ಸೈನಾ ನೆಹ್ವಾಲ್ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಫಿಯನ್

ಭಾರತದ ಅನುಭವಿ ಆಟಗಾರ್ತಿ ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತೆ ಸೈನಾ ನೆಹ್ವಾಲ್‌ ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಮುಡಿಗೇರಿಸಿಕೊಂಡಿದ್ದಾರೆ.
ಮರಿನ್ , ಸೈನಾ
ಮರಿನ್ , ಸೈನಾ

ಜಕಾರ್ತ: ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತೆ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್‌ ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಮುಡಿಗೇರಿಸಿಕೊಂಡಿದ್ದಾರೆ.

ಇಂದು ನಡೆದ ಫೈನಲ್ ಪಂದ್ಯದ ವೇಳೆ ಎದುರಾಳಿ ಮೂರು ಬಾರಿಯ ವಿಶ್ವ
ಚಾಂಪಿಯನ್‌ ಕ್ಯಾರೊಲಿನಾ ಮರಿನ್‌ ಗಾಯದ ಹಿನ್ನಲೆಯಲ್ಲಿ ಪಂದ್ಯದಿಂದ ಹಿಂಜರಿದ ಹಿನ್ನಲೆಯಲ್ಲಿ ಸೈನಾರನ್ನು ವಿಜೇತರೆಂದು ಘೋಷಿಸಲಾಯಿತು.

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಚೀನಾದ ಹಿಬಿಂಗ್‌ಜಿಯಾವೊ ವಿರುದ್ಧ 3 ಗೇಮ್‌ಗಳ  ಕದನದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಸೈನಾ ಲಗ್ಗೆ ಹಾಕಿದರು.

ಇಂದಿನ ಅಂತಿಮ ಸುತ್ತಿನ  ಪಂದ್ಯದಲ್ಲಿ ಮರಿನ್ 10-4ರ ಅಂತರದಲ್ಲಿ ಮುನ್ನಡೆ ದಾಖಲಿಸಿದ್ದರು.ಆದರೆ, ಮೊಣಕಾಲಿಗೆ ಗಾಯಮಾಡಿಕೊಂಡ ಬಳಿಕ ಪಂದ್ಯ ಮುಂದುವರೆಸಲಾಗದೇ ಅರ್ಧದಲ್ಲಿಯೇ ನಿರ್ಗಮಿಸಿದರು.

ಈ ಹಿನ್ನೆಲೆಯಲ್ಲಿ ಸೈನಾ ನೆಹ್ವಾಲ್ ಅವರನ್ನು ವಿಜೇತರೆಂದು ಘೋಷಿಸಲಾಯಿತು.28 ವರ್ಷದ ಹೈದಾರಾಬಾದ್‌ ಆಟಗಾರ್ತಿ ಸೈನಾ, 2018ರಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ
ಚಿನ್ನ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದರು.

ಈ ರೀತಿಯ ಗೆಲುವು ಇಷ್ಟಪಡುವುದಿಲ್ಲ. ಆದಾಗ್ಯೂ,ನಾಲ್ಕರ ಸುತ್ತಿಗೆ ಬಂದಿದದ್ದು ತಮ್ಮಗೆ ಸಂತೋಷವನ್ನುಂಟುಮಾಡಿದೆ ಎಂದು ಸೈನಾ ನೆಹ್ವಾಲ್ ಪಂದ್ಯ ಮುಗಿದ ಬಳಿಕ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com