ಐತಿಹಾಸಿಕ ಸಾಧನೆ; ಕಾಮನ್ ವೆಲ್ತ್ ಟೆಬಲ್ ಟೆನಿಸ್ ನಲ್ಲಿ ಎಲ್ಲ ಏಳು ಚಿನ್ನದ ಪದಕ ಗೆದ್ದ ಭಾರತ

ಕಟಕ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಟೆಬಲ್ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಟೂರ್ನಿಯ ಎಲ್ಲ ಏಳೂ ಚಿನ್ನದ ಪದಕಗಳನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಟಕ್: ಕಟಕ್ ನಲ್ಲಿ ನಡೆಯುತ್ತಿರುವ  21ನೇ ಕಾಮನ್ ವೆಲ್ತ್ ಟೆಬಲ್ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಟೂರ್ನಿಯ ಎಲ್ಲ ಏಳೂ ಚಿನ್ನದ ಪದಕಗಳನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ತವರು ನೆಲದ ಲಾಭ ಪಡೆದು ಪದಕಗಳ ಬೇಟೆ ನಡೆಸಿರುವ ಭಾರತೀಯ ಆಟಗಾರರು, ಎಲ್ಲ ಏಳು ಚಿನ್ನದ ಪದಕಗಳನ್ನು ಪಡೆದು ಬೀಗಿದ್ದಾರೆ. ಜವಹರ್ ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಹರ್ಮೀತ್ ದೇಸಾಯಿ ಮತ್ತು ಸಥಿಯಾನ್ ಜ್ಞಾನ ಶೇಖರನ್ ಅವರು ಪುರುಷರ ಸಿಂಗಲ್ಸ್ ಫೈನಲ್ ವಿಭಾಗದಲ್ಲಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅಂತೆಯೇ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲೂ ಮ್ಯಾಜಿಕ್ ಮಾಡಿದ ಸಥಿಯಾನ್ ಜ್ಞಾನ ಶೇಖರನ್ ಮತ್ತು ಶರತ್ ಕಮಲ್ ಜೋಡಿ ಚಿನ್ನದ ಪದಕಕ್ಕೆ ಭಾಜನರಾದರು. 
ಇನ್ನು ಮಹಿಳೆಯರ ವಿಭಾಗದ ಸಿಂಗಲ್ಸ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಐಹಿಕಾ ಮುಖರ್ಜಿ ಚಿನ್ನ ಗೆದ್ದರೆ, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪೂಜಾ ಸಹಸ್ರಬುದ್ಧೆ ಮತ್ತು ಕೃತ್ವಿಕಾ ಸಿನ್ಹಾ ರಾಯ್ ಅವರು ಚಿನ್ನದ ಪದಕ ಗೆದ್ದರು. 
ಆ ಮೂಲಕ ಚಾಂಪಿಯನ್ ಶಿಪ್ ನಲ್ಲಿ ಭಾರತ 7 ಬಂಗಾರ, 5 ಬೆಳ್ಳಿ, 3 ಕಂಚುಗಳನ್ನು ಪಡೆದು ಬೀಗಿದೆ. ಇಂಗ್ಲೆಂಡ್ 2 ಬೆಳ್ಳಿ, 3 ಕಂಚು ಪಡೆದರೆ, ಸಿಂಗಾಪುರ್ 6 ಕಂಚಿನ ಪದಕದ ಸಾಧನೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com