ಇಂಡೋನೇಷಿಯಾ ಓಪನ್: ಭಾರತಕ್ಕೆ ಪ್ರಶಸ್ತಿ ಖಚಿತಪಡಿಸಿದ ಪಿವಿ ಸಿಂಧೂ ಫೈನಲ್ ಪ್ರವೇಶ

ಭಾರತದ ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್ 2019 ಫೈನಲ್ಸ್ ಪ್ರವೇಶಿಸಿದ್ದಾರೆ.

Published: 20th July 2019 12:00 PM  |   Last Updated: 20th July 2019 07:19 AM   |  A+A-


PV Sindhu

ಪಿವಿ ಸಿಂಧೂ

Posted By : RHN RHN
Source : ANI
ಜಕಾರ್ತಾ: ಭಾರತದ ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್ 2019 ಫೈನಲ್ಸ್ ಪ್ರವೇಶಿಸಿದ್ದಾರೆ. 

ಶನಿವಾರ ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಿಂಧು ಚೀನಾದ ಚೆನ್ ಯೂಫಿ ಅವರನ್ನು 21-19, 21-10 ಅಂತರದಲ್ಲಿ ಪರಾಜಿತಗೊಳಿಸಿ ಫೈನಲ್ ಗೇರಿದ್ದಾರೆ.

ಆರಂಭದಲ್ಲಿ ಪಾಯಿಂಟ್ ಗಳಿಕೆಯಲ್ಲಿ ಹಿಂದಿದ್ದ ಸಿಂಧೂ ಅಂತಿಮ ಹೋರಾಟದ ವೇಳೆ ಜಯದಕ್ಕಿಸಿಕೊಳ್ಳುವುದಕ್ಕೆ ಸಫಲವಾಗಿದ್ದರು.ಮೊದಲ ಪಂದ್ಯದ ಮಧ್ಯ ವಿರಾಮದ ವೇಳೆಗೆ, ಸಿಂಧು ಒಂದು ಪಾಯಿಂಟ್ ಹಿನ್ನಡೆಯಲ್ಲಿದ್ದರು ಆದರೆ ಅವರು 21-19ರಿಂದ ಆಟವನ್ನು ಜಯದತ್ತ ತಗೆದುಕೊಂಡು ಹೋಗಲು ಸಮರ್ಥರಾದರು. ಎರಡನೇ ಗೇಮ್‌ನಲ್ಲಿ ಅಂತಿಮ ಕ್ಷಣದಲ್ಲಿ ಸಿಂಧೂ ತನ್ನ ಚೀನಾ ಎದುರಾಳಿಯನ್ನು ನೇರ ಸೆಟ್ ಗಳಲ್ಲಿ ಮಣಿಸಿದ್ದರು.

ಇದಕ್ಕೆ ಹಿಂದೆ ಶುಕ್ರವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸಿಂಧೂ ಜಪಾನ್ ನ ನೋಜೊಮಿ ಓಕಾಹಾರ ವಿರುದ್ಧ  21-14, 21-7 ರಿಂದ ಜಯ ಸಾಧಿಸಿ ಸೆಮೀಸ್ ಹಂತಕ್ಕೆ ತಲುಪಿದ್ದರು.

ಇದೀಗ ಸಿಂಧೂ ಭಾನುವಾರ ನಡೆಯುವ ಫೈನಲ್ ಸುತ್ತಿನ ಪಂದ್ಯದಲ್ಲಿ ಯಮಗುಚಿ  ವಿರುದ್ಧ ಪ್ರಶಸ್ತಿಗಾಗಿ ಸೆಣೆಸುವವರಿದ್ದಾರೆ.
Stay up to date on all the latest ಕ್ರೀಡೆ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp