ಅತ್ಯಾಚಾರ ಪ್ರಕರಣ: ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರಂಟ್?

ಮಾಡೆಲ್ ಮೇಲಿನ ಅತ್ಯಾಚಾರ ಪ್ರಕರಣಕ್ಕ ಸಂಬಂಧಿಸಿದಂತೆ ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Published: 13th January 2019 12:00 PM  |   Last Updated: 13th January 2019 12:11 PM   |  A+A-


Portugal Football Superstar Cristiano Ronaldo's DNA sought by Las Vegas police investigating rape case

ಸಂಗ್ರಹ ಚಿತ್ರ

Posted By : SVN SVN
Source : Online Desk
ವಾಷಿಂಗ್ಟನ್: ಮಾಡೆಲ್ ಮೇಲಿನ ಅತ್ಯಾಚಾರ ಪ್ರಕರಣಕ್ಕ ಸಂಬಂಧಿಸಿದಂತೆ ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿ ಮಾಡಿದ್ದು, 2009 ರಲ್ಲಿ ನಡೆದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವದ ನಂಬರ್​ 1 ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧ ಅರೆಸ್ಟ್​ ವಾರೆಂಟ್​ ಜಾರಿ ಮಾಡಲಾಗಿದೆ ಎಂದು ಹೇಳಿದೆ. ಅಮೆರಿಕದ ರೂಪದರ್ಶಿ ಕ್ಯಾಥರಿನ್ ಮಯೊರ್ಗಾ ಅವರ ಮೇಲೆ ರೊನಾಲ್ಜೋ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ರೊನಾಲ್ಡೋ ಅವರ ಡಿಎನ್ ಎ ಸಂಗ್ರಹಕ್ಕಾಗಿ ಅವರ ವಿರುದ್ಧ ಲಾಸ್ ವೇಗಾಸ್ ಪೊಲೀಸರ ವಾರೆಂಟ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

2009 ರಲ್ಲಿ ಹೊಟೇಲ್​ ರೂಮ್​ ಒಂದರಲ್ಲಿ ಕ್ರಿಸ್ಟಿಯಾನೊ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ ಈ ಸುದ್ದಿಯನ್ನು ಬಹಿರಂಗಪಡಿಸದಂತೆ 2.7 ಕೋಟಿ ರೂ ಹಣದ ಆಮಿಷ ಒಡ್ಡಿದ್ದರು ಎಂದು ಕ್ಯಾಥರಿನ್ ಕಳೆದ ಅಕ್ಟೋಬರ್​ನಲ್ಲಿ ಗಂಭೀರ ಆರೋಪ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಕೊಂಡಿದ್ದ ಲಾಸ್ ವೇಗಾಸ್ ಪೊಲೀಸರು, ರೊನಾಲ್ಡೋಗೆ ಡಿಎನ್​ಎ ಸ್ಯಾಂಪಲ್ ನೀಡುವಂತೆ ತಿಳಿಸಿದ್ದರು. ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದ ರೊನಾಲ್ಡೊ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ದೂರಿಗೆ ಸಂಬಂಧಿಸಿದಂತೆ ಸಹಕರಿಸದ ಕಾರಣ ರೊನಾಲ್ಡೊ ವಿರುದ್ಧ ಲಾಸ್​ ವೇಗಾಸ್ ಪೊಲೀಸರು ವಾರೆಂಟ್​ ಜಾರಿ ಮಾಡಿದ್ದಾರೆ. ಈ ಸಂಬಂಧ ವಾರೆಂಟ್ ಪ್ರತಿಯನ್ನು ಲಾಸ್ ವೇಗಾಸ್ ಪೊಲೀಸರು ಇಟಲಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಸದ್ಯ ಜ್ಯುವೆಂಟಸ್‌ ಕ್ಲಬ್​ ಪರ ಆಡುತ್ತಿರುವ ಆಕ್ರಮಣಕಾರಿ ಫುಟ್​ಬಾಲರ್​ಕ್ರಿಸ್ಟಿಯಾನೊ ರೊನಾಲ್ಡೊ ಇತ್ತೀಚೆಗಷ್ಟೇ ವರ್ಷದ ಶ್ರೇಷ್ಠ ಫ‌ುಟ್‌ಬಾಲಿಗ ಗ್ಲೋಬ್‌ ಸಾಕರ್‌ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದರು. ವಿಶ್ವವಿಖ್ಯಾತ ಆಟಗಾರ ಅರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿಯನ್ನು ಹಿಂದಿಕ್ಕಿ ಕ್ರಿಸ್ಟಿಯಾನೊ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಫುಟ್​ಬಾಲ್​ ವರ್ಷವನ್ನು ಭರ್ಜರಿಯಾಗಿ ಆರಂಭಿಸಿದ್ದರು. ಆದರೆ ಅಷ್ಟರಲ್ಲೇ ರೊನಾಲ್ಡೋಗೆ ವರ್ಷದ ಮೊದಲ ಸಂಕಷ್ಟ ಎದುರಾಗಿದೆ.
Stay up to date on all the latest ಕ್ರೀಡೆ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp