ಯು.ಎಸ್ ಓಪನ್: ಸುಮಿತ್ ಸಗಾಲ್ ಗೆ ಸೋಲು, ಫೆಡರರ್ ಗೆ ಜಯ

ವೃತ್ತಿ ಜೀವನದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯನ್ನು ಆಡಿದ ಭಾರತದ ಸುಮಿತ್ ನಗಾಲ್, ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ನಿರಾಸೆಯನ್ನು ಅನುಭವಿಸಿದ್ದು, ಮೊದಲ ಸುತ್ತಿನಿಂದ ಹೊರ ನಡೆದಿದ್ದಾರೆ. 

Published: 27th August 2019 04:46 PM  |   Last Updated: 29th August 2019 01:29 PM   |  A+A-


ಸಮಿತ್ ನಗಾಲ್

Posted By : Nagaraja AB
Source : UNI

ನ್ಯೂಯಾರ್ಕ್ : ವೃತ್ತಿ ಜೀವನದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯನ್ನು ಆಡಿದ ಭಾರತದ ಸುಮಿತ್ ನಗಾಲ್, ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ನಿರಾಸೆಯನ್ನು ಅನುಭವಿಸಿದ್ದು, ಮೊದಲ ಸುತ್ತಿನಿಂದ ಹೊರ ನಡೆದಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಫೆಡರರ್ 4-6, 6-1, 6-2, 6-4 ರಿಂದ ಸುಮಿತ್ ಅವರನ್ನು ಮಣಿಸಿದರು. 


ಮೊದಲ ಸೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸುಮಿತ್ ಗೆದ್ದರು, ಆದರೆ ಮುಂದಿನ ಮೂರು ಸೆಟ್ ಗಳಲ್ಲಿ ಫೆಡರರ್ ಪ್ರಾಬಲ್ಯ ಮೆರೆದರು. ಪಂದ್ಯದಲ್ಲಿ ಸುಮಿತ್ ಉತ್ತಮವಾಗಿ ಸರ್ವ್ ಗಳನ್ನು ಮಾಡಿ ಗಮನ ಸೆಳೆದರು. ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಪ್ರಧಾನ ಘಟ್ಟಕ್ಕೆ ಅರ್ಹತೆ ಪಡೆದಿದ್ದ ಸುಮಿತ್, ನಿರಾಸೆ ಅನುಭವಿಸಿದರು. ಫೆಡರರ್ ಅವರೊಂದಿಗೆ ಆಡಿದ ಅನುಭವ ಅವರ ವೃತ್ತಿ ಜೀವನಕ್ಕೆ ಚೇತರಿಕೆ ನೀಡಲಿದೆ. ನಗಾಲ್ ಮೊದಲ ಸುತ್ತಿನಲ್ಲಿ ಸೋತರೂ, ಭಾರತೀಯ ಟೆನಿಸ್ ಅಭಿಮಾನಿಗಳ ಮನ ಗೆದ್ದಿದ್ದಾರೆ. 

ಮೊದಲ ಗೇಮ್ ನಲ್ಲಿ ಫೆಡರರ್ ಅವರು 40-15 ರಿಂದ ಮುನ್ನಡೆ ಸಾಧಿಸಿದ್ದರು. ಈ ವೇಳೆ ನಗಾಲ್ ಭರ್ಜರಿ ಪ್ರದರ್ಶನ ನೀಡಿ 40-40 ಸಮಬಲ ಸಾಧಿಸಿದರು. ಅಲ್ಲದೆ, ತಮ್ಮ ಸರ್ವ್ ಉಳಿಸಿಕೊಂಡು 1-0 ಮುನ್ನಡೆ ಸಾಧಿಸಿದರು. ಎರಡನೇ ಗೇಮ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ ನಗಾಲ್ 2-0 ಮುನ್ನಡೆ ಸಾಧಿಸಿದರು. 

ಫೆಡರರ್ ಪುಟಿದೇಳುವ ಮೂಲಕ ಖಾತೆ ತೆರೆದರು. ನಗಾಲ್ ಮತ್ತೊಂದು ಗೇಮ್ ಕೈ ಚೆಲ್ಲಿದರು. ಉತ್ತಮ ಸರ್ವ್ ಗಳನ್ನು ಮಾಡಿದ ನಗಾಲ್ ಪಂದ್ಯದಲ್ಲಿ ಪುಟಿದೆದ್ದರು. ಶ್ರೇಷ್ಠ ಆಟವಾಡಿದ ನಗಾಲ್ ಮೊದಲ ಸೆಟ್ ಗೆದ್ದು ಕೊಂಡರು. ಎರಡನೇ ಸೆಟ್ ನಲ್ಲಿ ಕೊಂಚ ಹಿನ್ನಡೆ ಅನುಭವಿಸಿದ ನಗಾಲ್, ಅಂಕ ಬೇಟೆಯಲ್ಲಿ ಹಿಂದೆ ಬಿದ್ದರು. ನಂತರದ ಎರಡೂ ಸೆಟ್ ಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಸ್ವಿಸ್ ಆಟಗಾರ ಜಯ ಸಾಧಿಸಿದರು.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp