ಕಾಮನ್ವೆಲ್ತ್ ಟಿಟಿ: ಕನ್ನಡತಿ ಅರ್ಚನಾ ಜೋಡಿಗೆ ಮಿಶ್ರ ಡಬಲ್ಸ್ ಬಂಗಾರ

21ನೇ ಟೆಬಲ್ ಟೆನಿಸ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಿಶ್ರ ಡಬಲ್ಸ್ ನಲ್ಲೂ ಸ್ವರ್ಣ ಸಾಧನೆ ಮಾಡಿದೆ.

Published: 22nd July 2019 12:00 PM  |   Last Updated: 22nd July 2019 08:22 AM   |  A+A-


Commonwealth TT: Kannada girl Archana Kamath-Sathiyan pair wins mixed double gold medal

ಕಾಮನ್ವೆಲ್ತ್ ಟಿಟಿ: ಕನ್ನಡತಿ ಅರ್ಚನಾ ಜೋಡಿಗೆ ಮಿಶ್ರ ಡಬಲ್ಸ್ ಬಂಗಾರ

Posted By : RHN RHN
Source : UNI
ಕಟಕ್: 21ನೇ ಟೆಬಲ್ ಟೆನಿಸ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಿಶ್ರ ಡಬಲ್ಸ್ ನಲ್ಲೂ ಸ್ವರ್ಣ ಸಾಧನೆ ಮಾಡಿದೆ.

ಭಾನುವಾರ ನಡೆದ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಸತ್ಯನ್ ಹಾಗೂ ಕನ್ನಡತಿ ಅರ್ಚನಾ ಕಾಮತ್ ಅವರನ್ನು ಒಳಗೊಂಡ ತಂಡ 3-0ಯಿಂದ ಸಿಂಗಾಪುರದ ಪೆಂಗ್ ಯು ಎನ್ ಕೊಯೆನ್-ಗೋಯಿ ರುಯಿ ಕ್ಸುವಾನ್ ವಿರುದ್ಧ ಜಯ ಸಾಧಿಸಿದ್ದಾರೆ. 

ಸೆಮಿಫೈನಲ್ಸ್ ನಲ್ಲಿ ಸಹ ಅರ್ಚನಾ-ಸತ್ಯನ್ ಜೋಡಿ ಭಾರತದ ಶ್ರೀಜಾ ಅಕುಲಾ-ಅಚಂತ ಶರತ್‌ ಕಮಲ್‌ ಅವರನ್ನು ಮಣಿಸಿತ್ತು. 

ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಮೂರನೇ ಚಿನ್ನದ ಪದಕವಾಗಿದೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp