ಕ್ವಾರ್ಟರ್‌ ಫೈನಲ್‌ಗೆ ಸಿಂಧು, ಪ್ರಣೀತ್‌: ಹೋರಾಟ ಅಂತ್ಯಗೊಳಿಸಿದ ಸೈನಾ, ಕಿಡಂಬಿ

ಭಾರತದ ಅಗ್ರ ಶ್ರೇಯಾಂಕದ ಆಟಗಾರ್ತಿ ಪಿ.ವಿ ಸಿಂಧು ಹಾಗೂ ಸಾಯಿ ಪ್ರಣೀತ್‌ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ, ಸೈನಾ ನೆಹ್ವಾಲ್‌, ಕಿಡಂಬಿ ಶ್ರೀಕಾಂತ್‌ ಹಾಗ

Published: 23rd August 2019 10:44 AM  |   Last Updated: 23rd August 2019 10:44 AM   |  A+A-


PV Sindhu-Sai Praneeth

ಪಿವಿ ಸಿಂಧು-ಸಾಯಿ ಪ್ರಣೀತ್

Posted By : Vishwanath S
Source : UNI

ಬಸೆಲ್‌: ಭಾರತದ ಅಗ್ರ ಶ್ರೇಯಾಂಕದ ಆಟಗಾರ್ತಿ ಪಿ.ವಿ ಸಿಂಧು ಹಾಗೂ ಸಾಯಿ ಪ್ರಣೀತ್‌ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ, ಸೈನಾ ನೆಹ್ವಾಲ್‌, ಕಿಡಂಬಿ ಶ್ರೀಕಾಂತ್‌ ಹಾಗೂ ಎಚ್‌. ಎಸ್‌ ಪ್ರಣಯ್‌ ಅವರು ಸೋತು ಟೂರ್ನಿಯಿಂದ ಹೊರ ನಡೆದರು.

ಐದನೇ ಶ್ರೇಯಾಂಕದ ಸಿಂಧು ಅವರು ಅಮೆರಿಕದ ಒಂಬತ್ತನೇ ಸ್ಥಾನದ ಬೆವೆನ್‌ ಝಾಂಗ್‌ ಅವರನ್ನು 21-14, 21-6 ಅಂತರದಲ್ಲಿ ನೇರ ಸೆಟ್‌ಗಳಿಂದ ಮಣಿಸಿದರು. ಅಂತಿಮ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಎರಡನೇ ಸ್ಥಾನದ ತೈವಾನ್‌ನ ತಾಯ್‌ ಟಿಜು-ಯಿಂಗ್‌ ವಿರುದ್ಧ ಸೆಣಸಲಿದ್ದಾರೆ. 

ಇದಕ್ಕೂ ಮುನ್ನ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಸಾಯಿ ಪ್ರಣೀತ್ ಅವರು ಆರನೇ ಶ್ರೇಯಾಂಕದ ಆ್ಯಂಥೋನಿ ಗಿಂಟಿಂಗ್‌ ಅವರ ವಿರುದ್ಧ 21-19, 21-13 ಅಂತರದಲ್ಲಿ ಗೆದ್ದು ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.

Stay up to date on all the latest ಕ್ರೀಡೆ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp