ಎಫ್‌ಐಎಚ್ ವರ್ಷದ ಆಟಗಾರ ಪ್ರಶಸ್ತಿಗೆ ಮನ್‌ಪ್ರೀತ್ ಸಿಂಗ್ ನಾಮನಿರ್ದೇಶನ

ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ(ಎಫ್ಐಎಚ್) ನೀಡುವ ‘ವರ್ಷದ ಆಟಗಾರ’ ಪ್ರಶಸ್ತಿಗೆ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವನ್ನು ಮುನ್ನಡೆಸುವ ನಾಯಕ ಮನ್‌ಪ್ರೀತ್ ಸಿಂಗ್ ನಾಮ ನಿರ್ದೇಶನಗೊಂಡಿದ್ದಾರೆ.
ಮನ್‌ಪ್ರೀತ್‌ ಸಿಂಗ್
ಮನ್‌ಪ್ರೀತ್‌ ಸಿಂಗ್

ಲಾಸನ್ನೆ: ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ(ಎಫ್ಐಎಚ್) ನೀಡುವ ‘ವರ್ಷದ ಆಟಗಾರ’ ಪ್ರಶಸ್ತಿಗೆ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವನ್ನು ಮುನ್ನಡೆಸುವ ನಾಯಕ ಮನ್‌ಪ್ರೀತ್ ಸಿಂಗ್ ನಾಮ ನಿರ್ದೇಶನಗೊಂಡಿದ್ದಾರೆ.

ವಿವೇಕ್ ಪ್ರಸಾದ್ ಹಾಗೂ ಲಾಲ್ರೆಸಿಯಾಮಿ ಅವರನ್ನು ಕೂಡ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ‘ವರ್ಷದ ಉದಯೋನ್ಮುಖ ಆಟಗಾರ/ಆಟಗಾರ್ತಿ’ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

27ರ ಪ್ರಾಯದ ಮನ್‌ಪ್ರೀತ್ ಸಿಂಗ್ 242 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ತಂಡ ಕಳೆದ ತಿಂಗಳು ರಷ್ಯಾ ವಿರುದ್ಧ 11-3 ಅಂತರದಲ್ಲಿ ಗೆದ್ದು ಟೋಕಿಯೊ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com