ಕಾಮನ್ ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್: ಮಿರಾಬಾಯಿ ಚಾನುಗೆ ಚಿನ್ನ

ಪದ್ಮಶ್ರೀ ಪುರಸ್ಕೃತ, ಭಾರತದ ವೆಯ್ಟ್ ಲಿಫ್ಟರ್ ಮಿರಾಬಾಯಿ ಚಾನು ಅವರು ಕಾಮನ್ ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನ ಮೊದಲ...
ಮಿರಾಬಾಯಿ ಚಾನು
ಮಿರಾಬಾಯಿ ಚಾನು
ನವದೆಹಲಿ: ಪದ್ಮಶ್ರೀ ಪುರಸ್ಕೃತ, ಭಾರತದ ವೆಯ್ಟ್ ಲಿಫ್ಟರ್ ಮಿರಾಬಾಯಿ ಚಾನು ಅವರು ಕಾಮನ್ ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನ ಮೊದಲ ದಿನವಾದ ಮಂಗಳವಾರ ಸ್ವರ್ಣ ಸಾಧನೆ ಮಾಡಿದ್ದಾರೆ.
ಮೀರಾ ಬಾಯಿ ಚಾನು ಅವರು ಒಟ್ಟು 191 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತ ಒಟ್ಟು 13 ಪದಕ ಬಾಚಿಕೊಂಡಿದೆ.
ಮೀರಾ ಬಾಯಿ ಅವರು ಸೀನಿಯರ್ ಮಹಿಳಾ ವಿಭಾಗದಲ್ಲಿ(49 ಕೆಜಿ)ಚಿನ್ನ ಗೆಲ್ಲೋ ಮೂಲಕ 2020ರ ಟೊಕಿಯೋ ಒಲಿಂಪಿಕ್‌ಗೆ ಅರ್ಹತೆಯ ಹಾದಿ ಸುಗಮಗೊಳಿಸಿದ್ದಾರೆ.
ಭಾರತ ಕ್ರೀಡಾ ಕೂಟದ ಮೊದಲ ದಿನ ಜೂನಿಯರ್, ಸೀನಿಯರ್, ಯೂಥ್ ವಿಭಾಗದಲ್ಲಿ 8 ಬಂಗಾರ, 3 ಬೆಳ್ಳಿ, 2 ಕಂಚು ತಮ್ಮದಾಗಿಸಿಕೊಂಡಿದೆ. ಸ್ಪರ್ಧೆಯಲ್ಲಿ ಉತ್ತಮ ಅಂಕ ಹಾಗೂ ಯಾರ್ಕಿಂಗ್ ಆಧಾರದ ಮೇಲೆ ಒಲಿಂಪಿಕ್ಸ್ ಪ್ರವೇಶ ನಿರ್ಧಾರವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com