ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್; ವಿಶ್ವ ವಿಜೇತ ಪಿವಿ ಸಿಂಧುಗೆ ಅಭಿನಂದನೆಗಳ ಮಹಾಪೂರ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಚಾಂಪಿಯನ್ ಆಗುವ ಮೂಲಕ ವಿಶ್ವದಾಖಲೆ ನಿರ್ಮಿಸಿರುವ ಪಿವಿ ಸಿಂಧುಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಚಿನ್ನದ ಹುಡುಗಿ ಪಿವಿ ಸಿಂಧು
ಚಿನ್ನದ ಹುಡುಗಿ ಪಿವಿ ಸಿಂಧು

ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಶುಭಾಶಯ

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಚಾಂಪಿಯನ್ ಆಗುವ ಮೂಲಕ ವಿಶ್ವದಾಖಲೆ ನಿರ್ಮಿಸಿರುವ ಪಿವಿ ಸಿಂಧುಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

2014ರಿಂದಲೂ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸುವ ಅವರ ಕನಸು ಭಾನುವಾರ ಕೈಗೂಡಿತು. ಚಿನ್ನದ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದ್ದಾಯಿತು. 38 ನಿಮಿಷಗಳ ಫೈನಲ್ ಹೋರಾಟದಲ್ಲಿ ಅವರದ್ದು ಅಧಿಕಾರಯುತ ಗೆಲುವು. ಹೈದರಾಬಾದಿನ ಸಿಂಧು 21–7, 21–7ರ ಎರಡು ನೇರ ಗೇಮ್‌ಗಳಲ್ಲಿ ಜಪಾನಿನ ನೊಜೊಮಿ ಒಕುಹರಾ ವಿರುದ್ಧ ಜಯಶಾಲಿಯಾದರು.

2017ರಲ್ಲಿ ಗ್ಲಾಸ್ಗೋದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಒಕುಹರಾ ಅವರು ಸಿಂಧು ಅವರನ್ನು ಸೋಲಿಸಿದ್ದರು. ಇದೀಗ ‘ಮುತ್ತಿನ ನಗರಿ’ಯ ಹುಡುಗಿ ಮುಯ್ಯಿ ತೀರಿಸಿಕೊಂಡಿದ್ದಾರೆ. ಈ ಬಾರಿಯ ಟೂರ್ನಿಯ ಸೆಮಿಫೈನಲ್‌ನಲ್ಲಿ ಸಿಂಧು ಅವರು ಆಲ್‌ ಇಂಗ್ಲೆಂಡ್ ಚಾಂಪಿಯನ್ ಯು ಫೆ ವಿರುದ್ಧ ಗೆದ್ದಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದು ಸಿಂಧು ಅವರ ಐದನೇ ಪದಕ. 2013, 2014ರಲ್ಲಿ ಸತತ ಎರಡು ಕಂಚು, 2017 ಮತ್ತು 2018ರಲ್ಲಿ ಸತತ ಎರಡು ಬಾರಿ ಬೆಳ್ಳಿ ಪದಕ ಗೆದ್ದಿದ್ದರು. ಹೋದ ವರ್ಷ ಚೀನಾದ ನಾನ್ಜಿಂಗ್‌ನಲ್ಲಿ ನಡೆದಿದ್ದ  ಟೂರ್ನಿಯಲ್ಲಿ ಆಡಲು ಹೋಗುವ ಮುನ್ನ ಅವರು, ‘ಹೋದ ಸಲ ಬೆಳ್ಳಿ ಗೆದ್ದಿದ್ದೆ. ಈ ಸಲ ಆ ಪದಕದ ಬಣ್ಣ ಬದಲಿಸುತ್ತೇನೆ’ ಎಂದು ಚಿನ್ನ ಗೆಲ್ಲುವ ವಿಶ್ವಾಸವ್ಯಕ್ತಪಡಿಸಿದ್ದರು. ಆದರೆ ಹೋದ ಸಲವೂ ಅವರು ಬೆಳ್ಳಿ ಪದಕ ಗಳಿಸಿದ್ದರು.

ಸಿಂಧುಗೆ ಅಭಿನಂದನೆಗಳ ಮಹಾಪೂರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com