ಡೇವಿಸ್‌ ಕಪ್ ಅರ್ಹತಾ ಪಂದ್ಯ: ರಾಮನಾಥನ್‌, ಪ್ರಜ್ಞೇಶ್ ಗೆ ಸೋಲು,ಇಟಲಿಗೆ 2-0 ಮುನ್ನಡೆ

ಇಲ್ಲಿನ ಸೌತ್‌ ಕ್ಲಬ್‌ನಲ್ಲಿ ನಡೆದ ಡೇವಿಸ್ ಕಪ್‌ ಅರ್ಹತಾ ಸುತ್ತಿನ ಅಂತಿಮ ದಿನದ ಪಂದ್ಯದಲ್ಲಿ ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ಪ್ರಜ್ಞೇಶ್ ಗುಣೇಶ್ವರನ್ ಸೋಲುವ ಮೂಲಕ ಇಟಲಿ 2-0 ಅಂಕದೊಂದಿಗೆ ಮುನ್ನಡೆ ಪಡೆದುಕೊಂಡಿದೆ.

Published: 01st February 2019 12:00 PM  |   Last Updated: 01st February 2019 07:21 AM   |  A+A-


Ram Kumar

ರಾಮ್ ಕುಮಾರ್

Posted By : ABN ABN
Source : PTI
ಕೊಲ್ಕತ್ತಾ:  ಇಲ್ಲಿನ ಸೌತ್‌ ಕ್ಲಬ್‌ನಲ್ಲಿ ನಡೆದ ಡೇವಿಸ್ ಕಪ್‌ ಅರ್ಹತಾ ಸುತ್ತಿನ  ಅಂತಿಮ ದಿನದ ಪಂದ್ಯದಲ್ಲಿ   ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ಪ್ರಜ್ಞೇಶ್ ಗುಣೇಶ್ವರನ್ ಸೋಲುವ ಮೂಲಕ ಇಟಲಿ 2-0 ಅಂಕದೊಂದಿಗೆ ಮುನ್ನಡೆ ಪಡೆದುಕೊಂಡಿದೆ.

ಇಟಲಿಯ ಆ್ಯಂಡ್ರೆಸ್‌ ಸೆಪ್ಪೆ ವಿರುದ್ಧ 6-4, 6-2 ಅಂತರದಲ್ಲಿ ರಾಮ್ ಕುಮಾರ್  ರಾಮನಾಥನ್ ಸೋಲು ಅನುಭವಿಸಿದರು.ಪಂದ್ಯದ ಆರಂಭದಲ್ಲಿ ಸತತ ನಾಲ್ಕು ಸರ್ವ್ ಗಳಲ್ಲಿ ಮುನ್ನಡೆ ಸಾಧಿಸಿದ್ದ ರಾಮನಾಥನ್‌, ಒಂಬತ್ತನೇ ಸರ್ವ್‌ನಲ್ಲಿ ಎದುರಾಳಿ ಆಟಗಾರ ಸೆಪ್ಪೆ ವಿರುದ್ಧ 4-5 ಹಿನ್ನಡೆ ಅನುಭವಿಸಿದರು. ಅಂತಿಮವಾಗಿ ಮೊದಲ ಸೆಟ್‌ನಲ್ಲಿ ಸೆಪ್ಪೆ ಅವರು 6-4 ಅಂತರದಲ್ಲಿ ಭಾರತದ ರಾಮ್‌ಕುಮಾರ್‌  ಅವರನ್ನು ಮಣಿಸಿದರು.

ನಂತರ ಎರಡನೇ ಸೆಟ್‌ನಲ್ಲಿ ಒತ್ತಡದಲ್ಲಿ ಕಣಕ್ಕೆ ಇಳಿದ ಭಾರತದ ಎರಡನೇ ಶ್ರೇಯಾಂಕಿತ ಆಟಗಾರ ರಾಮನಾಥನ್‌ ಅವರು, ನೀರಸ ಪ್ರದರ್ಶನ ತೋರಿ  2-6 ಅಂತರದಲ್ಲಿ ಹೀನಾಯವಾಗಿ ಸೋಲು ಕಂಡರು. 

ಇದಾದ ಕೆಲವೇ ತಾಸುಗಳಲ್ಲಿ  ರೈಸಿಂಗ್ ಸ್ಟಾರ್  ಮ್ಯಾಟೊ ಬೆರೆಟಿನಿ ವಿರುದ್ಧ ಭಾರತದ ಪ್ರಜ್ಞೇಶ್  ಗುಣೇಶ್ವರನ್  6-4, 6-3 ಅಂತರದಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಭಾರತ ಮೊದಲನೇ ಸಿಂಗಲ್ಸ್‌ನಲ್ಲಿ ಸೋಲು ಅನುಭವಿಸಿತು.ಇಟಲಿ 2-0ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ..
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp