ಯುಎಸ್ ಓಪನ್ ಗೆ ಅರ್ಹತೆ ಪಡೆದ ಸುಮಿತ್‌ ನಗಾಲ್‌ ಗೆ ಟೆನ್ನಿಸ್ ದೈತ್ಯ ಫೆಡರರ್ ಎದುರಾಳಿ!

ಭಾರತೀಯ ಟೆನ್ನಿಸ್ ತಾರೆ ಸುಮಿತ್ ನಗಾಲ್ ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ವಿಶ್ವ ಅಗ್ರಮಾನ್ಯ ಟೆನ್ನಿಸ್ ತಾರೆ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ. ಈ ಮೂಲಕ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯವನ್ನಾಡುವ  ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ.
ಸುಮಿತ್‌ ನಗಾಲ್‌
ಸುಮಿತ್‌ ನಗಾಲ್‌

ನವದೆಹಲಿ: ಭಾರತೀಯ ಟೆನ್ನಿಸ್ ತಾರೆ ಸುಮಿತ್ ನಗಾಲ್ ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ವಿಶ್ವ ಅಗ್ರಮಾನ್ಯ ಟೆನ್ನಿಸ್ ತಾರೆ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ. ಈ ಮೂಲಕ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯವನ್ನಾಡುವ  ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ.

ಶುಕ್ರವಾರ ನಡೆದ ಅಂತಿಮ ಅರ್ಹತಾ ಸುತ್ತಿನಲ್ಲಿ ಬ್ರೆಜಿಲ್‌ನ ಜೊವಾವೊ ಮೆನೆಜೆಸ್‌ರನ್ನು ಎದುರಿಸಿದ ನಗಾಲ್ ಈ ಪಂದ್ಯ ಗೆಲ್ಲುವ ಮೂಲಕ ತಾನು  20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು  ಗೆದ್ದ ಜಾಗತಿಕ ಶ್ರೇಷ್ಠ ಫೆಡರರ್ ಅವರನ್ನು ಎದುರಿಸಲಿರುವುದಾಗಿ ಊಹಿಸಿರಲಿಲ್ಲ.

 ಎರಡು ಗಂಟೆ 27 ನಿಮಿಷಗಳಲ್ಲಿ ಬ್ರೆಜಿಲ್ ಆಟಗಾರನ ವಿರುದ್ಧ   5-7, 6-4, 6-3 ಅಂತರದ ಗೆಲುವು ಸಾಧಿಸಿದರು.

22 ವರ್ಷದ ಸುಮಿತ್ ಈ ದಶಕದಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಮುಖ್ಯ  ಪಂದ್ಯಾವಳಿಯಲ್ಲಿ ಕಾಣಿಸಿಕೊಂಡ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮದೇವ್ ದೇವರಮನ್, ಯೂಕಿ ಭಾಂಬ್ರಿ, ಸಕೇತ್ ಮೈನೆನಿ ಮತ್ತು ಪ್ರಜ್ನೇಶ್ ಗುನ್ನೇಶ್ವರನ್  ಈ ಹಿಂದೆ ಈ ಸಾಧನೆ ಮಾಡಿದ್ದರು.

2015 ರಲ್ಲಿ ವಿಯೆಟ್ನಾಂನ ನಾಮ್ ಹೊವಾಂಗ್ ಲೈ ಜತೆ ಸೇರಿ  ವಿಂಬಲ್ಡನ್ ಯುವಕರ ಡಬಲ್ಸ್ ಗೆದ್ದಾಗ ಜೂನಿಯರ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದ ಆರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಸುಮಿತ್ ಪಾತ್ರರಾಗಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com