2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಶೂಟಿಂಗ್‌ ಇಲ್ಲ!

ಮುಂಬರುವ 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಶೂಟಿಂಗ್‌ ಸ್ಪರ್ಧೆಯನ್ನು ಕೈಬಿಡಲಾಗಿದೆ.

Published: 21st June 2019 12:00 PM  |   Last Updated: 21st June 2019 12:31 PM   |  A+A-


Shooting left out of Commonwealth Games 2022, big blow for India

2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಶೂಟಿಂಗ್‌ ಇಲ್ಲ

Posted By : SBV SBV
Source : UNI
ಬರ್ಮಿಂಗ್‌ಹ್ಯಾಮ್: ಮುಂಬರುವ 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಶೂಟಿಂಗ್‌ ಸ್ಪರ್ಧೆಯನ್ನು ಕೈಬಿಡಲಾಗಿದೆ. ಇದರಿಂದ 2018ರ ಗೋಲ್ಡ್‌ಕೋಟ್ಸ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಶೂಟಿಂಗ್‌ ವಿಭಾಗದಲ್ಲಿ ಏಳು ಚಿನ್ನದ ಪದಕಗಳ ಜತೆಗೆ ಒಟ್ಟು 16 ಪದಕಗಳು ಗೆದ್ದಿದ್ದ ಭಾರತ ಈ ನಿರ್ಧಾರ ತೀವ್ರ ನಿರಾಸೆಯನ್ನು ಉಂಟುಮಾಡಿದೆ. 

ಬರ್ಮಿಂಗ್‌ಹ್ಯಾಮ್‌ನಲ್ಲಿನ  2022ರ ಆವೃತ್ತಿಯ ಸಲುವಾಗಿ ಗುರುವಾರ ನಡೆದ ಕಾಮನ್‌ವೆಲ್ತ್‌ ಕ್ರೀಡಾ ಒಕ್ಕೂಟದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಮಹಿಳಾ ಕ್ರಿಕೆಟ್‌, ಬೀಚ್‌ ವಾಲಿಬಾಲ್‌ ಹಾಗೂ ಪ್ಯಾರಾ ಟೇಬಲ್‌ ಟೆನಿಸ್‌ ಸ್ಪರ್ಧೆಗಳಿಗೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸ್ಥಾನ ಕಲ್ಪಿಸಲಾಗಿದೆ. 

ಆದರೆ, ಈ ಮೂರು ಕ್ರೀಡೆಗಳ ಸೇರ್ಪಡೆಗೆ ಮುಂದಿನ ತಿಂಗಳು 51 ಪ್ರತಿಶತದಷ್ಟು ಸಿಜಿಎಫ್ ಸದಸ್ಯರು ಅನುಮೋದನೆ ನೀಡಬೇಕಾಗಿದ ಅಗತ್ಯವಿದೆ. 

"ಮಹಿಳೆಯರ ಕ್ರಿಕೆಟ್, ಬೀಚ್ ವಾಲಿಬಾಲ್ ಮತ್ತು ಪ್ಯಾರಾ ಟೇಬಲ್ ಟೆನಿಸ್ ಅನ್ನು ಸೇರಿಸುವ ನಮ್ಮ ಶಿಫಾರಸು ಸಂಪೂರ್ಣ ವಿಮರ್ಶೆಯ ಫಲಿತಾಂಶವಾಗಿದೆ ಮತ್ತು ಈ ಕ್ರೀಡೆಗಳು ಅಸ್ತಿತ್ವದಲ್ಲಿರುವ ಕಾರ್ಯಕ್ರಮವನ್ನು ಹೆಚ್ಚಿಸಲು ಮತ್ತು ಹೊಸ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡುತ್ತದೆ ಎಂದು ನಾವು ಬಲವಾಗಿ ನಂಬಿದ್ದೇವೆ. ಸ್ಥಳೀಯ ಸಮುದಾಯ, ಪ್ರಪಂಚದಾದ್ಯಂತದ ಪ್ರೇಕ್ಷಕರು ಮತ್ತು ಅಭಿಮಾನಿಗಳಿಗಳು ಈ ಕ್ರೀಡೆಗಳ ಪ್ರದರ್ಶನವನ್ನು ಟಿವಿ ಮೂಲಕ ವೀಕ್ಷಿಸಲಿದ್ದಾರೆ" ಎಂದು ಬರ್ಮಿಂಗ್‌ಹ್ಯಾಮ್‌ 2022ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಿಇಓ ಇಯಾನ್ ರೀಡ್‌ ತಿಳಿಸಿದ್ದಾರೆ. 

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಶೂಟಿಂಗ್‌ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ 2022 ಆವೃತ್ತಿಯನ್ನು ಭಾರತ ಭಾಗವಹಿಸದೆ ಬಹಿಷ್ಕರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಭಾರತ ರಾಷ್ಟ್ರೀಯ ರೈಫಲ್‌ ಅಸೋಸಿಯೇಷನ್‌ ಅಧ್ಯಕ್ಷ ರಾಣಿಂದರ್‌ ಸಿಂಗ್‌ ಒತ್ತಾಯಿಸಿದ್ದರು.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp