11 ಸೆಕೆಂಡುಗಳಲ್ಲಿ 100 ಮೀಟರ್, ಯುವಕನ ಮಿಂಚಿನ ಓಟ! ವಿಡಿಯೋ ವೈರಲ್ 

24 ವರ್ಷದ ಯುವಕನೋರ್ವ ಕೇವಲ 11 ಸೆಕೆಂಡುಗಳಲ್ಲಿ ಮಿಂಚಿನಂತೆ 100 ಮೀಟರ್ ಓಟದ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Published: 18th August 2019 09:18 AM  |   Last Updated: 18th August 2019 04:43 PM   |  A+A-


Posted By : Nagaraja AB
Source : PTI

ಮಧ್ಯಪ್ರದೇಶ:  24 ವರ್ಷದ ಯುವಕನೋರ್ವ ಕೇವಲ 11 ಸೆಕೆಂಡುಗಳಲ್ಲಿ ಮಿಂಚಿನಂತೆ 100 ಮೀಟರ್ ಓಟದ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶುಕ್ರವಾರ ಈ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ಮಾಜಿ ಮುಖ್ಯಮಂತ್ರಿ  ಶಿವರಾಜ್ ಸಿಂಗ್  ಚೌಹ್ಹಾಣ್, ಈ ಪ್ರತಿಭೆಗೆ ಸೂಕ್ತ ಅವಕಾಶ ದೊರೆಯಬೇಕು.  ರಾಷ್ಟ್ರ ಧ್ವಜ ಹಿಡಿದು ಬಂದು ಇತಿಹಾಸ ಸೃಷ್ಟಿಸಬೇಕು ಎಂದು ಕೇಂದ್ರ ಕ್ರೀಡಾ ಸಚಿವರನ್ನು ಒತ್ತಾಯಿಸಿದ್ದರು.

ಈ ವಿಡಿಯೋ ವೀಕ್ಷಿಸಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ನನ್ನ ಹತ್ತಿರ ಆ ಯುವಕನನ್ನು ಕರೆತನ್ನಿ , ತರಬೇತಿ ಸಂಸ್ಥೆಯೊಂದಕ್ಕೆ ಆತನನ್ನು ನೋಂದಣಿ ಮಾಡಿಸುವುದಾಗಿ ತಿಳಿಸಿದ್ದಾರೆ. 

ಕಿರಣ್ ರಿಜಿಜು ಈ ರೀತಿ ಟ್ವೀಟ್ ಮಾಡಿದ ನಂತರ ಎಲ್ಲರೂ   24 ವರ್ಷದ ಯುವಕ ರಾಮೇಶ್ವರ್ ಸಿಂಗ್ ಗೆ  ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.  

ರಾಮೇಶ್ವರ್ ಸಿಂಗ್ ನನ್ನು ಶೀಘ್ರದಲ್ಲಿಯೇ ತಮ್ಮ ಕೇಂದ್ರಕ್ಕೆ ನೋಂದಣಿ ಮಾಡಿಕೊಂಡು ಅಗತ್ಯ ತರಬೇತಿ ನೀಡಲಾಗುವುದು ಎಂದು ಭೂಪಾಲ್ ನ ಭಾರತೀಯ ಕ್ರೀಡಾ ಪ್ರಾಧಿಕಾರ ಟ್ವೀಟ್ ಮಾಡಿದೆ.

 

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp