ಇಂಡೋನೇಷಿಯಾ ಓಪನ್ ಫೈನಲ್ಸ್: ಜಪಾನ್ ಆಟಗಾರ್ತಿ ಎದುರು ಮಣಿದ ಸಿಂಧೂಗೆ ರನ್ನರ್ ಅಪ್ ಸ್ಥಾನ

ಇಂಡೋನೇಷ್ಯಾ ಓಪನ್ ಪಂದ್ಯಾವಳಿ ಭಾನುವಾರ ನಡೆದ ಫೈನಲ್ ಸುತ್ತಿನ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧೂ ಜಪಾನ್‌ನ ಅಕಾನೆ ಯಮಗುಚಿ ಎದುರು ಸೋಲನುಭವಿಸಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.

Published: 21st July 2019 12:00 PM  |   Last Updated: 21st July 2019 03:29 AM   |  A+A-


Posted By : RHN RHN
Source : The New Indian Express
ಜಕಾರ್ತಾ: ಇಂಡೋನೇಷ್ಯಾ ಓಪನ್ ಪಂದ್ಯಾವಳಿ ಭಾನುವಾರ ನಡೆದ ಫೈನಲ್ ಸುತ್ತಿನ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧೂ ಜಪಾನ್‌ನ ಅಕಾನೆ ಯಮಗುಚಿ ಎದುರು ಸೋಲನುಭವಿಸಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.

ಸಿಂಧೂ ಯಮಗುಚಿ ಅವರ ವಿರುದ್ಧ 15-21 16-21ರ ನೇರ ಸೆಟ್ ಗಳಿಂದ ಪರಾಜಿತರಾದರು.

ಒಲಂಪಿಕ್ ಬೆಳ್ಳಿ ಪದಕ ವಿಜೇತರಾದ ಸಿಂಧೂ ಶನಿವಾರ ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಚೀನಾದ ಚೆನ್ ಯೂಫಿ ಅವರನ್ನು 21-19, 21-10 ಅಂತರದಲ್ಲಿ ಪರಾಜಿತಗೊಳಿಸಿ ಫೈನಲ್ ಪ್ರವೇಶಿಸಿದ್ದರು. 

ಈ ಹಿಂದೆ ಸಿಂಗಾಪುರ ಮತ್ತು ಇಂಡಿಯಾ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ ವಿಶ್ವದ ಐದನೇ ಕ್ರಮಾಂಕದ ಭಾರತೀಯ ಆಟಗಾರ್ತಿ ಸಿಂಧೂ ಪಾಲಿಗೆ ಇದು ಈ ವರ್ಷದ ಅತ್ಯುತ್ತಮ ಪ್ರದರ್ಶನವಾಗಿದೆ.

Stay up to date on all the latest ಕ್ರೀಡೆ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp