ವಿಶ್ವ ವಿವಿ ಕ್ರೀಡಾಕೂಟ: ಭಾರತೀಯ ಓಟಗಾರ್ತಿ ದ್ಯುತಿ ಚಾಂದ್‌ಗೆ ದಾಖಲೆಯ ಚಿನ್ನ!

ಭಾರತದ ನಂ.1 ಓಟಗಾರ್ತಿ ದ್ಯುತಿ ಚಾಂದ್‌ ಅವರು ಇಟಲಿಯ ನಪೋಲಿಯಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಟಿ ಕ್ರೀಡಾಕೂಟದ 100 ಮೀ ಓಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

Published: 10th July 2019 12:00 PM  |   Last Updated: 10th July 2019 12:35 PM   |  A+A-


Dutee Chand First Indian Woman To Win 100m Gold In World Universiade

ವಿಶ್ವ ವಿವಿ ಕ್ರೀಡಾಕೂಟ: ಭಾರತೀಯ ಓಟಗಾರ್ತಿ ದ್ಯುತಿ ಚಾಂದ್‌ಗೆ ದಾಖಲೆಯ ಚಿನ್ನ!

Posted By : RHN RHN
Source : UNI
ನಪೋಲಿ: ಭಾರತದ ನಂ.1 ಓಟಗಾರ್ತಿ ದ್ಯುತಿ ಚಾಂದ್‌ ಅವರು ಇಟಲಿಯ ನಪೋಲಿಯಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಟಿ ಕ್ರೀಡಾಕೂಟದ 100 ಮೀ ಓಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಪ್ರಸಕ್ತ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಭಾರತೀಯ ಓಟಗಾರ್ತಿ ಎಂಬ ಮೈಲಿಗಲ್ಲನ್ನು ಸೃಷ್ಠಿಸಿದರು.

ಪದಕ ಸುತ್ತಿನಲ್ಲಿ ದ್ಯುತಿ ಚಾಂದ್‌ ಅವರು 100ಮೀ ಅಂತರವನ್ನು 11.32 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾದರು. ಇದಕ್ಕೂ ಮುನ್ನ ಅವರು 100 ಮೀ ಓಟವನ್ನು 11.24 ಸೆಕೆಂಡ್‌ಗಳನ್ನು ಮುಗಿಸುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದರು. ಸೆಮಿಫೈನಲ್‌ನಲ್ಲಿ 11.41 ಸೆಕೆಂಡ್‌ಗಳನ್ನು ಮುಗಿಸಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಪ್ರಶಸ್ತಿ ಸುತ್ತನ್ನು ಅತ್ಯುತ್ತಮ ಮುಗಿಸುವ ಮೂಲಕ ಚಾಂಪಿಯನ್‌ ಆದರು.

ಪ್ರಸಕ್ತ ಆವೃತ್ತಿಯಲ್ಲಿ ಇದು ಭಾರತಕ್ಕೆ ಮೊದಲ ಚಿನ್ನದ ಪದಕ ಹಾಗೂ 100 ಮೀ ಓಟದಲ್ಲಿ ಭಾರತದ ಓಟಗಾರ್ತಿ ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲ ಬಾರಿ. ಈ ಹಿಂದೆ 100ಮೀ ವಿಭಾಗದ ಫೈನಲ್‌ಗೆ ಯಾರು ಅರ್ಹತೆ ಪಡೆದಿರಲಿಲ್ಲ. 

ಪದಕ ಗಳಿಸಿದ ನಂತರ ಮಾತನಾಡಿದ ದ್ಯುತಿ "ಈ ಸಾಧನೆ ಬಗೆಗೆ ಹೆಮ್ಮೆ ಎನಿಸುತ್ತದೆ. ನನಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದ ಕೆಇಐಟಿ ವಿವಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಒಡಿಶಾದ ಜನತೆಗೆ ನಾನು ಈ ಪದಕವನ್ನು ಸಮರ್ಪಿಸುತ್ತೇನೆ" ಎಂದಿದ್ದಾರೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp