗಿ ತರಬೇತಿ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com