ಏಷ್ಯನ್ ರೋಲ್ ಬಾಲ್ ಚಾಂಪಿಯನ್ ಶಿಪ್ : ಪಾಕಿಸ್ತಾನ ತಂಡಕ್ಕೆ ವೀಸಾ ನಿರಾಕರಣೆ

ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ 3ನೇ ಏಷ್ಯನ್ ರೋಲ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡಕ್ಕೆ ಭಾರತ ಸರ್ಕಾರದಿಂದ ವೀಸಾ ನಿರಾಕರಿಸಲಾಗಿದೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ಬೆಳಗಾವಿ: ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ 3ನೇ ಏಷ್ಯನ್ ರೋಲ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ  ಪಾಲ್ಗೊಳ್ಳಲು ಪಾಕಿಸ್ತಾನ ತಂಡಕ್ಕೆ ಭಾರತ ಸರ್ಕಾರದಿಂದ ವೀಸಾ ನಿರಾಕರಿಸಲಾಗಿದೆ.

ಕುಂದಾನಗರಿಯ  ಶಿವಗಂಗಾ ರೊಲರ್ ಸ್ಕೇಟಿಂಗ್ ಕ್ಲಬ್ ನಲ್ಲಿ ಶುರುವಾಗಿರುವ ಕ್ರೀಡಾಕೂಟದಲ್ಲಿ  ಪಾಕಿಸ್ತಾನ ಸೇರಿದಂತೆ 12 ರಾಷ್ಟ್ರಗಳು ಪಾಲ್ಗೊಳ್ಳಬೇಕಿತ್ತು.
ಆದರೆ, ಪಾಕಿಸ್ತಾನ ತಂಡದ ಆಟಗಾರರು, ತರಬೇತುದಾರರ ಈ ಚಾಂಪಿಯನ್  ಶಿಪ್ ನಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದರೂ ಸರ್ಕಾರ ವೀಸಾವನ್ನು ನಿರಾಕರಿಸಿದೆ.
ಏಷ್ಯನ್ ರೊಲ್ ಬಾಲ್ ಫೆಡರೇಷನ್  ಸಹಯೋಗದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ  11 ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಈ ಕಾರ್ಯಕ್ರಮಕ್ಕಾಗಿ ಸುಮಾರು 1 ಕೋಟಿ ರೂ. ವೆಚ್ಚ ಮಾಡಲಾಗಿದ್ದು,
ಶಿವಗಂಗಾ ರೊಲರ್ ಸ್ಕೇಟಿಂಗ್ ಕ್ಲಬ್ ನಲ್ಲಿ 1 ಸಾವಿರ ಪ್ರೇಕ್ಷಕರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ  ರೋಲ್   ಬಾಲ್ ಅಸೋಸಿಯೇಷನ್   ಅಧ್ಯಕ್ಷೆ  ಜ್ಯೋತಿ ಚಿಂದಾಕ್  ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com