ವಿಂಬಲ್ಡನ್: ಫೆಡರರ್ ಗೆ ಸೆಡ್ಡು ಹೊಡೆದ ಜೊಕೊವಿಚ್ ಗೆ ಐದನೇ ಬಾರಿ ಚಾಂಪಿಯನ್ ಪಟ್ಟ

ಇಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ ಸರ್ಬಿಯಾದ ನೋವಾಕ್ ಜೊಕೊವಿಚ್ ಭರ್ಜರಿ ಪ್ರದರ್ಶನ ನೀಡಿ....
ಜೊಕೊವಿಚ್
ಜೊಕೊವಿಚ್
ಲಂಡನ್:  ಇಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ ಸರ್ಬಿಯಾದ ನೋವಾಕ್ ಜೊಕೊವಿಚ್ ಭರ್ಜರಿ ಪ್ರದರ್ಶನ ನೀಡಿ, ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ವಿಜೇತ ಸ್ವಿಟ್ಜರ್ ಲ್ಯಾಂಡ್ ನ ರೋಜರ್ ಫೆಡರರ್ ಅವರನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಭಾನುವಾರ ನಡೆದ ಪಂದ್ಯದಲ್ಲಿ ಜೊಕೊ 7-6, 1-6, 7-6, 4-6, 13-12 ರಿಂದ ಫೆಡರರ್ ಅವರನ್ನು 4 ಗಂಟೆ 57 ನಿಮಿಷ ನಡೆದ ಕಾದಾಟದಲ್ಲಿ ಮಣಿಸಿದರು. ಇದು ಜೊಕೊವಿಚ್ ವೃತ್ತಿ ಜೀವನದ 16ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಆಗಿದೆ. ಅಲ್ಲದೆ ಐದನೇ ಬಾರಿಗೆ ನೋವಾಕ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಇದಕ್ಕೂ ಮೊದಲು ಜೊಕೊ ಅವರು 2011, 2014, 2015, 2018ರಲ್ಲಿ ವಿಂಬಲ್ಡನ್ ಟೂರ್ನಿಗೆ ಮುತ್ತಿಟ್ಟಿದ್ದರು. 
ಇದರೊಡನೆ ಫೆಡರರ್ ವೃತ್ತಿ ಬದುಕಿನ ಇಪ್ಪತ್ತೊಂದನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗಳಿಸುವ ಆಸೆ ನುಚ್ಚುನೂರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com