ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ಅತ್ಯಾಚಾರ ಆರೋಪ ಎದುರಿಸುವುದಿಲ್ಲ: ಪ್ರಾಸಿಕ್ಯೂಟರ್

ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅತ್ಯಾಚಾರದ ಆರೋಪವನ್ನು ಎದುರಿಸುವುದಿಲ್ಲ ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್‌: ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅತ್ಯಾಚಾರದ ಆರೋಪವನ್ನು ಎದುರಿಸುವುದಿಲ್ಲ ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.
ಕಳೆದ 2009 ರಲ್ಲಿ ಲಾಸ್ ವೇಗಾಸ್ ಹೋಟೆಲ್‌ನಲ್ಲಿ ಕ್ಯಾಥರಿನ್ ಮಯೋರ್ಗಾ ಅವರು ಜುವೆಂಟಾಸ್ ಮತ್ತು ಪೋರ್ಚುಗಲ್ ಮುಂಚೂಣಿ ಆಟಗಾರ ರೊನಾಲ್ಡೊ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.
ಆದಾಗ್ಯೂ, ಲಾಸ್ ವೇಗಾಸ್ ಪ್ರಾಸಿಕ್ಯೂಟರ್‌ ಗಳು ಈ ಹಕ್ಕುಗಳನ್ನು "ಸಮಂಜಸವಾದ ಅನುಮಾನವನ್ನು ಮೀರಿ ಸಾಬೀತುಪಡಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಫುಟ್ಬಾಲ್ ಜಗತ್ತಿನ ಖ್ಯಾತ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ದ ಅಮೆರಿಕನ್​ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಹೊರಿಸಿದ್ದರು. 2009ರಲ್ಲಿ ಅಮೆರಿಕಾದ ಲಾಸ್​ ವೇಗಸ್​ ಹೋಟೆಲ್​ನಲ್ಲಿ ತನ್ನ ಮೇಲೆ ರೊನಾಲ್ಡೊ ಅತ್ಯಾಚಾರವೆಸಗಿದ್ದಾರೆ ಎಂದು 34 ವರ್ಷದ ಕ್ಯಾಥರಿನ್​ ಮಯೋರ್ಗಾ ಎಂಬಾಕೆ ಆರೋಪಿಸಿದ್ದರು. ಈ ಸಂಬಂಧ ಪ್ರಕರಣ ಕೂಡ ದಾಖಲಿಸಿದ್ದರು. 
ಅಂತೆಯೇ ರೊನಾಲ್ಡೋ ಅತ್ಯಾಚಾರದ ಬಗ್ಗೆ ಯಾರಿಗೂ ಹೇಳದಂತೆ 3,75,000 (27,193,125 ರೂ) ಡಾಲರ್​​ ಹಣವನ್ನು ನೀಡಿದ್ದಾರೆ ಎಂದು ದೂರುದಾರ ಮಹಿಳೆ ಜರ್ಮನ್​ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ರೊನಾಲ್ಡೋ ಲಾಸ್​ವೇಗಸ್​ನಲ್ಲಿ ರಜೆದಿನಗಳನ್ನು ಕಳೆಯುತ್ತಿದ್ದರು. ಅದೊಂದು ಸಂಜೆ ಪಾರ್ಟಿಯಲ್ಲಿ ರೊನಾಲ್ಡೊ ನನ್ನನ್ನು ಮೊದಲ ಬಾರಿ ಭೇಟಿಯಾಗಿದ್ದರು. ಕುಡಿದ ಅಮಲಿನಲ್ಲಿದ್ದ ರೊನಾಲ್ಡೊ ತನ್ನ ಬಳಿ ಬಂದು ‘ನಾನು ಶೇ.99ರಷ್ಟು ಒಳ್ಳೆಯ ಹುಡುಗ, ಆದರೆ ಶೇ.1 ಕೆಟ್ಟವನಾಗಲು ಬಿಡು’ ಎಂದು ಫ್ಲರ್ಟ್​ ಮಾಡಿದ್ದರು. ಬಳಿಕ ಹೋಟೆಲ್​ ರೂಮನಲ್ಲಿಯೇ ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಹೇಳಿಕೊಂಡಿದ್ದರು.  ಈ ವಿಚಾರ ಫುಟ್ಬಾಲ್ ಲೋಕದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com