ಜಪಾನ್‌ ಓಪನ್‌: ಸೆಮೀಸ್ ನಲ್ಲಿ ಜಪಾನ್ ಆಟಗಾರನಿಗೆ ಮಣಿದ ಪ್ರಣೀತ್ ಟೂರ್ನಿಯಿಂದ ಔಟ್

ಜಪಾನ್‌ ಓಪನ್‌ನಲ್ಲಿ ಗೆಲುವಿನ ಓಟ ಮುಂದುವರಿಸುತ್ತಿದ್ದ ಭಾರತದ ಸಾಯಿ ಪ್ರಣೀತ್‌ ಅವರನ್ನು ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಕೆಂಟೊ ಮೊಮೊಟಾ ಅವರು ಬ್ರೇಕ್‌ ಹಾಕಿದರು.
ಸಾಯಿ ಪ್ರಣೀತ್‌
ಸಾಯಿ ಪ್ರಣೀತ್‌
ಟೋಕಿಯೋ: ಇಲ್ಲಿ ನಡೆಯುತ್ತಿರುವ ಜಪಾನ್‌ ಓಪನ್‌ನಲ್ಲಿ ಗೆಲುವಿನ ಓಟ ಮುಂದುವರಿಸುತ್ತಿದ್ದ ಭಾರತದ ಸಾಯಿ ಪ್ರಣೀತ್‌ ಅವರನ್ನು ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಕೆಂಟೊ ಮೊಮೊಟಾ ಅವರು ಬ್ರೇಕ್‌ ಹಾಕಿದರು.
45 ನಿಮಿಷಗಳ ಕಾಲ ನಡೆದ ಜಪಾನ್‌ ಓಪನ್‌-2019ರ ಪುರುಷರ ಸಿಂಗಲ್ಸ್‌ ಅಂತಿಮ ನಾಲ್ಕರ ಘಟ್ಟದಲ್ಲಿ ವಿಶ್ವದ 23ನೇ ಶ್ರೇಯಾಂಕದ ಸಾಯಿ ಪ್ರಣೀತ್‌ ಅವರನ್ನು ಜಪಾನ್‌ನ ಕೆಂಟೊ ಮೊಮೊಟಾ ಅವರು 18-21, 12-21 ಅಂತರದಲ್ಲಿ ಮಣಿಸುವ ಮೂಲಕ ಭಾರತದ ಆಟಗಾರನ ಕನಸು ಭಗ್ನಗೊಳಿಸಿದರು.
ಟೂರ್ನಿಯ ಆರಂಭದಲ್ಲೇ ಅತ್ಯುತ್ತಮ ಲಯಕ್ಕೆ ಮರಳಿದ್ದ ಸಾಯಿ ಪ್ರಣೀತ್‌ ಅವರು ಒಂದೂ ಪಂದ್ಯ ಸೋಲದೇ ಗೆಲುವಿನ ಓಟ ಮುಂದುವರಿಸಿ ಸೆಮಿಫೈನಲ್‌ ತಲುಪಿದ್ದರು. ಕೆಂಟಾ ನಿಶಿಮೋಟಾ, ಕಂಟಾ ಟಿಸುನೆಯಾಮ ಹಾಗೂ ಟಾಮ್ಮಿ ಸುಗಿಯಾರ್ಟೊ ಅವರನ್ನು ಸೋಲಿಸಿದ್ದ ಪ್ರಣೀತ್‌ ಅವರಿಗೆ ವಿಶ್ವದ ಅಗ್ರ ಕ್ರಮಾಂಕದ ಆಟಗಾರನ ಎದುರು ಸವಾಲು ಕಠಿಣವಾಗಿತ್ತು ಮೊದಲ ಸುತ್ತಿನಲ್ಲಿ ಕೆಂಟೊ ಮೊಮೊಟಾ ವಿರುದ್ಧ 23 ನಿಮಿಷಗಳಲ್ಲಿ 18-21 ಸೆಟ್ ಗಳಲ್ಲಿ ಪರಾಜಿತಾರಾದ ಪ್ರಣೀತ್ ಎರಡನೇ ಸುತ್ತಿನಲ್ಲಿಯೂ ಅವರನ್ನು ಎದುರಿಸಲು ವಿಫಲವಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com