ಇಂಗ್ಲೆಂಡ್ ಫುಟ್ಬಾಲ್ ವಿಶ್ವಕಪ್ ವಿಜೇತ ತಂಡದ ಗೋಲ್ ಕೀಪರ್ ಗಾರ್ಡನ್ ಬ್ಯಾಂಕ್ಸ್ ನಿಧನ

ಇಂಗ್ಲೆಂಡ್ ಫುಟ್ಬಾಲ್ ತಂಡ 1966 ರಲ್ಲಿ ವಿಶ್ವಕಪ್ ಗೆದ್ದಾಗ ತಂಡದ ಗೋಲ್ ಕೀಪರ್ ಆಗಿದ್ದ ಗಾರ್ಡನ್ ಬ್ಯಾಂಕ್ಸ್ (81) ಫೆ.13 ರಂದು ನಿಧನರಾಗಿದ್ದಾರೆ.
England World Cup-winning goalkeeper Gordon Banks dies
England World Cup-winning goalkeeper Gordon Banks dies
ಲಂಡನ್: ಇಂಗ್ಲೆಂಡ್ ಫುಟ್ಬಾಲ್ ತಂಡ 1966 ರಲ್ಲಿ ವಿಶ್ವಕಪ್ ಗೆದ್ದಾಗ ತಂಡದ ಗೋಲ್ ಕೀಪರ್ ಆಗಿದ್ದ ಗಾರ್ಡನ್ ಬ್ಯಾಂಕ್ಸ್ (81) ಫೆ.13 ರಂದು ನಿಧನರಾಗಿದ್ದಾರೆ.
ಅಂತಾರಾಷ್ಟೀಯ ತಂಡದಲ್ಲಿ ಅತ್ಯುತ್ತಮ ಸಾಧನೆ ತೋರಿದ ಫುಟ್ಬಾಲ್ ಕ್ರೀಡಾಪಟುವಿಗೆ ನೀಡಲಾಗುವ ವಿಶೇಷ ಗೌರವ (ಕ್ಯಾಪ್) ಗೆ ಗಾರ್ಡನ್ ಬ್ಯಾಂಕ್ಸ್ ಬರೊಬ್ಬರಿ 73 ಬಾರಿ ಭಾಜನರಾಗಿದ್ದರು. ವಿಶ್ವಕಪ್ ಫೈನಲ್ ನಲ್ಲಿ ಜರ್ಮನಿ ವಿರುದ್ಧ ಹ್ಯಾಟ್ರಿಕ್ ಗೋಲ್ ದಾಖಲಿಸಿದ್ದ ಫುಟ್ಬಾಲ್ ಕ್ರೀಡಾಪಟು ಜೆಫ್ ಹರ್ಸ್ಟ್ ಗಾರ್ಡನ್ ಬ್ಯಾಂಕ್ಸ್ ನಿಧನಕ್ಕೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು ಶ್ರೇಷ್ಠ ಆಟಗಾರನನ್ನು ಕಳೆದುಕೊಂಡಿದ್ದು ದುಃಖ ಉಂಟುಮಾಡಿದೆ ಎಂದಿದ್ದಾರೆ. 
ಬ್ರೆಜಿಲ್ ತಂಡದ ವಿರುದ್ಧ 1970 ರ ವರ್ಲ್ದ್ ಕಪ್ ಗ್ರೂಪ್ ಪಂದ್ಯದಲ್ಲಿ ಗಾರ್ಡನ್ ಬ್ಯಾಂಕ್ಸ್ ಅವರ ಅದ್ಭುತ ಗೋಲ್ ಕೀಪಿಂಗ್ ಮಾಡಿದ್ದನ್ನು ನೆನಪಿಸಿಕೊಂಡಿರುವ ಜೆಫ್ ಹರ್ಸ್ಟ್, ನಾನು ನೋಡಿದ್ದ ಸಾವಿರಾರು ಪಂದ್ಯಗಳಲ್ಲಿ ಅಂದಿನ ಪಂದ್ಯದಲ್ಲಿ ಗಾರ್ಡನ್ ಬ್ಯಾಂಕ್ಸ್ ಗೋಲ್ ಸೇವ್ ಮಾಡಿದ್ದು ಅದ್ಭುತವಾದ ಗೋಲ್ ಕೀಪಿಂಗ್ ಆಗಿತ್ತು, ಅದೇ ನನ್ನ ಅವರ ಸ್ನೇಹಕ್ಕೂ ಕಾರಣವಾಯಿತು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com