ಅಜೇಯನಾದ ವಿಜಯೇಂದರ್ ಗೆ 11ನೇ ಬಾಕ್ಸಿಂಗ್ ಪ್ರಶಸ್ತಿ

ಭಾರತದ ಸ್ಟಾರ್‌ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಅವರು ಅಮೆರಿಕದ ವೃತ್ತಿಪರ ಸರ್ಕ್ಯೂಟ್‌ ಬಾಕ್ಸಿಂಗ್‌ನ ತಾಂತ್ರಿಕ ನಾಕೌಟ್‌ ಪಂದ್ಯದಲ್ಲಿ ಚೊಚ್ಚಲ ಜಯ ಸಾಧಿಸಿದ್ದಾರೆ.
ವಿಜೇಂದರ್‌ ಸಿಂಗ್‌
ವಿಜೇಂದರ್‌ ಸಿಂಗ್‌
ನ್ಯೂಯಾರ್ಕ್‌: ಭಾರತದ ಸ್ಟಾರ್‌ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಅವರು ಅಮೆರಿಕದ ವೃತ್ತಿಪರ ಸರ್ಕ್ಯೂಟ್‌ ಬಾಕ್ಸಿಂಗ್‌ನ ತಾಂತ್ರಿಕ ನಾಕೌಟ್‌ ಪಂದ್ಯದಲ್ಲಿ ಚೊಚ್ಚಲ ಜಯ ಸಾಧಿಸಿದ್ದಾರೆ.
ಶನಿವಾರ ರಾತ್ರಿ ಇಲ್ಲಿನ ಪ್ರುಡೆನ್ಸಿಯಲ್‌ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ 34ರ ಪ್ರಾಯದ ಏಷ್ಯನ್‌ ಮಿಡ್‌ವೇಟ್‌ ಚಾಂಪಿಯನ್‌ ವಿಜೇಂದರ್‌ ಸಿಂಗ್‌ ಅವರು ಅಮೆರಿಕದ ಅನುಭವಿ ಮೈಕ್‌ ಸ್ನಿಂಡರ್‌ ಅವರ ವಿರುದ್ಧ ನಾಲ್ಕನೇ ಸುತ್ತಿನಲ್ಲಿ ಪಾರಮ್ಯ ಮೆರೆದರು. ಆ ಮೂಲಕ ವಿಜೇಂದರ್‌ ಅವರು ತಮ್ಮ ವೃತ್ತಿ ಜೀವನದಲ್ಲಿ 11ನೇ ಗೆಲುವು ದಾಖಲಿಸಿದರು.
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಅವರು, "ಸುದೀರ್ಘ ಅವಧಿಯ ಬಳಿಕ ಮತ್ತೇ ಬಾಕ್ಸಿಂಗ್‌ ರಿಂಗ್‌ಗೆ ಮರಳಿದ್ದು, ತುಂಬಾ ಖುಷಿಯಾಗಿದೆ. ಅಮೆರಿಕದಲ್ಲಿ ಜಯ ಸಾಧಿಸಿರುವುದು ಅತ್ಯಂತ ಹೆಚ್ಚಿನ ಖುಷಿ ನೀಡಿದೆ. ಯುಎಸ್‌ಎ ನಲ್ಲಿ ಪದರ್ಪಾಣೆಯ ಪಂದ್ಯದಲ್ಲಿ ಗೆದ್ದಿರುವುದು ಹೆಚ್ಚಿನ ಸಂತಸ ತಂದಿದೆ" ಎಂದಿದ್ದಾರೆ.
ಪಂದ್ಯದ ನಾಲ್ಕನೇ ಸುತ್ತಿನಲ್ಲಿ ಎರಡನೇ ನಿಮಿಷದಲ್ಲಿ ವಿಜೇಂದರ್ ಸ್ನಿಡರ್ ಅನ್ನು ನೇರ ಹೊಡೆತಗಳಿಂದ ಮೂಲೆಗುಂಪಾಗಿಸಿದಾಗ, ಭಾರತೀಯ ಬಾಕ್ಸರ್ ಪರವಾಗಿ ರೆಫರಿ ತೀರ್ಪು ಕೊಟ್ಟಿದ್ದರು.
ಇದು ವಿಜೇಂದರ್ ಅವರ ಎಂಟನೇ ನಾಕೌಟ್ ಗೆಲುವು.
ಮಾಜಿ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಚಾಂಪಿಯನ್ ವಿಜೇಂದರ್ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com