ನಾನು ಈ ಗೆಲುವನ್ನು ನನ್ನ ತಾಯಿಗೆ ಅರ್ಪಿಸುತ್ತೇನೆ, ಇಂದು ಅವಳ ಜನ್ಮದಿನ; ಪಿ ವಿ ಸಿಂಧು 

ಭಾರತದ ನಂಬರ್ ಒನ್ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಇತಿಹಾಸ ಸೃಷ್ಟಿಸಿದ್ದಾರೆ.ಸ್ವಿಟ್ಜರ್ಲ್ಯಾಂಡ್ ನ ಬಾಸೆಲ್ ನಲ್ಲಿ ನಿನ್ನೆ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಜಪಾನ್ ನ ನೊಝೊಮಿ ಒಕುಹರಾ ಅವರನ್ನು 38 ನಿಮಿಷಗಳಲ್ಲಿ 21-7 21-7 ನೇರ ಸೆಟ್ ಗಳ ಅಂತರದಿಂದ ಸೋಲಿಸುವ ಮೂಲಕ ಬ್ಯಾಡ್ಮಿಂಟನ್ ನಲ್ಲಿ ವಿಶ್ವ ಚಾಂಪಿಯನ್ ಷಿಪ್ ನ್ನು ಮುಡಿಗೇರಿಸಿಕೊಂಡ ಮ

Published: 26th August 2019 09:11 AM  |   Last Updated: 26th August 2019 10:19 AM   |  A+A-


P V Sindhu

ಪಿ ವಿ ಸಿಂಧು

Posted By : Sumana Upadhyaya
Source : PTI

ಬಾಸೆಲ್ (ಸ್ವಿಟ್ಜರ್ಲ್ಯಾಂಡ್): ಭಾರತದ ನಂಬರ್ ಒನ್ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಇತಿಹಾಸ ಸೃಷ್ಟಿಸಿದ್ದಾರೆ.ಸ್ವಿಟ್ಜರ್ಲ್ಯಾಂಡ್ ನ ಬಾಸೆಲ್ ನಲ್ಲಿ ನಿನ್ನೆ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಜಪಾನ್ ನ ನೊಝೊಮಿ ಒಕುಹರಾ ಅವರನ್ನು 38 ನಿಮಿಷಗಳಲ್ಲಿ 21-7 21-7 ನೇರ ಸೆಟ್ ಗಳ ಅಂತರದಿಂದ ಸೋಲಿಸುವ ಮೂಲಕ ಬ್ಯಾಡ್ಮಿಂಟನ್ ನಲ್ಲಿ ವಿಶ್ವ ಚಾಂಪಿಯನ್ ಷಿಪ್ ನ್ನು ಮುಡಿಗೇರಿಸಿಕೊಂಡ ಮೊದಲ ಭಾರತೀಯ ಬ್ಯಾಡ್ಮಿಂಟನ್ ತಾರೆ ಎನಿಸಿಕೊಂಡಿದ್ದಾರೆ.


ಎರಡು ವರ್ಷಗಳ ಹಿಂದೆ ಗ್ಲಾಸ್ಗೊದಲ್ಲಿ ನಡೆದಿದ್ದ 110 ನಿಮಿಷಗಳ ಚಾಂಪಿಯನ್ ಷಿಪ್ ಪಂದ್ಯದಲ್ಲಿ ನೊಝೊಮಿ ಒಕುಹರಾ, ಸಿಂಧು ಅವರನ್ನು ಸೋಲಿಸಿ ಚಾಂಪಿಯನ್ ಕಿರೀಟ ಪಡೆದಿದ್ದರು. ನಿನ್ನೆ ಅದೇ ಸ್ಪರ್ಧಿ ವಿರುದ್ಧ ನಡೆದ ಅಂತಿಮ ರೋಚಕ ಹಣಾಹಣಿಯಲ್ಲಿ ಸಿಂಧು ಒಕುಹರಾ ಅವರನ್ನು ಸೋಲಿಸಿದ್ದಾರೆ.


ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿದ ಪಿ ವಿ ಸಿಂಧು ''ಕಳೆದ ಬಾರಿ ನಾನು ಅಂತಿಮ ಹಂತದಲ್ಲಿ ಸೋತಿದ್ದೆ. ಅದಕ್ಕಿಂತ ಹಿಂದಿನ ವರ್ಷ ಕೂಡ ಅಂತಿಮ ಪಂದ್ಯದಲ್ಲಿ ಸೋತಿದ್ದೆ. ಹೀಗಾಗಿ ನನಗೆ ಈ ಬಾರಿ ಇದು ಗೆಲ್ಲಲೇಬೇಕಾದ ಮಹತ್ವದ ಪಂದ್ಯವಾಗಿತ್ತು. ಕ್ರೀಡಾಂಗಣದಲ್ಲಿ ಸೇರಿದ ಜನಸ್ತೋಮ ನನಗೆ ನೀಡಿದ ಪ್ರೋತ್ಸಾಹಕ್ಕೆ ಧನ್ಯವಾದಗಳು. ನನ್ನ ದೇಶಕ್ಕೆ ಗೆಲುವು ತಂದದ್ದು ಭಾರತೀಯಳಾಗಿ ನನಗೆ ಬಹಳ ಹೆಮ್ಮೆಯಿದೆ ಎಂದು ಹೇಳಿದ್ದಾರೆ.


ಇದೇ ಸಂದರ್ಭದಲ್ಲಿ ಸಿಂಧು ತಮ್ಮ ತರಬೇತುದಾರರಾದ ಕಿಮ್ ಮತ್ತು ಗೋಪಿ ಚಂದ್ ಅವರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಹೇಳಿದ್ದಾರೆ. ಈ ಗೆಲುವು ನನ್ನ ತಾಯಿಗೆ ಅರ್ಪಣೆ, ಇಂದು ಅವರ ಹುಟ್ಟುಹಬ್ಬ, ಬರ್ತ್ ಡೆಗೆ ನಾನು ಅಮ್ಮನಿಗೆ ಏನಾದರೂ ಗಿಫ್ಟ್ ಕೊಡಬೇಕು ಎಂದುಕೊಂಡಿದ್ದೆ. ಇಂದು ಈ ಚಿನ್ನದ ಪದಕವನ್ನು ಕೊಡುತ್ತಿದ್ದೇನೆ, ಇಂದು ನಾನು ಈ ಸ್ಥಾನಕ್ಕೆ ಏರಲು ನನ್ನ ಪೋಷಕರು ಕಾರಣ ಎಂದು ಸಿಂಧು ಬಹಳ ಸಂತೋಷದಿಂದ ಹೇಳಿದರು.


ಸಿಂಧು ಆಟದ ಮೈಲಿಗಲ್ಲು: 24 ವರ್ಷದ ಪಿ ವಿ ಸಿಂಧು, ಈ ಹಿಂದೆ ಅಂತಿಮ ಸುತ್ತಿನಲ್ಲಿ ಚಿನ್ನದ ಪದಕ ಕೈತಪ್ಪಿ ಹೋಗಿ 2017 ಮತ್ತು 2018ರಲ್ಲಿ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದರು. ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಅಂತಿಮ ಸುತ್ತು ಪ್ರವೇಶಿಸಿ ಇದು ಅವರು ಗಳಿಸುತ್ತಿರುವ 5ನೇ ಪದಕ. 2013 ಮತ್ತು 2014ರಲ್ಲಿ ಕಂಚಿನ ಪದಕ ಗಳಿಸಿದ್ದರು. 2018ರ ಕಾಮನ್ ವೆಲ್ತ್ ಮತ್ತು ಏಷಿಯನ್ ಗೇಮ್ಸ್ ನಲ್ಲಿ ಸಿಂಧು ಬೆಳ್ಳಿಪದಕ ಗಳಿಸಿದ್ದರು.


ವಿಶ್ವ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪದಕ ಗಳಿಸಿದವರಲ್ಲಿ ಚೀನಾ ದೇಶದ ಆಟಗಾರ್ತಿ ಜ್ಹಾಂಗ್ ನಿಂಗ್ ಅವರಿಗೆ ಸಿಂಧು ಈಗ ಸರಿಸಮನಾಗಿದ್ದಾರೆ. ಅವರು ಕೂಡ 2001ರಿಂದ 2007ರವರೆಗೆ 1 ಚಿನ್ನ, ಎರಡು ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಗೆದ್ದಿದ್ದರು. 2018ರ ಕಾಮನ್ ವೆಲ್ತ್ ಮತ್ತು ಏಷಿಯನ್ ಗೇಮ್ಸ್ ನಲ್ಲಿ ಪಿ ವಿ ಸಿಂಧು ಬೆಳ್ಳಿಪದಕ ಗಳಿಸಿದ್ದರು.

ಭಾರತಕ್ಕೆ ಬ್ಯಾಡ್ಮಿಂಟನ್ ನ  ವಿಶ್ವಚಾಂಪಿಯನ್ ನಲ್ಲಿ ಮೊದಲ ಪ್ರಶಸ್ತಿ ತಂದುಕೊಟ್ಟಿದ್ದು ಪ್ರಕಾಶ್ ಪಡುಕೋಣೆ, ಅದು ಪುರುಷರ ಸಿಂಗಲ್ಸ್ ವಿಭಾಗದಲ್ಲಿ 1983ರಲ್ಲಿ ಕಂಚಿನ ಪದಕ ಗಳಿಸಿದ್ದರು. ನಂತರ ಸೈನಾ ನೆಹ್ವಾಲ್ 2015ರಲ್ಲಿ ಮತ್ತು 2017ರಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ತಂದುಕೊಟ್ಟಿದ್ದರು. 


ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 2011ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಬಿ ಸಾಯಿ ಪ್ರಣೀತ್ ಮೊನ್ನೆ ಶನಿವಾರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. 

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp