ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‌ಗೆ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಮುಕುಟ

 ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲಿಯಾಂಗ್ ಜುನ್ ಹಾವ್ ಅವರನ್ನು ಮಣಿಸಿ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜರ್ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆ ಮೂಲಕ ಭಾರತದ ಆಟಗಾರನಿಗೆ ಪ್ರಸಕ್ತ ಆವೃತ್ತಿಯ ಐದನೇ ಕಿರೀಟ ಇದಾಯಿತು.

Published: 15th December 2019 05:17 PM  |   Last Updated: 15th December 2019 05:17 PM   |  A+A-


ಲಕ್ಷ್ಯ ಸೇನ್

Posted By : Raghavendra Adiga
Source : UNI

ಢಾಕಾ:  ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲಿಯಾಂಗ್ ಜುನ್ ಹಾವ್ ಅವರನ್ನು ಮಣಿಸಿ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜರ್ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆ ಮೂಲಕ ಭಾರತದ ಆಟಗಾರನಿಗೆ ಪ್ರಸಕ್ತ ಆವೃತ್ತಿಯ ಐದನೇ ಕಿರೀಟ ಇದಾಯಿತು.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ 18ರ ಪ್ರಾಯದ ಲಕ್ಷ್ಯ ಸೇನ್ ಅವರು 22-20, 21-18 ಅಂತರದಲ್ಲಿ ನೇರ ಗೇಮ್‌ಗಳಿಂದ ಮಲೇಷ್ಯಾ ಆಟಗಾರನ ವಿರುದ್ಧ ಗೆಲುವಿನ ನಗೆ ಬೀರಿದರು. ಕಳೆದ ಏಳು ಟೂರ್ನಿಗಳಲ್ಲಿ ಐದನೇ ಪ್ರಶಸ್ತಿ ಇದಾಯಿತು.

‘‘ಬಾಂಗ್ಲಾಾದೇಶದಲ್ಲಿ ಪ್ರಸಕ್ತ ಆವೃತ್ತಿಯ ಕೊನೆಯ ಟೂರ್ನಿಯಲ್ಲಿ ಐದನೇ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವುದಕ್ಕೆೆ ತುಂಬಾ ಖುಷಿಯಾಗುತ್ತಿದೆ. ಮುಂದಿನ ವರ್ಷ ಇದೇ ಲಯವನ್ನು ಮುಂದುವರಿಸುವ ವಿಶ್ವಾಸ ಹೊಂದಿದ್ದೇನೆ. ಎಲ್ಲ ಪ್ರಾಯೋಜಕರಿಗೂ ಧನ್ಯವಾದಗಳನ್ನು ಅರ್ಪಿಸಲು ಇಷ್ಟಪಡುತ್ತೇನೆ,’’ ಎಂದು ಲಕ್ಷ್ಯ ಸೇನ್ ಟ್ವೀಟ್ ಮಾಡಿದ್ದಾರೆ. 

Stay up to date on all the latest ಕ್ರೀಡೆ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp