ಆರನೇ ಬಾರಿಗೆ  ಮೆಸ್ಸಿ ಮುಡಿಗೆ 'ಬ್ಯಾಲನ್ ಡಿ ಓರ್' ಗರಿ

ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ವೃತ್ತಿ ಜೀವನದ ಆರನೇ ಬಾರಿ 'ಬ್ಯಾಲನ್ ಡಿ ಓರ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Published: 03rd December 2019 12:21 PM  |   Last Updated: 03rd December 2019 12:21 PM   |  A+A-


LionelMessi1

ಲಿಯೊನೆಲ್ ಮೆಸ್ಸಿ

Posted By : Nagaraja AB
Source : UNI

ಪ್ಯಾರಿಸ್ :  ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ವೃತ್ತಿ ಜೀವನದ ಆರನೇ ಬಾರಿ 'ಬ್ಯಾಲನ್ ಡಿ ಓರ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಲಿವರ್ಪೂಲ್ ನಿಂದ ನಾಮ ನಿರ್ದೇಶಿತಗೊಂಡಿದ್ದ ನಾಲ್ವರನ್ನು ಹಿಂದಿಕ್ಕಿ ಬಾರ್ಸಿಲೋನಾ ಮುಂಚೂಣಿ ಆಟಗಾರ ಈ ಗೌರವ ಸ್ವೀಕರಿಸಿದರು. ಇವರ ನಾಯಕತ್ವದಲ್ಲಿ ಬಾರ್ಸಿಲೋನಾ ತಂಡ ಲಾ ಲೀಗಾ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಆದರೆ, ಬ್ರೆಜಿಲ್ ನಲ್ಲಿ ನಡೆದಿದ್ದ ಕೊಪಾ ಅಮೆರಿಕಾ ಟೂರ್ನಿಯಲ್ಲಿ ಅರ್ಜೆಂಟೀನಾ ಮೂರನೇ ಸ್ಥಾನ ಪಡೆದಿತ್ತು.

ವರ್ಗಿಲ್ ವಾನ್ ರನ್ನರ್ ಅಪ್ ಹಾಗೂ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಮೂರನೇ ಸ್ಥಾನ ಪಡೆದರು. ರೊನಾಲ್ಡೊ ವೃತ್ತಿ ಜೀವನದಲ್ಲಿ ಐದು ಬಾರಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 

ಮೆಸ್ಸಿ ಈ ಹಿಂದೆ 2009, 2010, 2011, 2012 ಹಾಗೂ 2015ರಲ್ಲಿ ಬ್ಯಾಲನ್ ಡಿ ಓರ್ ಗೆದ್ದಿದ್ದರು.

Stay up to date on all the latest ಕ್ರೀಡೆ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp