ಭಾರತಕ್ಕೆ ವಿಶ್ವಮಟ್ಟದ ಟೂರ್ನಿಗಳ ಆತಿಥ್ಯದ ಅವಕಾಶಕ್ಕೆ ತಾತ್ಕಾಲಿಕ ನಿರ್ಬಂಧ: ಐಒಸಿ ನಿರ್ಧಾರ

ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿ ಭಾರತಕ್ಕೆ ವಿಶ್ವಮಟ್ಟದ ಟೂರ್ನಿಗಳ ಆತಿಥ್ಯದ ಅವಕಾಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನಿರ್ಧರಿಸಿದೆ.

Published: 22nd February 2019 12:00 PM  |   Last Updated: 22nd February 2019 01:46 AM   |  A+A-


IOC 'suspends discussions' with India for hosting global events

ಸಂಗ್ರಹ ಚಿತ್ರ

Posted By : SVN SVN
Source : PTI
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ವಿಶ್ವಕಪ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳಬೇಕಿದ್ದ ಪಾಕಿಸ್ತಾನದ ಸ್ಪರ್ಧಿಗಳಿಗೆ ಭಾರತ ವೀಸಾ ನಿರಾಕರಣೆ ಮಾಡಿರುವ ಹಿನ್ನಲೆಯಲ್ಲಿ ಕೆಂಗಣ್ಣು ಬೀರಿರುವ ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿ ಭಾರತಕ್ಕೆ ವಿಶ್ವಮಟ್ಟದ ಟೂರ್ನಿಗಳ ಆತಿಥ್ಯದ ಅವಕಾಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನಿರ್ಧರಿಸಿದೆ.

ಈ ಬಗ್ಗೆ ಇಂದು ಐಒಸಿ ತನ್ನ ನಿರ್ಣಯ ಪ್ರಕಟಿಸಿದ್ದು, ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿ ಆಯೋಜಕತ್ವ ನೀಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ತನ್ನ ನಿರ್ಧಾರ ಪ್ರಕಟಿಸಿದೆ. ಜತೆಗೆ, ಶೂಟಿಂಗ್​ ವಿಶ್ವಕಪ್ ನ ಪುರುಷ ವಿಭಾಗದ 25 ಮೀಟರ್​ ರ‍್ಯಾಪಿಡ್​ ಫೈರ್​ ಸ್ಪರ್ಧೆಯ ಒಲಿಂಪಿಕ್​ ಅರ್ಹತಾ ಸ್ಥಾನಮಾನವನ್ನೂ ಸಮಿತಿ ಹಿಂಪಡೆದುಕೊಂಡಿದೆ.

ಈ ವಿವಾದದ ಬಗ್ಗೆ ತಿಳಿದ ಕೂಡಲೇ ಐಓಸಿ, ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಸಂಸ್ಥೆ (ಐಎಸ್‌ಎಸ್‌ಎಫ್) ಮತ್ತು ಭಾರತದ ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಎನ್‌ಓಸಿ) ಕೊನೆಯ ನಿಮಿಷದವರೆಗೂ ಪ್ರಯತ್ನ ನಡೆಸಿ ಭಾರತೀಯ ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದವು. ಆದರೆ, ಪಾಕಿಸ್ತಾನದ ಕ್ರೀಡಾಪಟುಗಳಿಗೆ ಭಾರತಕ್ಕೆ ಬರಲು ಅವಕಾಶ ನೀಡುವ ವಿಚಾರವಾಗಿ ಪರಿಹಾರ ದೊಕರಲಿಲ್ಲ ಎಂದು ಐಓಸಿ ತನ್ನ ಕಾರ್ಯಕಾರಿ ಮಂಡಳಿ ಸಭೆ ಬಳಿಕ ಹೇಳಿಕೆ ನೀಡಿದೆ.

ಭಾರತವು ತಾರತಮ್ಯ ನೀತಿ ಅನುಸರಿಸುತ್ತಿರುವುದು ಹಾಗೂ ರಾಜಕೀಯ ಹಸ್ತಕ್ಷೇಪ ಮಾಡುತ್ತಿರುವುದು ಒಲಿಂಪಿಕ್​ ತತ್ವಗಳಿಗೆ ವಿರುದ್ಧವಾಗಿದೆ. ಮುಂದೆ ಈ ರೀತಿ ಆಗದಂತೆ ಸರ್ಕಾರ ಲಿಖಿತ ಭರವಸೆ ನೀಡುವವರೆಗೂ ಒಲಿಂಪಿಕ್​ ಸಂಬಂಧಿತ ಸ್ಪರ್ಧೆಗಳಿಗೆ ಆತಿಥ್ಯ ವಹಿಸಲು ಭಾರತಕ್ಕೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ ಎಂದು ಐಒಸಿ ಹೇಳಿದೆ. ಅಂತೆಯೇ ಸರ್ಕಾರದಿಂದ ಲಿಖಿತ ಭರವಸೆಗಳನ್ನು ಪಡೆದುಕೊಳ್ಳುವವರೆಗೂ ಯಾವುದೇ ಒಲಿಂಪಿಕ್ ಸಂಬಂಧಿತ ಕ್ರೀಡೆಗಳನ್ನು ಭವಿಷ್ಯದಲ್ಲಿ ಆಯೋಜಿಸಲು ಭಾರತಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಹ ಅದು ತಿಳಿಸಿದೆ.

ಪುಲ್ವಾಮ ಉಗ್ರ ದಾಳಿ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕ್ ನಡುವಿನ ಶೀಥಲ ಸಮರ ತಾರಕಕ್ಕೇರಿದ್ದು, ಇದೇ ಹೊತ್ತಿನಲ್ಲಿ ವಿಶ್ವಕಪ್​ ಶೂಟಿಂಗ್​ ಸ್ಪರ್ಧೆಗಳಲ್ಲಿ ಭಾಗವಹಿಸಲು ಪಾಕ್​ ಮೂಲದ ಶೂಟರ್ ​ಗಳು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇವರಿಗೆ ಭಾರತ ವೀಸಾ ನಿರಾಕರಿಸಿತ್ತು. 
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp