ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಬಿಡುಗಡೆ; ಮೊದಲ ಪಂದ್ಯದಲ್ಲೇ ಚಾಂಪಿಯನ್ ಬೆಂಗಳೂರಿಗೆ, ಪಾಟ್ನಾ ಸವಾಲು!

ಏಳನೇ ಆವೃ‍ತ್ತಿ ಪ್ರೊ ಕಬಡ್ಡಿ ಲೀಗ್ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಜುಲೈ 20ರಿಂದ ಟೂರ್ನಿ ಆರಂಭವಾಗಲಿದೆ.

Published: 22nd June 2019 12:00 PM  |   Last Updated: 22nd June 2019 01:54 AM   |  A+A-


VIVO Pro Kabaddi Season 7: Official Schedule and Dates Revealed

ಸಂಗ್ರಹ ಚಿತ್ರ

Posted By : SVN SVN
Source : Online Desk
ಹೈದರಾಬಾದ್: ಏಳನೇ ಆವೃ‍ತ್ತಿ ಪ್ರೊ ಕಬಡ್ಡಿ ಲೀಗ್ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಜುಲೈ 20ರಿಂದ ಟೂರ್ನಿ ಆರಂಭವಾಗಲಿದೆ.

ಈ ಹಿಂದಿನ ಸತತ ಆರು ಲೀಗ್ ಗಳು ಅಭೂತ ಪೂರ್ವ ಯಶಸ್ಸು ಕಂಡಿದ್ದು, 7ನೇ ಲೀಗ್ ಕೂಡ ಯಶಸ್ಸು ಕಾಣಲಿದೆ ಎಂದು ಆಯೋಜಕರು ಭರವಸೆ ವ್ಯಕ್ತಪಡಿಸಿದ್ದಾರೆ. 

ಮುಂಬರುವ ಜುಲೈ 20ರಿಂದ ಆರಂಭವಾಗಲಿದ್ದು, ಶುಕ್ರವಾರ ಟೂರ್ನಿಯ ವೇಳಾಪಟ್ಟಿ ಬಿಡುಗಡೆಗೊಳಿಸಲಾಗಿದೆ. ಉದ್ಘಾಟನಾ ಪಂದ್ಯ ಹೈದರಾಬಾದ್ ನಲ್ಲಿ ನಡೆಯಲಿದ್ದು, ತೆಲಗು ಟೈಟನ್ಸ್ ಹಾಗೂ ಯು ಮುಂಬಾ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಮೊದಲ ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಮೂರು ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಬಾರಿ ಪಂದ್ಯಗಳು ಅರ್ಧಗಂಟೆ ಮುಂಚಿತವಾಗಿ ನಡೆಯಲಿದ್ದು, ಸಂಜೆ 7.30ಕ್ಕೆ ಜರುಗಲಿವೆ.

ಇನ್ನು ಈ ಹಿಂದೆ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸಿದ್ಧಾರ್ಥ್ ಸಿರೀಶ್ ದೇಸಾಯಿ ಗರಿಷ್ಠ ಅಂದರೆ 1.45 ಕೋಟಿಗೆ ಸೇಲಾಗಿದ್ದು, ತೆಲುಗು ಟೈಟನ್ಸ್ ಪರ ಆಡಲಿದ್ದಾರೆ. ಇನ್ನು 1.20 ಕೋಟಿ ರೂಗೆ ನಿತಿನ್ ತೋಮರ್ ಪುಣೇರಿ ಪಲ್ಟನ್ ತಂಡದ ಪಾಲಾಗಿದ್ದು, 94 ಲಕ್ಷಕ್ಕೆ ರಾಹುಲ್ ಚೌದರಿ ತಮಿಳ್ ತಲೈವಾಸ್, ಮೋನು ಗೋಯಟ್ (93 ಲಕ್ಷ) ಯುಪಿ ಯೋಧ ಮತ್ತು ಸ್ಟಾರ್ ಆಟಗಾರ ಸಂದೀಪ್ ನರ್ವಾಲ್ (89 ಲಕ್ಷ) ಯು ಮುಂಬಾ ಪರವಾಗಿ ಕಣಕ್ಕಿಳಿಯಲಿದ್ದಾರೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp