ಹಿನ್ನೋಟ 2019: ಶೂಟಿಂಗ್ ನಿಂದ ಬಾಕ್ಸಿಂಗ್ ವರೆಗೆ ಜಾಗತಿಕ ಕ್ರೀಡಾಕ್ಷೇತ್ರದಲ್ಲೊಂದು ಸುತ್ತು
2019ರ ಈ ವರ್ಷ ಜಾಗತಿಕ ಕ್ರೀಡಾಕ್ಷೇತ್ರ ಸಾಕಷ್ಟು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ವರ್ಷ ಭಾರತೀಯ ಕ್ರೀಡಾಪಟುಗಳು ಶೂಟಿಂಗ್ ವಿಶ್ವಕಪ್, ದಕ್ಷಿಣ ಏಷ್ಯಾ ಕ್ರೀಡಾಕೂಟ ಸೇರಿ ಅನೇಕ ಕ್ರೀಡಾಕುತಗಳಲ್ಲಿ ಬಂಗಾರದ ಪದಕ ಸಾಧನೆ ಮಾಡಿದ್ದಾರೆ. ಮನು ಭಾಕರ್, ಸೈನಾ ನೆಹ್ವಾಲ್, ಪಿವಿ ಸಿಂಧೂ, ಲಕ್ಷ್ಯ ಸೇನ್, ಸುಮಿತ್ ನಗಾಲ್, ದೀಪಕ್ ಪುನಿಯಾ ಸೇರಿ ಅನೇಕ ಪ್ರೈಭೆಗಳು ತಮ್ಮ ಕ
Published: 29th December 2019 02:18 PM | Last Updated: 31st December 2019 02:31 PM | A+A A-

ಹಿನ್ನೋಟ 2019: ಶೂಟಿಂಗ್ ನಿಂದ ಬಾಕ್ಸಿಂಗ್ ವರೆಗೆ ಜಾಗತಿಕ ಕ್ರೀಡಾಕ್ಷೇತ್ರದಲ್ಲೊಂದು ಸುತ್ತು
2019ರ ಈ ವರ್ಷ ಜಾಗತಿಕ ಕ್ರೀಡಾಕ್ಷೇತ್ರ ಸಾಕಷ್ಟು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ವರ್ಷ ಭಾರತೀಯ ಕ್ರೀಡಾಪಟುಗಳು ಶೂಟಿಂಗ್ ವಿಶ್ವಕಪ್, ದಕ್ಷಿಣ ಏಷ್ಯಾ ಕ್ರೀಡಾಕೂಟ ಸೇರಿ ಅನೇಕ ಕ್ರೀಡಾಕುತಗಳಲ್ಲಿ ಬಂಗಾರದ ಪದಕ ಸಾಧನೆ ಮಾಡಿದ್ದಾರೆ. ಮನು ಭಾಕರ್, ಸೈನಾ ನೆಹ್ವಾಲ್, ಪಿವಿ ಸಿಂಧೂ, ಲಕ್ಷ್ಯ ಸೇನ್, ಸುಮಿತ್ ನಗಾಲ್, ದೀಪಕ್ ಪುನಿಯಾ ಸೇರಿ ಅನೇಕ ಪ್ರೈಭೆಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗ ಕಂಡ ವರ್ಷವಿದಾಗಿತ್ತು. ಇನ್ನೇನು ಹೊಸ ವರ್ಷ ಬರಲು ಬೆರಳೆಣಿಕೆಯ ದಿನಗಳು ಬಾಕಿ ಇರುವಾಗ ಕಳೆದ ದಿನಗಳನ್ನೊಮ್ಮೆ ಮೆಲುಕು ಹಾಕುವ ಪ್ರಯತ್ನ ಇಲ್ಲಿದೆ.
ಮೂರು ಹಾಪ್‌ಮನ್ ಕಪ್ ಗೆದ್ದ ರೋಜರ್ ಫೆಡರರ್
ಪರ್ತ್‌ನಲ್ಲಿ ನಡೆದ ಮಿಶ್ರ ತಂಡಗಳ ಹಾಪ್‌ಮನ್ ಕಪ್ ಟ್ರೋಫಿ ಪಂದ್ಯಾವಳಿಯಲ್ಲಿ ಸ್ವಿಟ್ಜರ್ಲೆಂಡ್‌ನ್ನು 2-1 ಗೋಲುಗಳ ಅಂತರದಿಂದ ಮುನ್ನಡೆಸಿದ ನಂತರ ರೋಜರ್ ಫೆಡರರ್ ಹಾಪ್‌ಮನ್ ಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರನಾಗಿ ಹೊರಹೊಮ್ಮಿದ್ದರು. ಫೆಡರರ್ ಮೂರು ಹಾಪ್‌ಮನ್ ಕಪ್ ಗಳನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು
ವಿಶ್ವದ ಎರಡನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಗುಕೇಶ್
ತಮಿಳುನಾಡು ಮೂಲದ ಡಿ ಗುಕೇಶ್ ವಿಶ್ವದ ಎರಡನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗುವ ಮೂಲಕ ಭಾರತದ ಕೀರ್ತಿಯನ್ನು ಬೆಳಗಿಸಿದ್ದಾರೆ. 12 ವರ್ಷ, ಏಳು ತಿಂಗಳು ಮತ್ತು 17 ದಿನಗಳ ಗುಕೇಶ್ ಈ ಸಾಧನೆ ಮಾಡಿ ಇಂತಹಾ ಅಪೂರ್ವ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೆಹಲಿಯಲ್ಲಿ ನಡೆದ 7 ನೇ ದೆಹಲಿ ಅಂತರರಾಷ್ಟ್ರೀಯ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಒಂಬತ್ತನೇ ಸುತ್ತಿನಲ್ಲಿಡಿ ಕೆ ಶರ್ಮಾ ಅವರನ್ನು ಸೋಲಿಸಿದ ನಂತರ ಅವರು ತಮ್ಮ ಮೂರನೇ ಮತ್ತು ಅಂತಿಮ ಜಿಎಂನಾರ್ಮ್ ಅನ್ನು ಸಾಧಿಸಿದ್ದರು. ಒಟ್ತಾರೆ ಭಾರತ ಚೆಸ್ ಇತಿಹಾಸದಲ್ಲಿ ಗುಕೇಶ್ ಭಾರತದ 59 ನೇ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ.
ನವೋಮಿ ಒಸಾಕಾಗೆ ಆಸ್ಟ್ರೇಲಿಯ ಓಪನ್ ಕಿರೀಟ
ಮಹಿಳೆಯರ ಫೈನಲ್‌ನಲ್ಲಿ ಜಪಾನ್‌ನ ನವೋಮಿ ಒಸಾಕಾ 7-6 (2), 5-7, 6-4 ಸೆಟ್‌ಗಳಿಂದ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು ಮಣಿಸಿ ವರ್ಷದ ಮೊದಲ ಗ್ರ್ಯಾಂಡ್ ಸ್ಲಾಂ ಆಗಿರುವ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು.
ಜೊಕೊವಿಕ್ ಗೆ 15 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ
ಸ್ಪ್ಯಾನಿಷ್ ಟೆನಿಸ್ ಪಟು ರಾಫೆಲ್ ನಡಾಲ್ ವಿರುದ್ಧ 6-3, 6-2, 6-3 ಸೆಟ್‌ಗಳಿಂದ ಸೆರ್ಬಿಯಾದ ನೊವಾಕ್ ಜೊಕೊವಿಕ್ ಜಯಗಳಿಸುವುದರೊಡನೆ ತಮ್ಮ 7 ನೇ ಆಸ್ಟ್ರೇಲಿಯನ್ ಓಪನ್ ಮತ್ತು 15 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಇಂಡೋನೇಷ್ಯಾ ಮಾಸ್ಟರ್ಸ್ ಗೆದ್ದ ಸೈನಾ ನೆಹ್ವಾ;ಲ್
ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್ 500 ಪಂದ್ಯಾವಳಿಯಲ್ಲಿ ವಿಶ್ವದ ಒಂಬತ್ತನೇ ಕ್ರಮಾಂಕದ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದರು. ಇಂಡೋನೇಷ್ಯಾ ಮಾಸ್ಟರ್ಸ್‌ನಲ್ಲಿ ಎರಡು ವರ್ಷಗಳಲ್ಲಿ ಸೈನಾ ಗೆದ್ದ ಮೊದಲ ಪ್ರಶಸ್ತಿ ಇದಾಗಿತ್ತು. ಕೆರೊಲಿನಾ ಮರಿನ್ ಆಟದ ಸಮಯದಲ್ಲಿ ಮೊಣಕಾಲಿಗೆ ಗಾಯವಾದ ನಂತರ ಪಂದ್ಯದಿಂದ ಹಿಂದೆ ಸರಿಯಬೇಕಾಗಿ ಬಂದಿತು. ಮರಿನ್ 10-4ರಲ್ಲಿ ಮುನ್ನಡೆ ಸಾಧಿಸಿದ್ದಾಗ ಗಾಯಗೊಂಡು ಪಂದ್ಯದಿಂದ ದೂರ ಸರಿದಿದ್ದು ಸೈನಾರನ್ನು ವಿಜೇತರೆಂದು ಘೋಷಿಸಲಾಗಿತ್ತು.
ಸಿಂಧು ಮಣಿಸಿದ ಸೈನಾ ಚಾಂಪಿಯನ್
ಗುವಾಹಟಿಯಲ್ಲಿ ನಡೆದ 83 ನೇ ಯೋನೆಕ್ಸ್ ಸನ್‌ರೈಸ್ ಸೀನಿಯರ್ ಬ್ಯಾಡ್ಮಿಂಟನ್ ನ್ಯಾಷನಲ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಕಿರೀಟವನ್ನು ಉಳಿಸಿಕೊಳ್ಳಲು ಸೈನಾ ನೆಹ್ವಾಲ್ ಒಲಂಪಿಕ್ ಬೆಳ್ಳಿ ವಿಜೇತೆ ಪಿ ವಿ ಸಿಂಧು ಅವರನ್ನು 21-18 21-15 ನೇರ ಸೆಟ್ ಗಳಲ್ಲಿ ಸೋಲಿಸಿದ್ದರು.
ಜೊಕೊವಿಕ್ ಗೆ ಲಾರೆಸ್ ವಿಶ್ವ ಕ್ರೀಡಾಪಟು ಪ್ರಶಸ್ತಿ
ಯುಎಸ್ ಓಪನ್ 2018 ಮತ್ತು ಆಸ್ಟ್ರೇಲಿಯನ್ ಓಪನ್ 2019 ಎರಡರಲ್ಲೂ ಜಯ ಸಾಧಿಸಿದ ನಂತರ ಸೆರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಅವರು ವರ್ಷದ ಪ್ರತಿಷ್ಠಿತ ಲಾರೆಸ್ ವಿಶ್ವ ಕ್ರೀಡಾಪಟು ಪ್ರಶಸ್ತಿ (Laureus World Sportsman of the Year)ಯನ್ನು ಗೆದ್ದಿದ್ದಾರೆ ನಾಲ್ಕನೇ ಬಾರಿ ಪ್ರಶಸ್ತಿ ಪಡೆಯುವ ಮೂಲಕ ಜಾಗತಿಕ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ದಾಖಲೆ ಸರಿಗಟ್ಟಿದ್ದಾರೆ.
ಚಿನ್ನದೊಡನೆ ಒಲಂಪಿಕ್ ಕೋಟಾ ಗಿಟ್ಟಿಸಿದ ಸೌರಭ್ ಚೌಧರಿ
ನವದೆಹಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತದ ಶೂಟರ್ ಸೌರಭ್ ಚೌಧರಿ 10 ಮೀಟರ್ ಏರ್ ಪಿಸ್ತೂಲ್ ಚಿನ್ನ ಗೆಲ್ಲುವ ಮೂಲಕ ಟೋಕಿಯೊ ಒಲಿಂಪಿಕ್ಸ್ ಕೋಟಾ ಪಡೆದರು. ಅವರು 245.0 ಅಂಕಗಳನ್ನು ಗಳಿಸಿ ಚಿನ್ನದ ಪದಕ ಗೆದ್ದರು
ಅವಿನಾಶ್ ಸೇಬಲ್ ರಾಷ್ಟ್ರೀಯ ದಾಖಲೆ
23 ನೇ ಫೆಡರೇಶನ್ ಕಪ್‌ನಲ್ಲಿ ನಡೆದ 3000 ಮೀಟರ್ ಪುರುಷರ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಭಾರತೀಯ ಅಥ್ಲೀಟ್ ಅವಿನಾಶ್ ಸೇಬಲ್ ರಾಷ್ಟ್ರೀಯ ದಾಖಲೆಯನ್ನು ಮುರಿದು ದೋಹಾದಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಿದರು. 25 ವರ್ಷದ ಸೇಬಲ್ ಅವರು 8.28.94 ಸಮಯದಲ್ಲಿ ಗುರಿ ತಲುಪಿದ್ದರು. ವನೇಶ್ವರದಲ್ಲಿ ಕೇವಲ ಆರು ತಿಂಗಳ ಹಿಂದೆ ಅವರು ದಾಖಲಿಸಿದ್ದ 8.29.80 ರ ರಾಷ್ಟ್ರೀಯ ದಾಖಲೆಯನ್ನು ಇದೀಗ ಅವರು ಅಳಿಸಿ ಹಾಕಿದ್ದರು.
ಒಲಿಂಪಿಕ್ಸ್ ಬೇಸಿಗೆ ಕ್ರೀಡಾಕೂಟದಲ್ಲಿ ಮಿಂಚಿದ ಭಾರತ
ಮಾರ್ಚ್ 14 ರಿಂದ 21 ರವರೆಗೆ ಯುಎಇಯ ಅಬುಧಾಬಿಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್ ವಿಶ್ವ ಬೇಸಿಗೆ ಕ್ರೀಡಾಕೂಟದಲ್ಲಿ 85 ಚಿನ್ನ ಸೇರಿದಂತೆ 368 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿತು 284 ಕ್ರೀಡಾಪಟುಗಳ ಭಾರತೀಯ ತಂಡ ಈ ಕ್ರೀಡಾಕೂಟದಲ್ಲಿ 85 ಚಿನ್ನ, 154 ಬೆಳ್ಳಿ ಮತ್ತು 129 ಕಂಚಿನ ಪದಕಗಳನ್ನು ಗೆದ್ದಿತ್ತು.
ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 25 ಪದಕ
12 ನೇ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನ ಅಂತಿಮ ದಿನದಂದು ಭಾರತೀಯ ಶೂಟರ್‌ಗಳು ಅರ್ಧ ಡಜನ್ ಚಿನ್ನದ ಪದಕಗಳನ್ನು ಗಳಿಸಿ ತಮ್ಮ ಪ್ರಾಬಲ್ಯ ಮೆರೆದಿದ್ದರು. ತೈಪೆಯ ಟಾಯೋವಾನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತ 16 ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಸೇರಿದಂತೆ 25 ಪದಕ ಗೆದ್ದಿತು.
ಟೈಗರ್ ವುಡ್ಸ್ ಗೆ ಪ್ರಶಸ್ತಿ
ಗಾಲ್ಫ್ ಆಟಗಾರ ಟೈಗರ್ ವುಡ್ಸ್ ತನ್ನ ಐದನೇ ಮಾಸ್ಟರ್ಸ್ ಮತ್ತು 15ನೇ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಬೆನ್ನುನೋವಿನ ಸಮಸ್ಯೆಯಿಂದ ಹೊರಬಂದ ನಂತರ ಅವರು ಬರೋಬ್ಬರಿ 11 ವರ್ಷಗಳ ಬಳಿಕ ಪ್ರಮುಖ ಪ್ರಶಸ್ತಿಯೊಂದನ್ನು ಗೆದ್ದಿದ್ದಾರೆ. ಅಲ್ಲದೆ ಯುಎಸ್ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಈ ಬಾರಿಝೋಜೋ ಚಾಂಪಿಯನ್‌ಶಿಪ್ 2019 ಅನ್ನು ಮೂರು ಸ್ಟ್ರೋಕ್‌ಗಳಿಂದ ಗೆದ್ದುಕೊಂಡರು
ಪಂಕಜ್ ಅಡ್ವಾಣಿಗೆ ಜಯ
ಬೆಂಗಳೂರಿನಲ್ಲಿ ನಡೆದ 2019 ರ ಏಷ್ಯನ್ ಸ್ನೂಕರ್ ಟೂರ್ ಉದ್ಘಾಟನಾ ಸರಣಿಯಲ್ಲಿ ಭಾರತದ ಖ್ಯಾತ ಕ್ರೀಡಾತಾರೆ ಪಂಕಜ್ ಅಡ್ವಾಣಿ ಇರಾನ್‌ನ ಎಹ್ಸಾನ್ ಹೆಡಾರಿ ನೆಜಾದ್ ಅವರನ್ನು 6-4ರಿಂದ ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಸಲಿಂಗಿ ಎಂದು ಘೋಷಿಸಿಕೊಂಡ ದ್ಯುತಿ ಚಂದ್
ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಅತಿ ವೇಗದ ಓಟಗಾರ್ತಿಯರಲ್ಲಿ ಒಬ್ಬರಾದ ದ್ಯುತಿ ಚಂದ್ ತಾನೊಬ್ಬ ಸಲಿಂಗಿ ಎಂದು ಘೋಷಿಸಿದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡರು ದ್ಯುತಿ ಒರಿಸ್ಸಾದ ತನ್ನ ಸ್ವಂತ ಊರಾದ ಚಾಕಾ ಗೋಪಾಲಪುರದ ಹುಡುಗಿಯ ಜೊತೆ ಸಂಬಂಧ ಹೊಂದಿದ್ದಾಗಿ ಬಹಿರಂಗಪಡಿಸಿದ್ದರು.
ನಡಾಲ್ ಗೆ ಇಟಾಲಿಯನ್ ಓಪನ್ ಪ್ರಶಸ್ತಿ
ಸ್ಪ್ಯಾನಿಷ್ ಟೆನಿಸ್ ಆಟಗಾರ ರಾಫೆಲ್ ನಡಾಲ್ 6-0, 4-6, 6-1 ಸೆಟ್‌ಗಳಿಂದ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿ ಒಂಬತ್ತನೇ ಇಟಾಲಿಯನ್ ಓಪನ್ ಪ್ರಶಸ್ತಿ ಮತ್ತು ತಮ್ಮ ವೃತ್ತಿಜೀವನದ ದಾಖಲೆಯ 34 ನೇ ಮಾಸ್ಟರ್ಸ್ ಕಿರೀಟವನ್ನು ಗೆದ್ದರು
ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕುಬಿದ್ದ ಗೋಮತಿ
ಏಪ್ರಿಲ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 800 ಮೀಟರ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಗೋಮತಿ ಮಾರಿಮುತ್ತು, ನಿಷೇಧಿತ ಔಷಧಿ ಸೇವನೆ ಪರೀಕ್ಷೆಯಲ್ಲಿ (ಡೋಪಿಂಗ್) ಅನುತ್ತೀರ್ಣರಾಗಿದ್ದರು. ಹಾಗಾಗಿ ಅವರನ್ನು ತಾತ್ಕಾಲಿಕ ಅಮಾನತಿನಲ್ಲಿ ಇಡಲಾಗಿದೆ.ತಮಿಳುನಾಡು ಮೂಲದ ಓಟಗಾರ್ತಿ ದೋಹಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸ್ಟೀರಾಯ್ಡ್ ಸೇವಿಸಿದ್ದು ಖಚಿತವಾಗಿತ್ತು.
ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತಕ್ಕೆ 5 ಚಿನ್ನ
ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ (ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್) ವಿಶ್ವಕಪ್‌ನಲ್ಲಿ ಭಾರತದ ಯುವಜೋಡಿ ಮನು ಭಾಕರ್ ಮತ್ತು ಸೌರಭ್ ಚೌಧರಿ ಹಾಗೂ ಅಂಜುಮ್ ಮೌದ್ಗಿಲ್ ಮತ್ತು ದಿವ್ಯಾನ್ಶ್ ಸಿಂಗ್ ಪನ್ವಾರ್ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಚಿನ್ನದ ಪದಕ ಗಳಿಸಿ ವಿಜೇತರಾಗಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತ 5 ಚಿನ್ನ ಮತ್ತು 1 ಬೆಳ್ಳಿ ಪದಕ ಗೆದ್ದಿದೆ. ಭಾರತದ ಚಿನ್ನದ ಪದಕ ವಿಜೇತರು ಅಪೂರ್ವಿ ಚಾಂದೇಲಾ (10 ಮೀ ಏರ್ ರೈಫಲ್ ವುಮೆನ್), ರಾಹಿ ಸರ್ನೋಬತ್ (25 ಮೀ ಪಿಸ್ತೂಲ್ ವುಮೆನ್) ಮತ್ತು ಸೌರಭ್ ಚೌಧರಿ (10 ಮೀ ಏರ್ ಪಿಸ್ತೂಲ್ ಮೆನ್), ಮತ್ತು ಕ್ಡೇ ದಿನ ಗೆದ್ದಂತಹಾ ಮಿಶ್ರ ತಂಡದ ಪ್ರಶಸ್ತಿಗಳಾಗಿದೆ.
ಆಶ್ಲೀ ಬಾರ್ಟಿ ಗೆ ಫ್ರೆಂಚ್ ಓಪನ್ ಪ್ರಶಸ್ತಿ
ಮಾರ್ಕೆಟಾ ವೊಂಡ್ರೌಸೊವಾ ಅವರನ್ನು 6-1, 6-3 ನೇರ ಸೆಟ್ ಗಳಿಂದ ಮಣಿಸಿದ ಆಸ್ಟ್ರೇಲಿಯಾದ ಟೆನಿಸ್ ಟಾರೆ ಆಶ್ಲೀ ಬಾರ್ಟಿ ಫ್ರೆಂಚ್ ಓಪನ್ ಚಾಂಪಿಯನ್ ಶಿಪ್ ನ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ 1973 ರ ಬಳಿಕ ಫ್ರೆಂಚ್ ಓಪನ್ ಗೆದ್ದ ಮೊದಲ ಆಸ್ಟ್ರೇಲಿಯಾ ಆಟಗಾರ್ತಿ ಎನಿಸಿದರು.
ನಡಾಲ್ ಗೆ ದಾಖಲೆಯ ಫ್ರೆಂಚ್ ಓಪನ್ ಕಿರೀಟ
ಸ್ಪ್ಯಾನಿಷ್ ಟೆನಿಸ್ ಆಟಗಾರ ರಾಫೆಲ್ ನಡಾಲ್ ಈ ಸಾಲಿನ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಐತಿಹಾಸಿಕ 12 ನೇ ರೋಲ್ಯಾಂಡ್ ಗ್ಯಾರೊಸ್ ಪ್ರಶಸ್ತಿ ಮತ್ತು 18 ನೇ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟವನ್ನು ಧರಿಸಿದರು. ಆಸ್ಟ್ರಿಯಾದ ಡೊಮಿನಿಕ್ ಥೀಮ್ ವಿರುದ್ಧ ನಡಾಲ್ 6-3, 5-7, 6-1, 6-1ರಿಂದ ಗೆಲುವು ಸಾಧಿಸಿದ್ದರು.
ಜೋಶ್ನಾ ಚಿನಪ್ಪಗೆ ರಾಷ್ಟ್ರೀಯ ಸ್ಕ್ವಾಷ್ ಪ್ರಶಸ್ತಿ
ಪುಣೆಯಲ್ಲಿ ನಡೆದ 76 ನೇ ಸೀನಿಯರ್ ನ್ಯಾಷನಲ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಮಿಳುನಾಡು ಪ್ರತಿಸ್ಪರ್ಧಿ ಸುನಯೀನಾ ಕುರುವಿಲ್ಲಾ ಅವರನ್ನು ಹಿಂದಿಕ್ಕಿದಜೋಶ್ನಾ ಚಿನಪ್ಪ 17 ನೇ ಬಾರಿಗೆ ರಾಷ್ಟ್ರೀಯ ಸ್ಕ್ವಾಷ್ ಪ್ರಶಸ್ತಿಯನ್ನು ಗೆದ್ದರು. ಜೋಶ್ನಾ 11-5, 11-4, 7-11, 11-5 ಅಂತರದಲ್ಲಿ ಜಯ ಸಾಧಿಸಿದ್ದರು.
ಬೇಸಿಗೆ ಯೂನಿವರ್ಸಿಯೇಡ್‌ನಲ್ಲಿ ಪ್ರಶಸ್ತಿ ಗೆದ್ದ ದ್ಯುತಿ ಚಾಂದ್
ನೇಪಲ್ಸ್‌ನಲ್ಲಿ ನಡೆದ 30 ನೇ ವಿವಿ ಕ್ರೀಡಾಕೂಟ 2019 ರಲ್ಲಿ ಭಾರತದ ಅತಿ ವೇಗದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ದ್ಯುತಿ ಚಾಂದ್ 11.32 ಸೆಕೆಂಡುಗಳಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸಿಚಿನ್ನದ ಪದಕ ಗೆದ್ದುಕೊಂಡರು. ಈ ಮೂಲಕ ದ್ಯುತಿ ಇಟಲಿಯ ನಾಪೋಲಿಯಲ್ಲಿ ನಡೆದ ಬೇಸಿಗೆ ಯೂನಿವರ್ಸಿಯೇಡ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯಳೆನಿಸಿಕೊಂಡಿದ್ದಾರೆ.
ಸೆರೆನಾ ಮಣಿಸಿ ವಿಂಬಲ್ಡನ್ ಕಿರೀಟ ತೊಟ್ಟ ಹ್ಯಾಲೆಪ್
ವಿಂಬಲ್ಡನ್ 2019 ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ರೊಮೇನಿಯನ್ ಟೆನಿಸ್ ಆಟಗಾರ್ತಿ ಸಿಮೋನಾ ಹ್ಯಾಲೆಪ್ ಅಮೆರಿಕಾದ ಪ್ರಖ್ಯಾತ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರನ್ನು 6-2, 6-2 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗಳಿಸಿಕೊಂಡಿದ್ದರು. ಇದು ಹ್ಯಾಲೆಪ್ ಪಡೆದ ಮೊದಲ ವಿಂಬಲ್ಡನ್ ಪ್ರಶಸ್ತಿಯಾಗಿತ್ತು.
ಸುದೀರ್ಘ ಹೋಆರಾಟದಲ್ಲಿ ಫೆಡರರ್ ಮಣಿಸಿದ ಜೊಕೊವಿಕ್
ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಹಾಗೂ ಸ್ವಿಸ್ ಟೆನ್ನಿಸ್ ತಾರೆ ರೋಜರ್ ಫೆಡರರ್ ನಡುವೆ ನಡೆದ ಸುಮಾರು ಐದು ಗಂಟೆಗಳ ಕಾದಾಟದ ಬಳಿಕ ಫೆಡರರ್ ಅವರನ್ನು 7-6 (5), 1-6, 7-6 (4), 4-6, 13-12 (3) ಸೆಟ್ ಗಳಿಂದ ಮಣಿಸಿದ ಜೊಕೊವಿಕ್ ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿಗೆ ಮುತ್ತಿಕ್ಕಿದರು. ಇದು ಜೊಕೊವಿಕ್ ಪಾಲಿಗೆ ಐದನೇ ವಿಂಬಲ್ಡನ್ ಪ್ರಶಸ್ತಿ ಆಗಿತ್ತು. 4 ಗಂಟೆ 57 ನಿಮಿಷ ನಡೆದ ಪಮ್ದ್ಯ , ಇದು ವಿಂಬಲ್ಡನ್ ಇತಿಹಾಸದಲ್ಲಿ ಅತಿ ಉದ್ದದ ಸಿಂಗಲ್ಸ್ ಫೈನಲ್.ಹಣಾಹಣಿಯಾಗಿತ್ತು.
ಬಿಡಬ್ಲ್ಯುಎಫ್ ಸೂಪರ್ 500 ಬ್ಯಾಡ್ಮಿಂಟನ್ ಪ್ರಶಸ್ತಿಗೆದ್ದ ರಾಂಕಿರೆಡ್ಡಿ-ಚಿರಾಗ್ ಜೋಡಿ
ಸಾತ್ವಿಕ್ಸೈರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬಿಡಬ್ಲ್ಯುಎಫ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಥೈಲ್ಯಾಂಡ್ ಓಪನ್ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಲಿ ಜುನ್ ಹುಯಿ ಮತ್ತು ಲಿಯು ಯು ಚೆನ್ ಅವರ ವಿರುದ್ಧ ಭಾರತೀಯ ಜೋಡಿ 21-19, 18-21, 21-18 ಅಂತರದ ಗೆಲುವು ದಾಖಲಿಸಿತ್ತು.
ಎಫ್‌ಐಎಂ ವಿಶ್ವಕಪ್ ಪ್ರಶಸ್ತಿ ಗೆದ್ದ ಬೆಂಗಳೂರು ಯುವತಿ
ಹಂಗೇರಿಯಲ್ಲಿ ನಡೆದ ಎಫ್‌ಐಎಂ ವಿಶ್ವಕಪ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಐಶ್ವರ್ಯಾ ಪಿಸ್ಸೆ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದರು. ಮೋಟಾರ್ಸ್ಪೋರ್ಟ್ನಲ್ಲಿ ವಿಶ್ವ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯಳೆಂಬ ಕೀರ್ತಿ ಅವರದಾಗಿದೆ. ನಾಲ್ಕು ಸುತ್ತಿನ ಚಾಂಪಿಯನ್‌ಶಿಪ್ ಮುಕ್ತಾಯದ ನಂತರ ಐಶ್ವರ್ಯಾ ಎಫ್‌ಐಎಂ ಜೂನಿಯರ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು.
ದೀಪಕ್ ಪುನಿಯಾ ಚಾಂಪಿಯನ್
ಎಸ್ಟೋನಿಯಾದ ಟ್ಯಾಲಿನ್‌ನಲ್ಲಿ ರಷ್ಯಾದ ಅಲಿಕ್ ಶೆಬ್ಜುಖೋವ್ ವಿರುದ್ಧ ಜಯಗಳಿಸಿ ಜೂನಿಯರ್ ವರ್ಲ್ಡ್ಸ್‌ವ್ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ದೀಪಕ್ ಪುನಿಯಾ 18 ವರ್ಷಗಳಲ್ಲಿಈ ಸಾಧನೆ ಮಾಡಿರುವ ಭಾರತದ ಮೊದಲ ಕಿರಿಯ ವಿಶ್ವ ಚಾಂಪಿಯನ್ ಆದರು.86 ಕೆಜಿ ಪುರುಷರ ಫ್ರೀಸ್ಟೈಲ್ ಪಂದ್ಯದ ಕೊನೆಯಲ್ಲಿ ಸ್ಕೋರ್ 2-2ರಲ್ಲಿ ಸಮವಾಗಿತ್ತು. ಆದರೆ ಪುನಿಯಾ ಕಡೆಯ ಪಾಯಿಂಟ್ ಗಳಿಸಿದ್ದ ಕಾರಣ ಅವರನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.
ಟೋಕಿಯೋ ಒಲಂಪಿಕ್ಸ್ ಗೆ ಭಾರತೀಯ ಹಾಕಿ ಪಡೆ
ಭಾರತೀಯ ಪುರುಷರ ಮತ್ತು ಮಹಿಳೆಯರ ಹಾಕಿ ತಂಡವು ಒಲಿಂಪಿಕ್ ಆಯ್ಕೆ ಸ್ಪರ್ಧೆಯಲ್ಲಿ ಜಯಗಳಿಸಿತು. ಪುರುಷರ ತಂಡ ನ್ಯೂಜಿಲೆಂಡ್‌ನ್ನು 5-0 ಗೋಲುಗಳಿಂದ ಸೋಲಿಸಿದರೆ, ಮಹಿಳಾ ತಂಡವು ಜಪಾನ್ ಅನ್ನು 2-1 ಗೋಲುಗಳಿಂದ ಮಣಿಸಿತ್ತು.
ಸಾಯಿ ಪ್ರಣೀತ್ ಗೆ ಪ್ರಶಸ್ತಿ
ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ವಿರುದ್ಧ ನೇರ ಗೆಲುವು ಸಾಧಿಸಿದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಬಿ ಸಾಯಿ ಪ್ರಣೀತ್ 36 ವರ್ಷಗಳಲ್ಲಿ ಬಾಸೆಲ್‌ನಲ್ಲಿ ನಡೆದ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಪುರುಷ ಶಟ್ಲರ್ ಎನಿಸಿಕೊಂಡರು.
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಪಿವಿ ಸಿಂಧು
ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಬೆಸಿಲ್‌ನಲ್ಲಿ ನಡೆಫೈನಲ್‌ನಲ್ಲಿ ಜಪಾನ್‌ನ ನೊಜೋಮಿ ಒಕುಹರಾ ಅವರನ್ನು ಕೇವಲ 38 ನಿಮಿಷಗಳಲ್ಲಿ 21-7, 21-7 ಸೆಟ್‌ಗಳಿಂದ ಸೋಲಿಸಿ ಸಿಂಧು ಪ್ರಶಸ್ತಿ ಜಯಿಸಿದ್ದಾರೆ.
ರೋಜರ್ಫೆಡರರ್ ವಿರುದ್ಧ ಸೆಣಿಸಿ ಸೋತ ನಗಾಲ್
ಯುಎಸ್ ಓಪನ್‌ನಲ್ಲಿ ನಾಲ್ಕು ಸೆಟ್‌ಗಳದರ್ಶನದಲ್ಲಿ 22 ವರ್ಷದ ಟೆನಿಸ್ ಆಟಗಾರ ಸುಮಿತ್ ನಗಾಲ್ ರೋಜರ್ ಫೆಡರರ್ ವಿರುದ್ಧ ಸೆಟ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಂ ಟೂರ್ನಿಗೆ ಪಾದಾರ್ಪಣೆ ಮಾಡಿದ ಸುಮಿತ್ ಆರಂಭಿಕ ಸುತ್ತಿನಲ್ಲಿ ಉತ್ಸಾಹಭರಿತ ಪ್ರದರ್ಶನ ನೀಡಿದ್ದರು. ಕಡೆಗೆ ನ್ಯೂ ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ಫೆಡರರ್‌ಗೆ 6-4, 1-6, 2-6, 4-6 ಸೆಟ್‌ಗಳಲ್ಲಿ ಮಣಿದಿದ್ದರು.
ಸೆರೆನಾಳನ್ನು ಮಣಿಸಿ ಯುಎಸ್ ಓಪನ್ ಪ್ರಶಸ್ತಿ ಗೆದ್ದ ಕೆನಡಾ ಟೆನಿಸ್ ತಾರೆ
ಕೆನಡಾದ ಯುವ ಆಟಗಾರ್ತಿ ಬಿಯಾಂಕಾ ಆಂಡ್ರೀಸ್ಕು ಯುಎಸ್ ಓಪನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು 6-3, 7-5 ಸೆಟ್‌ಗಳಿಂದ ಸೋಲಿಸಿ ತನ್ನ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿ ಗಳಿಸಿದ ಕೆನಡಾದ ಮೊದಲ ಆಟಗಾರ್ತಿಯೂ ಆಗಿರುವ ಆಂಡ್ರೀಸ್ಕು. ತನ್ನ ಗೆಲುವಿನ ನಂತರ, ಸೆರೆನಾಳನ್ನು ಸೋಲಿಸಿದ್ದಕ್ಕಾಗಿ ಪ್ರೇಕ್ಷಕರ ಕ್ಷಮೆ ಯಾಚಿಸಿದ್ದರು.
ನಡಾಲ್ ಗೆ ನಾಲ್ಕನೇ ಯುಎಸ್ ಓಪನ್ ಪ್ರಶಸ್ತಿ
ಸ್ಪೇನ್‌ನ ರಾಫೆಲ್ ನಡಾಲ್ ತನ್ನ ನಾಲ್ಕನೇ ಯುಎಸ್ ಓಪನ್ ಪ್ರಶಸ್ತಿ ಮತ್ತು 19 ನೇ ಪ್ರಮುಖ ಚಾಂಪಿಯನ್‌ಶಿಪ್ ಅನ್ನು ಗೆದ್ದಿದ್ದರು. ರಷ್ಯಾದ ಡೇನಿಲ್ ಮೆಡ್ವೆಡೆವ್ ವಿರುದ್ಧನಾಲ್ಕು ಗಂಟೆ 50 ನಿಮಿಷಗಳ ತೀವ್ರ ಹಣಾಹಣಿಯಲ್ಲಿ ನಡಾಲ್ 7-5, 6-3, 5-7, 4-6, 6-4 ಸೆಟ್‌ಗಳಿಂದ ಜಯ ತನ್ನದಾಗಿಸಿಕೊಂಡರು.
22 ನೇ ವಿಶ್ವ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ
ಮ್ಯಾಂಡಲೆನಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಿಲಿಯರ್ಡ್ಸ್ ಸೂಪರ್‌ಸ್ಟಾರ್ ಪಂಕಜ್ ಅಡ್ವಾಣಿ 150-up ಸ್ವರೂಪದ ಪಂದ್ಯದಲ್ಲಿ ಜಯಗಳಿಸುವ ಮೂಲಕ ತಮ್ಮ 22 ನೇ ವಿಶ್ವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಒಲಂಪಿಕ್ ಅರ್ಹತೆ ಗಿಟ್ಟಿಸಿದ ದೀಪಕ್ ಪುನಿಯಾ
ನೂರ್-ಸುಲ್ತಾನ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 86 ಕೆಜಿ ಫೈನಲ್ ಗೆ ಪ್ರವೇಶಿಸುವ ಮೂಲಕ ಜೂನಿಯರ್ ವಿಶ್ವ ಚಾಂಪಿಯನ್ ದೀಪಕ್ ಪುನಿಯಾ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಾಲ್ಕನೇ ಭಾರತೀಯ ಎನಿಸಿಕೊಂಡರು. ಕೊಲಂಬಿಯಾದ ಕಾರ್ಲೋಸ್ ಆರ್ಟುರೊ ಮೆಂಡೆಜ್ ವಿರುದ್ಧದ ಸೆಮಿಫೈನಲ್‌ನಲ್ಲಿ 7-6ರಿಂದ ಮೇಲುಗೈ ಸಾಧಿಸಿದ ನಂತರ ದೀಪಕ್ ತಮ್ಮ ಮೊದಲ ಹಿರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದರು.
ವೇಟ್‌ಲಿಫ್ಟರ್ ರವಿ ಕುಮಾರ್ ಗೆ ನಾಲ್ಕು ವರ್ಷ ನಿಷೇಧ
ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಗಾಗಿ ಒಡಿಶಾದ ವೇಟ್‌ಲಿಫ್ಟರ್ ರವಿ ಕುಮಾರ್ ಕಟುಲು ಅವರನ್ನು ರಾಷ್ಟ್ರೀಯ ಡೋಪಿಂಗ್ ವಿರೋಧಿ ಗ್ ಏಜೆನ್ಸಿ (ನಾಡಾ) ನಾಲ್ಕು ವರ್ಷಗಳ ಕಾಲ ನಿಷೇಧಿಸಿದೆ. ರವಿ ಕುಮಾರ್ ಜೊತೆಗೆ, ನಾಡಾ ಡಿಸ್ಕಸ್ ಎಸೆತಗಾರ ಧರಮ್ ರಾಜ್ ಯಾದವ್, ಸ್ಪ್ರಿಂಟರ್ ಸಂಜೀತ್, ವೇಟ್‌ಲಿಫ್ಟರ್‌ಗಳಾದ ಗುರ್ಮೇಲ್ ಸಿಂಗ್ ಮತ್ತು ಪೂರ್ಣಿಮಾ ಪಾಂಡೆ ಅವರನ್ನು ಡೋಪಿಂಗ್ಗಾಗಿ ನಾಲ್ಕು ವರ್ಷಗಳ ಕಾಲ ಅಮಾನತುಗೊಳಿಸಿದೆ.
ನೀರಜ್ ಫೋಗಾಟ್ ಗೆ ತಾತ್ಕಾಲಿಕ ಅಮಾನತು ಶಿಕ್ಷೆ
2020 ರ ಟೋಕಿಯೊ ಒಲಿಂಪಿಕ್ಸ್‌ನ ಸಂಭವನೀಯ ಆಟಗಾರರಲ್ಲಿ ಒಬ್ಬರಾಗಿದ್ದ ಅಂತರರಾಷ್ಟ್ರೀಯ ಪದಕ ವಿಜೇತ ಭಾರತೀಯ ಮಹಿಳಾ ಬಾಕ್ಸರ್ ನೀರಜ್ ಫೋಗಾಟ್ (57 ಕೆಜಿ) ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದ ನಂತರ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ. ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಿ ಲಿಗಾಂಡ್ರೊಲ್ ಮತ್ತು "ಇತರ ಅನಾಬೊಲಿಕ್ ಸ್ಟೀರಾಯ್ಡ್" ಗಳನ್ನು ಹರಿಯಾಣ ಬಾಕ್ಸರ್ ಸೇವಿಸಿರುವುದು ಪರೀಕ್ಷೆಯಲ್ಲಿ ಸಾಬೀತಾಗಿತ್ತು..
ರಷ್ಯಾಗೆ ನಾಲ್ಕು ವರ್ಷ ನಿಷೇಧ
ಡೋಪಿಂಗ್ ಪರೀಕ್ಷೆಗಳನ್ನು ಸರಿಯಾಗಿ ನಡೆಸದೆ ಇದ್ದ ಕಾರಣ ಮುಂದಿನ ಬೇಸಿಗೆ ಮತ್ತು ಚಳಿಗಾಲದ ಒಲಿಂಪಿಕ್ಸ್ ಮತ್ತು 2022 ರ ಸಾಕರ್ ವಿಶ್ವಕಪ್ ಸೇರಿದಂತೆ ನಾಲ್ಕು ವರ್ಷಗಳ ಕಾಲ ವಿಶ್ವದ ಅಗ್ರ ಕ್ರೀಡಾಕೂಟಗಳಿಂದ ರಷ್ಯಾವನ್ನು ನಿಷೇಧಿಸಲಾಯಿತು. ವಿಶ್ವಡೋಪಿಂಗ್ ವಿರೋಧಿ ಏಜೆನ್ಸಿ (ವಾಡಾ) ಕಾರ್ಯಕಾರಿ ಸಮಿತಿಯು ರಷ್ಯಾ ನಕಲಿ ದಾಖಲೆ ಸೃಷ್ಟಿಸಿ ಡೋಪಿಂಗ್ ಪರೀಕ್ಷೆಗಳಿಗೆ ಸಂಬಂಧಿಸಿದ ಫೈಲ್‌ಗಳನ್ನು ಅಳಿಸಿಹಾಕಿದೆ ಎಂದು ತೀರ್ಮಾನಿಸಿದ ನಂತರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ
ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ 312 ಪದಕ
ನೇಪಾಳದಲ್ಲಿ ನಡೆದ 13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 312 ಪದಕಗಳೊಂದಿಗೆ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿತು.ಭಾರತ 174 ಚಿನ್ನ, 93 ಬೆಳ್ಳಿ ಹಾಗೂ 45 ಕಂಚಿನ ಪದಕಗಳು ಸೇರಿದಂತೆ ಒಟ್ಟು 312 ಪಂದಕಗಳೊಂದಿಗೆ ಅಗ್ರ ಸ್ಥಾನದೊಂದಿಗೆ ತನ್ನ ಓಟ ಅಂತ್ಯಗೊಳಿಸಿತು
ದೀಪಕ್ ಪುನಿಯಾ 'ವರ್ಷದ ಜೂನಿಯರ್ ಫ್ರೀಸ್ಟೈಲ್ ಕುಸ್ತಿಪಟು
ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ದೀಪಕ್ ಪುನಿಯಾ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಸಂಸ್ಥೆ ನೀಡುವ ವಿಶ್ವ ಶ್ರೇಷ್ಠ ಜೂನಿಯರ್ ಫ್ರೀಸ್ಟೈಲ್ ಕುಸ್ತಿಪಟು ಎಂಬ ಗೌರವಕ್ಕೆ ಪಾತ್ರವಾಗಿದ್ದರು.
ವೃತ್ತಿಜೀವನದ ಶ್ರೇಷ್ಠ ಶ್ರೇಯಾಂಕ ಪಡೆದ ಲಕ್ಷ್ಯೆ ಸೇನ್
ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಗೆದ್ದ ಭಾರತದ ಯುವ ಆಟಗಾರ ಲಕ್ಷ್ಯ ಸೇನ್ ಅವರು ವೃತ್ತಿ ಜೀವನದ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಶ್ರೇಷ್ಠ ಸ್ಥಾನ ಪಡೆದಿದ್ದಾರೆ.32ನೇ ಸ್ಥಾನಕ್ಕೆ ಶ್ರೇಯಾಂಕ ಪಡೆದಿರುವ ಲಕ್ಷ್ಯ ಸೇನ್ಬಾಂಗ್ಲಾದೇಶ ಚಾಲೆಂಜ್ ಗೆಲ್ಲುವುದಕ್ಕೂ ಮುನ್ನ ಸೇನ್, ಕಳೆದ ಸೆಪ್ಟೆಂಬರ್‌ನಲ್ಲಿ ಬೆಲ್ಜಿಯಂ ಇಂಟ್‌ನ್ಯಾಷನಲ್ ಗೆದ್ದಿದ್ದರು. ನಂತರ, ಡಚ್ ಓಪನ್ ಹಾಗೂ ಸಾರ್‌ಲೊರ್ ಲಕ್ಸ್ ಸೂಪರ್ ಟೂರ್ನಿಗಳಲ್ಲೂ ಚಾಂಪಿಯನ್ ಆಗಿದ್ದರು.ಮಹಿಳಾ ಸಿಂಗಲ್ಸ್ ಶ್ರೇಯಾಂಕದಲ್ಲಿ ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಆರನೇ ಸ್ಥಾನದಲ್ಲಿದ್ದಾರೆ.
ವೆಯ್ಟ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು
6ನೇ ಕತಾರ್ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ಭಾರತ ಪದಕಗಳ ಖಾತೆ ತೆರೆದಿದ್ದು, ಮಾಜಿ ವಿಶ್ವ ಚಾಂಪಿಯನ್ ವೆಯ್ಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು.
ಬಾಕ್ಸರ್ ಸುಮಿತ್ ಸಂಗ್ವಾನ್ ಒಂದು ವರ್ಷ ಅಮಾನತು
ಏಷ್ಯನ್ ಕ್ರೀಡಾಕೂಟದ ಮಾಜಿ ಬೆಳ್ಳಿ ಪದಕ ವಿಜೇತ ಸುಮಿತ್ ಸಂಗ್ವಾನ್ ಅವರು ಡೋಪ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ಒಂದು ವರ್ಷದ ನಿಷೇಧಕ್ಕೆ ಒಳಗಾಗಿದ್ದಾರೆ.
ಒಲಂಪಿಕ್ಸ್ ಅರ್ಹತಾ ಸುತ್ತಿಗೆ ಮೇರಿ ಕೋಮ್
ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಫೈನಲ್ಸ್ ನಲ್ಲಿ ನಿಖತ ಜರೀನ್ ಅವರನ್ನು 9-1 ರಿಂದ ಮಣಿಸಿ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರು.