ಸಿನ್ಸಿನಾಟಿ ಮಾಸ್ಟರ್ಸ್: ಮೆಡ್ವೆಡೆವ್‌-ಕೀಯ್ಸ್‌ ಗೆ ಚಾಂಪಿಯನ್ ಪಟ್ಟ

ರಷ್ಯಾದ ಡೆನಿಲ್‌ ಮೆಡ್ವೆಡೆವ್‌ ಹಾಗೂ ಅಮೆರಿಕದ ಮ್ಯಾಡಿಸನ್‌ ಕೀಯ್ಸ್ ಅವರು ಸಿನ್ಸಿನಾಟಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್‌ ಆಗಿದ್ದಾರೆ. 
ಮ್ಯಾಡಿಸನ್‌ ಕೀಯ್ಸ್ , ಡೆನಿಲ್‌ ಮೆಡ್ವೆಡೆವ್‌
ಮ್ಯಾಡಿಸನ್‌ ಕೀಯ್ಸ್ , ಡೆನಿಲ್‌ ಮೆಡ್ವೆಡೆವ್‌

ವಾಷಿಂಗ್ಟನ್‌: ರಷ್ಯಾದ ಡೆನಿಲ್‌ ಮೆಡ್ವೆಡೆವ್‌ ಹಾಗೂ ಅಮೆರಿಕದ ಮ್ಯಾಡಿಸನ್‌ ಕೀಯ್ಸ್ ಅವರು ಸಿನ್ಸಿನಾಟಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್‌ ಆಗಿದ್ದಾರೆ. 

ಸೋಮವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಡೆನಿಲ್‌ ಮೆಡ್ವೆಡೆವ್‌ ಅವರು ಡೇವಿಡ್‌ ಗೊಫಿನ್‌ ಅವರ ವಿರುದ್ಧ 7-6(3), 6-4 ಅಂತರದಲ್ಲಿ ಗೆದ್ದು ಚಾಂಪಿಯನ್‌ ಆದರು. ಆ ಮೂಲಕ ವೃತ್ತಿ ಜೀವನದ ಮೊದಲ ಬಾರಿ ಎಟಿಪಿ ಮಾಸ್ಟರ್ಸ್‌ 1000 ಟೂರ್ನಿಯಲ್ಲಿ ರಷ್ಯಾ ಆಟಗಾರ ಜಯಬೇರಿ ಬಾರಿಸಿದರು. 
 
ರಷ್ಯಾ ಆಟಗಾರ ಕಳೆದ ಮೂರು ವಾರಗಳಲ್ಲಿ ಮೂರು ಟೂರ್ನಿಗಳಲ್ಲಿ ಫೈನಲ್‌ ಪ್ರವೇಶ ಮಾಡಿದ್ದರು.  ಎರಡು ಫೈನಲ್‌ ಪಂದ್ಯದಲ್ಲಿ ವಿಫಲರಾಗಿದ್ದರು. ಆದರೆ, ಸಿನ್ಸಿನಾಟಿ ಮಾಸ್ಟರ್ಸ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಸಫಲರಾದರು. 

ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮ್ಯಾಡಿಸನ್‌ ಕೀಯ್ಸ್‌ ಅವರು ರಷ್ಯಾದ ಸ್ವೆಟ್ಲಾನಾ ಕುಜ್ನೆಟ್ಸೊವಾ ಅವರ ವಿರುದ್ಧ 7-5, 7-6(5) ಅಂತರದಲ್ಲಿ ಗೆದ್ದು ಸಿನ್ಸಿನಾಟಿ ಮಾಸ್ಟರ್ಸ್ ಚಾಂಪಿಯನ್‌ ಆದರು. ಇದು ಅಮೆರಿಕ ಆಟಗಾರ್ತಿಗೆ ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಪ್ರಶಸ್ತಿ ಇದಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com