ಸುನೀಲ್ ಚೆಟ್ರಿ ಮ್ಯಾಜಿಕ್ ಗೆ ಫುಟ್ಬಾಲ್ ಸೂಪರ್ ಸ್ಟಾರ್ ಮೆಸ್ಸಿ ದಾಖಲೆ ಉಡೀಸ್!

ಎಎಫ್ ಸಿ ಏಷ್ಯಾಕಪ್ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ತಂಡದ ಸೂಪರ್ ಸ್ಟಾರ್ ಸುನೀಲ್ ಚೆಟ್ರಿ ಗೋಲು ಗಳಿಸುವ ಮೂಲಕ ಅರ್ಜೆಂಟೀನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಎಎಫ್ ಸಿ ಏಷ್ಯಾಕಪ್ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ತಂಡದ ಸೂಪರ್ ಸ್ಟಾರ್ ಸುನೀಲ್ ಚೆಟ್ರಿ ಗೋಲು ಗಳಿಸುವ ಮೂಲಕ ಅರ್ಜೆಂಟೀನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಎಎಫ್ ಸಿ ಏಷ್ಯಾಕಪ್ ನಲ್ಲಿ ಮೊದಲ ಪಂದ್ಯದಲ್ಲಿ ನಾಯಕ ಸುನೀಲ್‌ ಚೆಟ್ರಿ ನೇತೃತ್ವದ ಭಾರತ ಗೆಲುವಿನ ನಗೆ ಬೀರಿದೆ. ಅಲ್‌ ನಹಯಾನ್‌ ಕ್ರೀಡಾಂಗಣದಲ್ಲಿ ನಡೆದ ಎ‍ ಗುಂಪಿನ ಪಂದ್ಯದಲ್ಲಿ ಭಾರತ 4-1 ಗೋಲುಗಳಿಂದ ಥಾಯ್ಲೆಂಡ್‌ ತಂಡ ಮಣಿಸಿತು. ಆ ಮೂಲಕ ಸರಣಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿದ್ದು, ಭಾರತದ ಸೂಪರ್ ಸ್ಟಾರ್ ಸುನೀಲ್ ಚೆಟ್ರಿ 27ನೇ ಹಾಗೂ 46ನೇ ನಿಮಿಷದಲ್ಲಿ ಗೋಲು ಬಾರಿಸೋ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. 
ಅಷ್ಟೇ ಅಲ್ಲದೆ, ಚೆಟ್ರಿ ತಮ್ಮ ವೃತ್ತಿ ಜೀವನದ 67ನೇ ಗೋಲ್ ದಾಖಲಿಸುವ ಮೂಲಕ ಅರ್ಜೆಂಟೀನಾದ ಸೂಪರ್ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿಯ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗರಿಷ್ಠ ಗೋಲು ಗಳಿಸಿದ ವಿಶ್ವದ 2ನೇ ಸಕ್ರಿಯ ಫುಟ್ಬಾಲ್ ಆಟಗಾರ ಎಂಬ ಕೀರ್ತಿಗೆ ಚೆಟ್ರಿ ಪಾತ್ರರಾಗಿದ್ದಾರೆ.
ಈ ಹಿಂದೆ 2ನೇ ಸ್ಥಾನದಲ್ಲಿದ್ದ ಮೆಸ್ಸಿ ಒಟ್ಟು ಇಲ್ಲಿಯವರೆಗೆ 65 ಗೋಲು ದಾಖಲಿಸಿದ್ದಾರೆ. ಆದರೀಗ ಚೆಟ್ರಿ 67 ಗೋಲು ಗಳಿಸುವ ಮೂಲಕ 2ನೇ ಸ್ಥಾನಕ್ಕೆ ಜಿಗಿದಿದ್ದು, ಫುಟ್ಬಾಲ್ ಚರಿತ್ರೆಯಲ್ಲೇ ಭಾರತ ತಂಡ ಎಂದೂ ಮರೆಯದ ಸಾಧನೆ ಮಾಡಿದ್ದಾರೆ.  ಇನ್ನು 85 ಗೋಲುಗಳನ್ನು ದಾಖಲಿಸಿರುವ ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com