ಇಡ್ಲಿ ಆರ್ಡರ್ ಮಾಡಿದ್ದಕ್ಕೆ ಕೊಹ್ಲಿಯನ್ನು ಹಾಸ್ಯ ಮಾಡಿದ್ದ ಸುನಿಲ್ ಛೆಟ್ರಿ!

ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಾಸ್ಯ ಮಾಡಿರುವ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

Published: 01st February 2019 12:00 PM  |   Last Updated: 01st February 2019 07:46 AM   |  A+A-


When Sunil Chhetri made fun of Virat Kohli for ordering Idli

ಇಡ್ಲಿ ಆರ್ಡರ್ ಮಾಡಿದ್ದಕ್ಕೆ ಕೊಹ್ಲಿಯನ್ನು ಹಾಸ್ಯ ಮಾಡಿದ್ದ ಸುನಿಲ್ ಛೆಟ್ರಿ!

Posted By : SBV SBV
Source : The New Indian Express
ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಾಸ್ಯ ಮಾಡಿರುವ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 

ತಾವು ಸಸ್ಯಹಾರಿಯಾಗುವುದಕ್ಕೆ ವಿರಾಟ್ ಕೊಹ್ಲಿ ಪಾತ್ರ ಪ್ರಮುಖವಾಗಿದೆ ಎಂದು ಹೇಳಿರುವ ಸುನಿಲ್ ಛೆಟ್ರಿ, ಕೊಹ್ಲಿ ಹಿಂದೊಮ್ಮೆ ಇಡ್ಲಿ ಆರ್ಡರ್ ಮಾಡಿದ್ದಕ್ಕೆ ಅವರನ್ನು ಹಾಸ್ಯ ಮಾಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. 

ಟಿಒಐ ಜೊತೆಗೆ ಮಾತನಾಡಿರುವ ವೇಳೆ ಛೆಟ್ರಿ ವಿರಾಟ್ ಕೊಹ್ಲಿ-ತಮ್ಮ ನಡುವಿನ ಸ್ನೇಹವನ್ನು ನೆನಪಿಸಿಕೊಂಡಿದ್ದು, ಸಸ್ಯಹಾರಿಯಾವುದರಿಂದ ಫಿಟ್ನೆಸ್ ಗೆ ಹೇಗೆಲ್ಲಾ ಸಹಕಾರಿಯಾಗುತ್ತದೆ ಎಂಬುದನ್ನು ವಿರಾಟ್ ತಮಗೆ ಮನವರಿಕೆ ಮಾಡಿಕೊಟ್ಟಿದ್ದನ್ನು ವಿವರಿಸಿದ್ದಾರೆ. 

ವಿರಾಟ್ ಕೊಹ್ಲಿಯನ್ನು ನಾನು ತಮಾಷೆ ಮಾಡಿದ್ದೂ ಇದೆ. ವಿರಾಟ್ ಕೊಹ್ಲಿ ಇಡ್ಲಿ ಆರ್ಡರ್ ಮಾಡಿದ್ದಕ್ಕಾಗಿ ನಾನು ಅವರನ್ನು ಹಾಸ್ಯ ಮಾಡಿದ್ದೆ. ನಿನಗೇನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದ್ದೆ ಎಂದು ಛೆಟ್ರಿ ಹೇಳಿದ್ದಾರೆ. 

ಇದೇ ವೇಳೆ ಕೊಹ್ಲಿ ಕುರಿತು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿರುವ ಛೆಟ್ರಿ, ಕೊಹ್ಲಿ ಓರ್ವ ಅಸಾಧಾರಣ ಕ್ರೀಡಾಪಟು ಎಂದು ಬಣ್ಣಿಸಿದ್ದಾರೆ. 

ಕೊಹ್ಲಿ ಇರುವ ರೀತಿಯಲ್ಲಿ ಇರುವುದು ಸುಲಭವಲ್ಲ. ಕೊಹ್ಲಿ ಅಸಾಧಾರಣವಾದುದ್ದನ್ನು ಮಾಡುತ್ತಿದ್ದಾರೆ. ಅವರು ಬೇರೆಲ್ಲರಿಗಿಂತಲೂ ಭಿನ್ನ, ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಛೆಟ್ರಿ ಹೇಳಿದ್ದಾರೆ. 
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp