ಅಸ್ಸಾಂ ಪ್ರವಾಹ -ಸಂತ್ರಸ್ತರಿಗೆ ಸಂಬಳದ ಅರ್ಧದಷ್ಟು ಹಣ ದೇಣಿಗೆ ನೀಡಿದ ಹಿಮಾ ದಾಸ್

ರಡು ವಾರಗಳಲ್ಲಿ ಮೂರು ಚಿನ್ನದ ಪದಕಗಳೊಡನೆ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಭಾರತದ ಚಿನ್ನದ ಹುಡುಗಿ ಹಿಮಾದಾಸ್ ತಾವು ಮಾನವೀಯ ಗುಣಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಹಿಮಾದಾಸ್
ಹಿಮಾದಾಸ್
ನವದೆಹಲಿ: ಎರಡು ವಾರಗಳಲ್ಲಿ ಮೂರು ಚಿನ್ನದ ಪದಕಗಳೊಡನೆ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಭಾರತದ ಚಿನ್ನದ ಹುಡುಗಿ ಹಿಮಾದಾಸ್ ತಾವು ಮಾನವೀಯ ಗುಣಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಸ್ಸಾಮ್ ನಲ್ಲಿ ಎದುರಾಗಿರುವ ಭೀಕರ ಪ್ರವಾಹದಿಂದ ಸಂತ್ರಸ್ತರಾದವರ ನೆರವಿಗೆ ಮುಂದಾಗಿರುವ ಆಟಗಾರ್ತಿ ತನ್ನ ಮಾಸಿಕ ವೇತನದ ಅರ್ಧ ಭಾಗವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. 
ಮಂಗಳವಾರ ಈ ಬಗ್ಗೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿರುವ ಹಿಮಾದಾಸ್ "ನನ್ನ ಚಿಕ್ಕ ಕೊಡುಗೆಯನ್ನು ನಾನು ನೀಡಿದ್ದೇನೆ.ದೇಶದ ಉಳಿದ ಶ್ರೀಮಂತರು, ಉದ್ಯಮಿಗಳು ತಾವೂ ಅಸ್ಸಾಂ ನೆರೆ ಪೀಡಿತರಿಗೆ ನೆರವಾಗಿರಿ" ಎಂದು ಕಳಕಳಿಯ ಮನವಿ ಮಾಡಿದ್ದಾರೆ.
ಕೆಲ ದಿನಗಳಿಂದ ಅಸ್ಸಾಂನಲ್ಲಿ ಭಾರೀ ಮಳೆಯಾಗುತ್ತಿದ್ದು ನದಿ ಪ್ರವಾಹದಿಂದ ಮನೆಗಳು, ದೇವಾಲಯಗಳು,ಸೇರಿ ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ, ಲಕ್ಷಾಂತರ ಜನರ ಜಿವನ ಬೀದಿಗೆ ಬಂದಿದೆ. ರಾಜ್ಯದ 33 ಜಿಲ್ಲೆಗಳಲ್ಲಿ 30 ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದೆ. ಇದುವರೆಗೆ  17ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 47 ಲಕ್ಷ ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ.
ಹಿಮಾದಾಸ್ ಇತ್ತೀಚೆಗೆ ಮುಕ್ತಾಯಗೊಂಡ ಕ್ಲಾಡೋ ಅಥ್ಲೆಟಿಕ್ಸ್ ಮೀಟ್, ಕುಂಟೋ ಅಥ್ಲೆಟಿಕ್ಸ್ ಮೀಟ್ ಮತ್ತು ಪೊಝ್ನಾನ್ ಗ್ರ್ಯಾಂಡ್‌ಪ್ರಿಕ್ಸ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗಳಿಸಿ ದೇಶದ ಹೆಮ್ಮೆಯನ್ನು ಹೆಚ್ಚುವಂತೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com