ಕೆನಡಾ ಓಪನ್‌: ಫೈನಲ್‌ ತಲುಪಿದ ಭಾರತದ ಪರುಪಳ್ಳಿ ಕಶ್ಯಪ್‌

ಕೆನಡಾ ಓಪನ್‌ 2019 ಬ್ಯಾಡ್ನಿಂಟನ್ ಟೂರ್ನಿಯಲ್ಲಿ ಭಾರತದ ಪರುಪಳ್ಳಿ ಕಶ್ಯಪ್‌ ತಮ್ಮ ಗೆಲುವಿನ ಲಯ ಮುಂದುವರೆಸಿದ್ದು, ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ.

Published: 07th July 2019 12:00 PM  |   Last Updated: 07th July 2019 04:02 AM   |  A+A-


P Kashyap enters final of Canada Open 2019

ಸಂಗ್ರಹ ಚಿತ್ರ

Posted By : SVN SVN
Source : Online Desk
ಕಾಲ್ಗರಿ: ಕೆನಡಾ ಓಪನ್‌ 2019 ಬ್ಯಾಡ್ನಿಂಟನ್ ಟೂರ್ನಿಯಲ್ಲಿ ಭಾರತದ ಪರುಪಳ್ಳಿ ಕಶ್ಯಪ್‌ ತಮ್ಮ ಗೆಲುವಿನ ಲಯ ಮುಂದುವರೆಸಿದ್ದು, ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ.

ಕೆನಡಾದ ಕಾಲ್ಗರಿಯಲ್ಲಿ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ 32ರ ಪ್ರಾಯದ ಕಶ್ಯಪ್‌ ಅವರು ಚೈನೀಸ್ ತೈಫೆಯ ವಾಂಗ್ ಟಿಜು ವೀ ಅವರ ವಿರುದ್ಧ 14-21, 21-17, 21-18, ಅಂತರದಲ್ಲಿ ಗೆದ್ದು ಕೆನಡಾ ಓಪನ್‌ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು. ಭಾನುವಾರ ಒಂದು ಗಂಟೆ 10 ನಿಮಿಷಗಳ ಕಾಲ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕಶ್ಯಪ್‌ ಭರ್ಜರಿ ಗೆಲುವು ಸಾಧಿಸಿದರು.

ಅಂತೆಯೇ ಚೈನೀಸ್‌ ತೈಫೆ ಆಟಗಾರ ವಾಂಗ್‌ ವಿರುದ್ಧ 3-0 ಮುಖಾಮುಖಿ ದಾಖಲೆಯನ್ನು ಪಡೆದುಕೊಂಡರು. ಕಳೆದ ಮಾರ್ಚ್ ನಲ್ಲಿ ಇಂಡಿಯಾ ಓಪನ್ ನಲ್ಲಿ ಆರನೇ ಶ್ರೇಯಾಂಕ ಕಶ್ಯಪ್‌ ಈ ಆಟಗಾರನನ್ನು ಸೋಲಿಸಿದ್ದರು.

ಇನ್ನು ಕಶ್ಯಪ್ ಗೆಲುವಿನ ನಾಗಾಲೋಟಕ್ಕೆ ಅವರ ಪತ್ನಿ ಮತ್ತು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಟ್ವಿಟರ್ ನಲ್ಲಿ ಶುಭ ಕೋರಿದ್ದಾರೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp