ಸಾಯಿ ಪ್ರಣೀತ್‌
ಸಾಯಿ ಪ್ರಣೀತ್‌

ಜಪಾನ್ ಓಪನ್: ಸಾಯಿ ಪ್ರಣೀತ್ ಶುಭಾರಂಭ, ಸಿಂಧೂ, ಶ್ರೀಕಾಂತ್ ಗೆ ನಾಳೆ ಅದೃಷ್ಟ ಪರೀಕ್ಷೆ

ಭಾರತದ ಸಾಯಿ ಪ್ರಣೀತ್‌ ಅವರು ಇಂದಿನಿಂದ ಇಲ್ಲಿ ಆರಂಭವಾಗಿರುವ ಬಿಡಬ್ಲ್ಯುಎಫ್‌ ವಿಶ್ವ ಸೂಪರ್‌ 750 ಟೂರ್ನಿ ಜಪಾನ್‌ ಓಪನ್‌ ಮೊದಲ ಸುತ್ತಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ.
ಟೋಕಿಯೋ: ಭಾರತದ ಸಾಯಿ ಪ್ರಣೀತ್‌ ಅವರು ಇಂದಿನಿಂದ ಇಲ್ಲಿ ಆರಂಭವಾಗಿರುವ ಬಿಡಬ್ಲ್ಯುಎಫ್‌ ವಿಶ್ವ ಸೂಪರ್‌ 750 ಟೂರ್ನಿ ಜಪಾನ್‌ ಓಪನ್‌ ಮೊದಲ ಸುತ್ತಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ.
42 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ ಹಣಾಹಣಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಸಾಯಿ ಪ್ರಣೀತ್‌ ಅವರು 21-17, 21-13 ನೇರ ಸೆಟ್‌ಗಳಿಂದ ಜಪಾನ್‌ನ ಕೆಂಟಾ ನಿಶಿಮೋಟಾ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ. ಸೋಲಿನಿಂದಾಗಿ ವಿಶ್ವದ 10ನೇ ಶ್ರೇಯಾಂಕದ ಜಪಾನ್‌ ಆಟಗಾರ ಸೋಲಿನಿಂದ ತೀವ್ರ ಆಘಾತಕ್ಕೆ ಒಳಗಾದರು.
ಮೊದಲ ಸೆಟ್‌ನಿಂದಲೇ ಪ್ರಾಬಲ್ಯ ಮೆರೆದ 23ನೇ ಶ್ರೇಯಾಂಕಿತ ಸಾಯಿ ಪ್ರಣೀತ್‌ ಅಂದುಕೊಂಡಂತೆ ಮುನ್ನಡೆ ಗಳಿಸುತ್ತ ಸಾಗಿದರು. ಭಾರತೀಯ ಆಟಗಾರ ಆಕ್ರಮಣಕಾರಿ ಆಟದ ಎದುರು ಸ್ಥಳೀಯ ಆಟಗಾರ ಮಂಕಾದರು. ಇದರ ಫಲವಾಗಿ ಸಾಯಿ ಪ್ರಣೀತ್‌ 21-17 ಅಂತರದಲ್ಲಿ ಮೊದಲ ಗೇಮ್‌ ಅನ್ನು ತನ್ನದಾಗಿಸಿಕೊಂಡರು. 
ಇನ್ನು ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ, ಎಸ್. ರಾಂಕಿರೆಡ್ಡಿಮತ್ತು ಅಶ್ವಿನಿ ಪೊನ್ನಪ್ಪ ಮೊದಲ ಪಂದ್ಯ ಗೆದ್ದು ಶುಭಾರಂಬ ಮಾಡಿದ್ದಾರೆ. ಜರ್ಮನಿಯ ಮಾರ್ವಿನ್ ಸೀಡೆಲ್ ಮತ್ತು ಲಿಂಡಾ ಎಫ್ಲರ್ ಅವ ವಿರುದ್ಧ 1-14 31-19 ನೇರ ಸೆಟ್ ಗಳಿಂದ ಅವರು ಜಯ ಸಾಧಿಸಿದ್ದಾರೆ. ಆದಾಗ್ಯೂ, ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಮತ್ತು ಸುಮೀತ್ ಬಿ ರೆಡ್ಡಿ ಮೊದಲ ಸುತ್ತಿನಲ್ಲೇ ಪರಾಜಿತವಾಗಿ ಕ್ರೀಡಾಕೂಟದಿಂದ ಹೊರನಡೆದಿದೆ.
ಬುಧವಾರ ಭಾರತದ ಸ್ತಾರ್ ಆಟಗಾರರಾದ ಪಿವಿ ಸಿಂಧೂ ಹಾಗೂ ಕಿಡಂಬಿ ಶ್ರೀಕಾಂತ್ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.ಐದನೇ ಶ್ರೇಯಾಂಕದಲ್ಲಿರುವ ಸಿಂಧು ಚೀನಾದ ಯು ಹಾನ್ ಅವರನ್ನು ಎದುರಿಸಲಿದ್ದರೆ, ಶ್ರೀಕಾಂತ್ ತಮ್ಮದೇ ದೇಶದ ಎಚ್ ಎಸ್ ಪ್ರಣೋಯ್ ಅವರೊಡನೆ ಹೋರಾಡಲಿದ್ದಾರೆ. 
ಈ ನಡುವೆ ಗಾಯದ ಸಮಸ್ಯೆಯ ಕಾರಣ ಇನ್ನೋರ್ವ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಕ್ರೀಡಾಕೂಟದಿಂದ ದೂರ ಉಳಿದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com