ಭಾರತೀಯ ಬಾಡಿಬಿಲ್ಡರ್ ರವೀಂದರ್ ಗೆ 'ಮಿಸ್ಟರ್ ಸೌತ್ ಏಷ್ಯಾ' ಪ್ರಶಸ್ತಿ

ಭಾರತದ ಹೆಮ್ಮೆಯ ಬಾಡಿಬಿಲ್ಡರ್ ರವೀಂದರ್ ಕುಮಾರ್ ಮಲಿಕ್ "ಮಿ. ಸೌತ್ ಏಷ್ಯಾ" ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಠ್ಮಂಡು: ಭಾರತದ ಹೆಮ್ಮೆಯ ಬಾಡಿಬಿಲ್ಡರ್ ರವೀಂದರ್ ಕುಮಾರ್ ಮಲಿಕ್ "ಮಿ. ಸೌತ್ ಏಷ್ಯಾ" ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ನಿನ್ನೆ ಕಠ್ಮಂಡುವಿನಲ್ಲಿ ನಡೆದ 12 ನೇ ದಕ್ಷಿಣ ಏಷ್ಯಾಬಾಡಿಬಿಲ್ಡಿಂಗ್ ಮತ್ತು ಫಿಸಿಕ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ರವೀಂದರ್ ಈ ಸಾಧನೆ ಮಾಡಿದ್ದಾರೆ.
80 ಕೆಜಿ ವಿಭಾಗದಲ್ಲಿ ರವೀಂದರ್ ಈ ಪ್ರಶಸ್ತಿ ಗೆದ್ದಿದ್ದು ಒಂಬತ್ತು ಹಿರಿಯ ಪುರುಷವಿಭಾಗದ ವಿಜೇತರಲ್ಲಿ ಅತ್ಯುತ್ತಮ ಬಾಡಿಬಿಲ್ಡರ್ ಆಗಿ ಆಯ್ಕೆಯಾದರು
ಇನ್ನು ಚಾಂಪಿಯನ್‌ಶಿಪ್‌ನಲ್ಲಿ 535 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಗಳಿಸುವ ಮೂಲಕ ಅಫ್ಘಾನಿಸ್ತಾನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ ಆತಿಥೇಯ ನೇಪಾಳ 445 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಭಾರತವು 380 ಅಂಕಗಳೊಂದಿಗೆ ಮೂರನೇ ಸ್ಥಾನ ತನ್ನದಾಗಿಸಿಕೊಂಡಿದೆ.
ಅಫ್ಘಾನಿಸ್ತಾನವು ಆರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಐದು ಕಂಚು ಸೇರಿದಂತೆ ಒಟ್ಟು 15 ಪದಕಗಳನ್ನು ಗೆದ್ದಿದೆ. ನೇಪಾಳ ಮೂರು ಚಿನ್ನ, ಏಳು ಬೆಳ್ಳಿ ಮತ್ತು ಆರು ಕಂಚು ಪಡೆದಿದ್ದು, ಭಾರತ ನಾಲ್ಕು ಚಿನ್ನ, ಐದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದೆ. ಮಾಲ್ಡೀವ್ಸ್ ಮೂರು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದೆ, ಪಾಕಿಸ್ತಾನ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚು ಗೆದ್ದರೆ, ಭೂತಾನ್ ಕಂಚಿನ ಪದಕದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ನೇಪಾಳ ಬಾಡಿಬಿಲ್ಡಿಂಗ್ ಮತ್ತು ಫಿಟ್‌ನೆಸ್ ಅಸೋಸಿಯೇಶನ್‌ನ ಆಶ್ರಯದಲ್ಲಿ ದಕ್ಷಿಣ ಏಷ್ಯಾದ ಬಾಡಿಬಿಲ್ಡಿಂಗ್ ಮತ್ತು ಫಿಸಿಕ್ ಸ್ಪೋರ್ಟ್ಸ್ ಫೆಡರೇಶನ್ ಆಯೋಜಿಸಿದ್ದ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 91 ಬಾಡಿಬಿಲ್ಡರ್‌ಗಳು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com