ಇಂಡೋನೇಷಿಯಾ ಓಪನ್: ಭರ್ಜರಿ ಪ್ರದರ್ಶನ ನೀಡಿದ ಪಿವಿ ಸಿಂಧು ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ ಸಿಂಧು ಅವರು ಭರ್ಜರಿ ಪ್ರದರ್ಶನ ಮುಂದುರೆಸಿದ್ದು ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಗೆ ಅರ್ಹತೆ ಪಡೆದಿದ್ದಾರೆ.
ಪಿವಿ ಸಿಂಧು
ಪಿವಿ ಸಿಂಧು
ಜಕಾರ್ತಾ: ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ ಸಿಂಧು ಅವರು ಭರ್ಜರಿ ಪ್ರದರ್ಶನ ಮುಂದುರೆಸಿದ್ದು ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಗೆ ಅರ್ಹತೆ ಪಡೆದಿದ್ದಾರೆ.
ಗುರುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ಸ್ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 21-14, 17-21, 21-11 ರಿಂದ ಡೆನ್ಮಾರ್ಕ್ ನ ಮಿಯಾ ಬ್ಲಿಚೆಫರ್ಡ್ ವಿರುದ್ಧ ಒಂದು ಗಂಟೆ ಎರಡು ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿದರು.
ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಪಿ.ವಿ.ಸಿಂಧು ಅವರು ಮಿಯೊ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಸಿಂಧು ಕ್ವಾರ್ಟರ್ ಫೈನಲ್ಸ್ ನಲ್ಲಿ ಜಪಾನ್ ನ ನೋಜೊಮಿ ಓಕೊಹಾರ ವಿರುದ್ಧ ಕಾದಾಟ ನಡೆಸಲಿದ್ದಾರೆ. ಈ ಇಬ್ಬರು ಸ್ಟಾರ್ ಆಟಗಾರ್ತಿಯರು ಈ ಹಿಂದೆ 14 ಬಾರಿ ಮುಖಾಮುಖಿಯಾಗಿದ್ದು, ತಲಾ ಏಳು ಜಯ ಸಾಧಿಸಿದ್ದಾರೆ. ಸಿಂಗಾಪುರ್ ಓಪನ್ ನಲ್ಲಿ ಓಕೋಹಾರ ವಿರುದ್ಧ ಸೋಲು ಕಂಡಿದ್ದ ಸಿಂಧು, ವರ್ಲ್ಡ್ ಟೂರ್ ಫೈನಲ್ಸ್‌ ಹಾಗೂ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಜಯ ಸಾಧಿಸಿದ್ದರು.
ಮೊದಲ ಗೇಮ್ ನಲ್ಲಿ ಜಯ ಸಾಧಿಸಿದ ಸಿಂಧು, ಎರಡನೇ ಗೇಮ್ ನಲ್ಲಿ ಸೋಲು ಕಂಡರು. ಮೂರನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ, ಸಿಂಧು ಜಯ ಸಾಧಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com