ಏಷ್ಯಾಕಪ್: ಭಾರತ ಹೊರಕ್ಕೆ, 1-0 ಅಂತರದಿಂದ ಬಹರೇನ್ ಗೆಲುವು

ಎಎಫ್ ಸಿ ಏಷ್ಯಾಕಪ್ ಪುಟ್ ಬಾಲ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋತು ಹೊರ ಬಿದ್ದಿದೆ. ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಬಹರೇನ್ 1-0ಯಿಂದ ಭಾರತವನ್ನು ಮಣಿಸಿತು.

Published: 15th January 2019 12:00 PM  |   Last Updated: 15th January 2019 09:36 AM   |  A+A-


India's defender Sandesh Jhingan  protects India's goalkeeper Gurpreet Singh Sandhu

ಗೋಲ್ ಕೀಪರ್ ಗುಪ್ರೀತ್ ಸಿಂಗ್ ಸಂದು ಅವರನ್ನು ಉಪಚರಿಸುತ್ತಿರುವ ಸಂದೇಶ್ ಝಿಂಗನ್

Posted By : ABN ABN
Source : The New Indian Express
ಶಾರ್ಜಾ: ಹೆಚ್ಚುವರಿ ಅವಧಿಯಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟ ಭಾರತ ತಂಡ ಎಎಫ್ ಸಿ ಏಷ್ಯಾಕಪ್ ಪುಟ್ ಬಾಲ್  ಟೂರ್ನಿಯ  ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋತು ಹೊರ ಬಿದ್ದಿದೆ. ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಬಹರೇನ್ 1-0ಯಿಂದ ಭಾರತವನ್ನು ಮಣಿಸಿತು.

ಕೊನೆಯ ನಿಮಿಷದ ವರೆಗೂ ಕಾದಾಡಿದ ಭಾರತ ತಂಡ ಡ್ರಾ ಸಾಧಿಸಿ ನಾಕೌಟ್ ಹಂತದ ಕನಸು ಜೀವಂತ ವಾಗಿರಿಸಿಕೊಳ್ಳುವ ಭರವಸೆಯಲ್ಲಿತ್ತು. ಆದರೆ.  90 ನೇ ನಿಮಿಷದಲ್ಲಿ  ಪ್ರಣಯ್ ಹಲ್ಡರ್ ಎಸಗಿದ ಪ್ರಮಾಣದ ತಂಡಕ್ಕೆ ಮುಳುವಾಯಿತು.

ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಜಮಾಲ್ ರಶೀದ್  ಬಹರೇನ್ ತಂಡದಲ್ಲಿ ಸಂಭ್ರಮ ಮೂಡಿಸಿದರು.  ಮೊದಲ ಪಂದ್ಯದಲ್ಲಿ ಥಾಯ್ಲೆಂಡ್  ಎದುರು 4-1 ರಿಂದ ಗೆದಿದ್ದ ಭಾರತ ನಂತರ ಯುಎಇ ವಿರುದ್ಧ 0-2 ರಿಂದ ಸೋತಿತ್ತು.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp