ಕಜಕಿಸ್ತಾನದ ಪ್ರೆಸಿಡೆಂಟ್ ಕಪ್ ಬಾಕ್ಸಿಂಗ್: ಶಿವ ಥಾಪಾಗೆ ಸ್ವರ್ಣ ಪದಕ, ಪರವೀಣ ಬೆಳ್ಳಿ ಮಿಂಚು!

: ನಾಲ್ಕು ಬಾರಿ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಪದಕ ಸಾಧನೆ ಮಾಡಿರುವ ಶಿವ ಥಾಪ ಕಜಕಿಸ್ತಾನದ ನೂರ ಸುಲ್ತಾನ್ ನಲ್ಲಿ ಆಯೋಜಿಸಲಾಗಿದ್ದ ಪ್ರೆಸಿಡೆಂಟ್ ಕಪ್ ಬಾಕ್ಸಿಂಗ್ ಚಾಂಪಿಯನ್ ಶಿಪ್....

Published: 20th July 2019 12:00 PM  |   Last Updated: 20th July 2019 08:03 AM   |  A+A-


Shiva Thapa

ಶಿವ ಥಾಪ

Posted By : RHN RHN
Source : UNI
ನವದೆಹಲಿ: ನಾಲ್ಕು ಬಾರಿ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಪದಕ ಸಾಧನೆ ಮಾಡಿರುವ ಶಿವ ಥಾಪ ಕಜಕಿಸ್ತಾನದ ನೂರ ಸುಲ್ತಾನ್ ನಲ್ಲಿ ಆಯೋಜಿಸಲಾಗಿದ್ದ ಪ್ರೆಸಿಡೆಂಟ್ ಕಪ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 63 ಕೆಜಿ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿದ್ದು, ಮಹಿಳೆಯರ 60 ಕೆ.ಜಿ ವಿಭಾಗದಲ್ಲಿ ಪರವೀಣ ಬೆಳ್ಳಿ ಸಾಧನೆ ಮಾಡಿದ್ದಾರೆ.

ಭಾರತ ಈ ಟೂರ್ನಿಯಲ್ಲಿ ಒಂದು ಸ್ವರ್ಣ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಪಡೆದು ಬೀಗಿದೆ.

ಥಾಪ ಅವರ ಎದುರಾಳಿ ಕಜಕಿಸ್ತಾನ್ ದ ಜಾಕೀರ್ ಸೈಫುಲೀನ್ ಅವರು ಸೆಮಿಫೈನಲ್ಸ್ ನಲ್ಲಿ ಗಾಯಕ್ಕೆ ತುತ್ತಾಗಿದ್ದರಿಂದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಇಳಿಯಲಿಲ್ಲ. ಪರಿಣಾಮ ಶಿವ ಥಾಪ ಬಂಗಾರದ ಪದಕಕ್ಕೆ ಕೊರಳೊಡಿದರು. ಇದೇ ವರ್ಷದ ಆರಂಭದಲ್ಲಿ ಇಂಡಿಯಾ ಓಪನ್ ನಲ್ಲಿ ಶಿವ ಸ್ವರ್ಣದ ನಗೆ ಬೀರಿದ್ದರು. 

Stay up to date on all the latest ಕ್ರೀಡೆ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp