ಐದು ಸಲ ಚಾಂಪಿಯನ್ ಆಗಿದ್ದ ವೀನಸ್‌ ವಿಲಿಯಮ್ಸ್‌ಗೆ ಆಘಾತ ನೀಡಿದ 15ರ ಪೋರಿ

ಇಲ್ಲಿ ನಡೆಯುತ್ತಿರುವ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ನ ಅತ್ಯಂತ ಕಿರಿಯ ಆಟಗಾರ್ತಿ ಕೋರಿ ಗಾವುಫ್‌(15) ಅವರು ಐದು ಬಾರಿ ಚಾಂಪಿಯನ್‌ ವೀನಸ್‌ ವಿಲಿಯಮ್ಸ್‌ ವಿರುದ್ಧ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದಾರೆ.
ಕೋರಿ ಗಾವುಫ್
ಕೋರಿ ಗಾವುಫ್
ಲಂಡನ್‌: ಇಲ್ಲಿ ನಡೆಯುತ್ತಿರುವ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ನ ಅತ್ಯಂತ ಕಿರಿಯ ಆಟಗಾರ್ತಿ ಕೋರಿ ಗಾವುಫ್‌(15) ಅವರು ಐದು ಬಾರಿ ಚಾಂಪಿಯನ್‌ ವೀನಸ್‌ ವಿಲಿಯಮ್ಸ್‌ ವಿರುದ್ಧ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದಾರೆ. 
ಇಲ್ಲಿನ ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಮೊದಲನೇ ಅಂಗಳದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಸಕ್ತ ಟೂರ್ನಿಗೆ ಅರ್ಹತೆ ಪಡೆದಿದ್ದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೋರಿ ಗಾವುಫ್‌ ಅವರು ಸ್ಟಾರ್‌ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ವಿರುದ್ಧ 6-4, 6-4 ನೇರ ಸೆಟ್‌ಗಳಿಂದ ಗೆದ್ದರು. ಆ ಮೂಲಕ ಪದಾರ್ಪಣೆ ಮಾಡಿದ ಮೊದಲ ಗ್ರ್ಯಾನ್‌ ಸ್ಲ್ಯಾಮ್‌ನಲ್ಲೆ ಅಮೆರಿಕಾ ಸ್ಟಾರ್‌ ಆಟಗಾರ್ತಿಗೆ 15ರ ಪೋರಿ ಆಘಾತ ನೀಡಿದರು. ಅಲ್ಲದೇ ನೆರೆದಿದ್ದ ಅಪಾರ ಟಿನಿಸ್‌ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. 
ಪಂದ್ಯದ ಆರಂಭದಿಂದಲೂ 14ರ ಪ್ರಾಯದ ಆಟಗಾರ್ತಿ ಆತ್ಮವಿಶ್ವಾಸದಿಂದಲೇ ಉತ್ತಮ ಪ್ರದರ್ಶನ ತೋರಿದರು. ಯಾವುದೇ ಒತ್ತಡ ಅಥವಾ ತಳಮಳಗೊಳ್ಳದೇ ವಿಶ್ವ ಶ್ರೇಷ್ಠ ಆಟಗಾರ್ತಿಗೆ ಪ್ರಬಲ ಪೈಪೋಟಿ ನೀಡಿದರು. ಅದರಂತೆ ಮೊದಲನೇ ಸೆಟ್‌ನಲ್ಲಿ 6-4 ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದರು.
ಮೊದಲನೇ ಸೆಟ್‌ನಲ್ಲಿ ಜಯದೊಂದಿಗೆ ಆತ್ಮವಿಶ್ವಾಸದಲ್ಲಿ ಎರಡನೇ ಸೆಟ್‌ಗೆ ಕಣಕ್ಕೆ ಇಳಿದ ಗಾವುಫ್‌ ಮೂರು ಮ್ಯಾಚ್‌ ಪಾಯಿಂಟ್‌ ಪಡೆದರು. ನಂತರ ಬ್ರೇಕ್‌ ಪಾಯಿಂಟ್‌ ಪಡೆದ ವೀನಸ್‌ ವಿಲಿಯಮ್ಸ್‌ ಕಿರಿಯ ಆಟಗಾರ್ತಿಯನ್ನು ನಿಯಂತ್ರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಒಂದು ಗಂಟೆ 16 ನಿಮಿಷ ನಡೆದ ಪಂದ್ಯದಲ್ಲಿ ಕೋರಿ ಗಾವುಫ್‌ 6-4, 6-4 ಅಂತರದಲ್ಲಿ ಗೆದ್ದು ಭರ್ಜರಿ ಶುಭಾರಂಭ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com