ದೀಪಕ್ ಪುನಿಯಾ 'ವರ್ಷದ ಜೂನಿಯರ್ ಫ್ರೀಸ್ಟೈಲ್ ಕುಸ್ತಿಪಟು': ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಘೋಷಣೆ

ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ದೀಪಕ್ ಪುನಿಯಾ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಸಂಸ್ಥೆ ನೀಡುವ ವಿಶ್ವ ಶ್ರೇಷ್ಠ ಜೂನಿಯರ್ ಫ್ರೀಸ್ಟೈಲ್ ಕುಸ್ತಿಪಟು ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.
ದೀಪಕ್ ಪುನಿಯಾ
ದೀಪಕ್ ಪುನಿಯಾ

ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ದೀಪಕ್ ಪುನಿಯಾ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಸಂಸ್ಥೆ ನೀಡುವ ವಿಶ್ವ ಶ್ರೇಷ್ಠ ಜೂನಿಯರ್ ಫ್ರೀಸ್ಟೈಲ್ ಕುಸ್ತಿಪಟು ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ಈ ಮೂಲಕ18 ವರ್ಷದ ಬಳಿಕ  ಜೂನಿಯರ್ ವಿಶ್ವ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ದೀಪಕ್ ಪುನಿಯಾ ದಾಖಲೆಗೆ ಇನೊಂದು ಹೊಸ ಗರಿ ಸೇರ್ಪಡೆಯಾದಂತಾಗಿದೆ.

ನಾನು ತುಂಬಾ ಸಂತೋಷದಿಂದಿದ್ದೇನೆ. ಪ್ರಪಂಚದ ಎಲ್ಲ ಕುಸ್ತಿಪಟುಗಳನ್ನು ಹಿಂದಿಕ್ಕಿ ಈ ಗೌರವಕ್ಕೆ ಪಾತ್ರವಾಗಿರುವುದು ನನಗೆ ದೊಡ್ಡ ಗೌರವವಾಗಿದೆ. ಇದು ನನ್ನ ಆಟದಲ್ಲಿನ ಸುಧಾರಣೆಯನ್ನು ಮಾಡಿಕೊಳ್ಳುವುದಕ್ಕೆ ಇನ್ನಷ್ಟು ಉತ್ತಮ ಪ್ರದರ್ಶನ ನಿಡಲು  ನನಗೆ ಸ್ಫೂರ್ತಿಯ ದೊಡ್ಡ ಮೂಲವಾಗಿದೆ ಎಂದು ಪುನಿಯಾ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ನೂರ್-ಸುಲ್ತಾನ್‌ನಲ್ಲಿ ನಡೆದಿದ್ದ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸಿದ ಏಕೈಕ ಭಾರತೀಯ ಕುಸ್ತಿಪಟುವಾಗಿದ್ದ ದೀಪಕ್ ಪುನಿಯಾ ಫೈನಲ್‌ನಲ್ಲಿ ಇರಾನ್‌ನ ಹಸನ್ ಯಾಜ್ದಾನಿ ವಿರುದ್ಧ ಗೆಲ್ಲಲು ಅವರ ಗಾಯದ ಸಮಸ್ಯೆ ಅಡ್ಡಿಯಾಗಿತ್ತು. ಆದರೆ ಪುನಿಯಾ 86 ಕೆಜಿ ವಿಭಾಗದಲ್ಲಿ ಯುಡಬ್ಲ್ಯುಡಬ್ಲ್ಯು ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದಲ್ಲದೆ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಸಹ ದೀಪಕ್ ಕಂಚಿನ ಪದಕ ವಿಜೇತರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com