ಪ್ರೊಕಬಡ್ಡಿ ಲೀಗ್ 2019: ತಮಿಳ್ ತಲೈವಾಸ್ ಸೋಲಿನ ಪಾಠ ಮಾಡಿದ ಬೆಂಗಳೂರು ಬುಲ್ಸ್!

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಶನಿವಾರದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮತ್ತೆ ಘರ್ಜಿಸಿದ್ದು, ತಮಿಳ್ ತಲೈವಾಸ್ ತಂಡವನ್ನು ಅವರ ತವರಿನಲ್ಲೇ ಮಣಿಸುವ ಮೂಲಕ ಟೂರ್ನಿಯಲ್ಲಿ ಮತ್ತೊಂದು ಗೆಲುವಿನ ನಗೆ ಬೀರಿದ್ದಾರೆ.

Published: 18th August 2019 09:07 AM  |   Last Updated: 18th August 2019 09:07 AM   |  A+A-


Bengaluru Bulls thumps Tamil Thalaivas

ತಮಿಳ್ ತಲೈವಾಸ್ ಮಣಿಸಿದ ಬೆಂಗಳೂರು ಬುಲ್ಸ್

Posted By : Srinivasamurthy VN
Source : Online Desk

ತವರಿನಲ್ಲೇ ಬೆಂಗಳೂರು ವಿರುದ್ಧ ತಲೆಬಾಗಿದ ತಮಿಳ್ ತಲೈವಾಸ್, 32-21 ಅಂಕಗಳ ಅಂತರದ ಭರ್ಜರಿ ಜಯ

ಚೆನ್ನೈ: ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಶನಿವಾರದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮತ್ತೆ ಘರ್ಜಿಸಿದ್ದು, ತಮಿಳ್ ತಲೈವಾಸ್ ತಂಡವನ್ನು ಅವರ ತವರಿನಲ್ಲೇ ಮಣಿಸುವ ಮೂಲಕ ಟೂರ್ನಿಯಲ್ಲಿ ಮತ್ತೊಂದು ಗೆಲುವಿನ ನಗೆ ಬೀರಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ತಮಿಲ್ ತಲೈವಾಸ್ ವಿರುದ್ಧದ ಹೋರಾಟದಲ್ಲಿ ಬೆಂಗಳೂರು ಬುಲ್ಸ್ ತಂಡ 32-21 ಅಂಕಗಳ ಮೂಲಕ  ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ಬೆಂಗಳೂರು ಈ ಬಾರಿಯೂ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

ಇನ್ನು ಮೊದಲಾರ್ಧದಲ್ಲೇ ಅಬ್ಬರಿಸಿದ ಬೆಂಗಳೂರು ತಂಡದ ಆಟಗಾರರು ಕೇವಲ ಆರಂಭಿಕ 5 ನಿಮಷದಲ್ಲಿ ಅಂಕ ಬಾಚಿಕೊಂಡರೆ, ಇತ್ತ ತಮಿಳ್ ತಲೈವಾಸ್ ಒಂದೂ ಅಂಕವನ್ನು ಗಳಿಸಲಿಲ್ಲ. 7-0 ಮುನ್ನಡೆ ಸಾಧಿಸಿದ ಬೆಂಗಳೂರು 6ನೇ ನಿಮಿಷದಲ್ಲಿ ತಮಿಳ್ ತಲೈವಾಸ್ ತಂಡವನ್ನು ಆಲೌಟ್ ಮಾಡಿತು. ಈ ಮೂಲಕ 10-1 ಅಂಕಗಳ ಮುನ್ನಡೆ ಪಡೆದುಕೊಂಡಿತು. ಮೊದಲಾರ್ಧದ ಅಂತ್ಯದ ವೇಳೆಗೆ ತಮಿಳ್ ತಲೈವಾಸ್ ಚುರುಕಿನ ಆಟವಾಡಿತು.

ಅಷ್ಟರಲ್ಲೇ ಬೆಂಗಳೂರು ಭಾರಿ ಮುನ್ನಡೆ ಪಡೆದುಕೊಂಡಿತ್ತು. ಹೀಗಾಗಿ ಬುಲ್ಸ್ 17-10 ಅಂಕದೊಂದಿಗೆ ಮೊದಲಾರ್ಧ ಅಂತ್ಯಗೊಳಿಸಿತು. ಇನ್ನು ದ್ವಿತೀಯಾರ್ಧದಲ್ಲಿ ಬೆಂಗಳೂರು ಹೋರಾಟ ಮುಂದುವರಿಸಿತು. ಇತ್ತ ತಮಿಳ್ ತಲೈವಾಸ್ ಮುನ್ನಡೆಗಾಗಿ ಹರಸಾಹಸ ಪಟ್ಟರೂ ಆ ತಂಡದ ಯೋಜನೆಗಳು ಯಾವುದೂ ಕೈಗೂಡಲಿಲ್ಲ. ಪಂದ್ಯ ಮುಕ್ತಾಯದ ವೇಳೆ ಬೆಂಗಳೂರುು 32-21 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಆ ಮೂಲಕ ಟೂರ್ನಿಯಲ್ಲಿ ಮತ್ತೊಂದು ಗೆಲುವು ಸಾಧಿಸಿ ಟೂರ್ನಿಯಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.

Stay up to date on all the latest ಕ್ರೀಡೆ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp