ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ: ಸೌರಭ್ ವರ್ಮಾ ರನ್ನರ್ ಅಪ್

 ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಸೌರಭ್ ವರ್ಮಾ ಅವರು ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ನಲ್ಲಿ ನಿರಾಸೆ ಕಂಡಿದ್ದಾರೆ.

Published: 01st December 2019 07:23 PM  |   Last Updated: 01st December 2019 07:23 PM   |  A+A-


ಸೌರಭ್ ವರ್ಮಾ

Posted By : Raghavendra Adiga
Source : UNI

ಲಖನೌ:  ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಸೌರಭ್ ವರ್ಮಾ ಅವರು ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ನಲ್ಲಿ ನಿರಾಸೆ ಕಂಡಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸೌರಭ್ 15-21, 17-21 ರಿಂದ ಚೈನಿಸ್ ತೇಪಿಯ ವಾಂಗ್ ಜು ವಿ ವಿರುದ್ಧ 48 ನಿಮಿಷಗಳ ಸೆಣಸಾಟದಲ್ಲಿ ಸೋಲು ಕಂಡರು. ಇದು ಸೌರಭ್ ವಿರುದ್ಧ ವಾಂಗ್ ಜು ದಾಖಲಿಸಿದ ಎರಡನೇ ಗೆಲುವಾಗಿದೆ

 ಈ ವರ್ಷ ಹೈದರಾಬಾದ್ ಮತ್ತು ವಿಯೆಟ್ನಾಂನಲ್ಲಿ ಎರಡು ಬಿಡಬ್ಲ್ಯೂಎಫ್ ಸೂಪರ್ 100 ಪ್ರಶಸ್ತಿಗಳನ್ನು ಗೆದ್ದು ಸಾಧನೆ ಮೆರೆದಿದ್ದ ಭಾರತೀಯ ಆಟಗಾರ ಈ ಪಂದ್ಯಾವಳಿಯ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಇದಕ್ಕೆ ಮುನ್ನ ಸೆಮಿಫೈನಲ್ಸ್ ನಲ್ಲಿ  ಕೊರಿಯಾದ ಎದುರಾಳಿ ಹಿಯೋ ಕ್ವಾಂಗ್ ಹೀ ವಿರುದ್ಧ 21-17, 16-21, 21-18 ಅಂತರದಲ್ಲಿ ಜಯ ದಾಖಲಿಸಿದ ನಂತರ ಫೈನಲ್ಸ್ ತಲುಪಿದ್ದ ಸೌರಭ್ ಪಂದ್ಯಾವಳಿಯ ಈ ಹಂತಕ್ಕೆ ತಲುಪಿದ ಏಕೈಕ ಭಾರತೀಯ ಶೆಟ್ಲರ್ ಆಗಿದ್ದರು. ಭಾರತದ ಪರ ಪಿವಿ ಸಿಂಧೂ, ಸೈನಾ ನೆಹ್ವಾಲ್ ಆಟದಿಂದ ದೂರ ಉಳಿದರೆ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ಸ್ ಹಂತದಲ್ಲಿ ಸೋತು ನಿರ್ಗಮಿಸಿದ್ದರು./

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp