ವಿಂಬಲ್ಡನ್: ಸೆರೆನಾ ಮಣಿಸಿದ ಸಿಮೋನಾ ಹಲೆಪ್ ಚಾಂಪಿಯನ್

24ನೇ ಗ್ರ್ಯಾನ್ ಸ್ಲ್ಯಾಮ್ ಕನಸಿನಲ್ಲಿದ್ದ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರಪೆಟ್ಟು ನೀಡಿದ ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸಿಮೋನಾ ಹಲೆಪ್, ವಿಂಬಲ್ಡನ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು...
ಸಿಮೋನಾ ಹಲೆಪ್
ಸಿಮೋನಾ ಹಲೆಪ್
ಲಂಡನ್: 24ನೇ ಗ್ರ್ಯಾನ್ ಸ್ಲ್ಯಾಮ್ ಕನಸಿನಲ್ಲಿದ್ದ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರಪೆಟ್ಟು ನೀಡಿದ ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸಿಮೋನಾ ಹಲೆಪ್, ವಿಂಬಲ್ಡನ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಹಲೆಪ್ 6-2, 6-2 ರಿಂದ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿ, 56 ನಿಮಿಷದ ಕಾದಾಟದಲ್ಲಿ ಗೆದ್ದರು.
ಭರ್ಜರಿ ಪ್ರದರ್ಶನವನ್ನು ನೀಡಿದ ಸಿಮೋನಾ ಅವರು ಅಂಕಗಳನ್ನು ಕಲೆ ಹಾಕುತ್ತಾ ಸಾಗಿದರು. ಎರಡು ನೇರ ಸೆಟ್ ಗಳಲ್ಲಿ ಸೆರೆನಾ ಅವರನ್ನು ಮಣಿಸಿದ ಹಲೆಪ್, ಅಭಿಮಾನಿಗಳನ್ನು ಆಕರ್ಷಿಸಿದರು. 
ಇದೇ ಮೊದಲ ಬಾರಿಗೆ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿರುವ ಹಲೆಪ್ ಮುಡಿಗೆ ಇದು ಎರಡನೇ ಗ್ರ್ಯಾನ್ ಸ್ಲ್ಯಾಮ್ ಗರಿಯಾಗಿದೆ. ಸೆರೆನಾ 2002, 2003, 2009, 2010, 2012, 2015, 2016ರಲ್ಲಿ ವಿಂಬಲ್ಡನ್ ಪಟ್ಟ ಅಲಂಕರಿಸಿದ್ದರು. 
ಸೆರೆನಾ ಅವರು ಈ ಬಾರಿಯ ವಿಂಬಲ್ಡನ್ ಗೆದ್ದು ಗರಿಷ್ಠ ಗ್ರ್ಯಾನ್ ಸ್ಲ್ಯಾಮ್ ದಾಖಲೆಯನ್ನು ಸರಿ ಗಟ್ಟಿರುವ ಕನಸು ಹೊಂದಿದ್ದರು. ಮಾರ್ಗರೇಟ್ ಕೋರ್ಟ್ ಒಟ್ಟು 24 ಗ್ರ್ಯಾನ್ ಸ್ಲ್ಯಾಮ್ ಎತ್ತಿ ಸಾಧನೆ ಮಾಡಿದ್ದರು. ಸೆರೆನಾ ಗರಿಷ್ಠ ಗ್ರ್ಯಾನ್ ಸ್ಲ್ಯಾಮ್ ಗೆದ್ದ ಆಟಗಾರ್ತಿಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com