ಎಫ್ ಐಹೆಚ್ ಮಹಿಳಾ ಹಾಕಿ ಸರಣಿ: ಫೈನಲ್ ನಲ್ಲಿ ಜಪಾನ್ ದೇಶವನ್ನು 3-1 ಅಂತರದಿಂದ ಸೋಲಿಸಿದ ಭಾರತದ ವನಿತೆಯರು

ಎಫ್ ಐಹೆಚ್ ಮಹಿಳಾ ಹಾಕಿ ಸರಣಿಯ ಫೈನಲ್ ಪಂದ್ಯದಲ್ಲಿ ಅತಿಥೇಯ ಜಪಾನ್ ದೇಶವನ್ನು 3-1 ಗೋಲುಗಳಿಂದ ಭಾರತದ ಮಹಿಳಾ ಹಾಕಿ ತಂಡ ಮಣಿಸಿದೆ.
ಭಾರತದ ವನಿತೆಯರು
ಭಾರತದ ವನಿತೆಯರು
ಹಿರೋಷಿಮಾ: ಎಫ್ ಐಹೆಚ್ ಮಹಿಳಾ ಹಾಕಿ ಸರಣಿಯ ಫೈನಲ್  ಪಂದ್ಯದಲ್ಲಿ  ಅತಿಥೇಯ ಜಪಾನ್ ದೇಶವನ್ನು 3-1 ಗೋಲುಗಳಿಂದ ಭಾರತದ ಮಹಿಳಾ ಹಾಕಿ ತಂಡ ಮಣಿಸಿದೆ. 
ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಲ್  ಮೂರನೇ ನಿಮಿಷದಲ್ಲಿ ಗೋಲ್  ಪಡೆದರು. ಆದರೆ, 11ನೇ ನಿಮಿಷದಲ್ಲಿ ಜಪಾನಿನ ಕಾನೊನ್ ಮೊರಿ ಗೋಲ್ ಗಳಿಸುವ ಮೂಲಕ ಸಮಬಲ ತಂದರು.
45 ಹಾಗೂ 60ನೇ ನಿಮಿಷದಲ್ಲಿ ಗುರ್ಜಿತ್ ಕೌರ್  ಗೋಲು ಬಾರಿಸುವ ಮೂಲಕ ಭಾರತದ ವನಿತೆಯರು 3-1 ಗೋಲುಗಳ ಅಂತರದಿಂದ  ಗೆಲುವು ಸಾಧಿಸಿದರು.
ವಿಶ್ವ ಕ್ರಮಾಂಕದಲ್ಲಿ 9 ನೇ ಸ್ಥಾನದಲ್ಲಿರುವ ಭಾರತ ನಿನ್ನೆ ನಡೆದ ಎಫ್ ಐಹೆಚ್ ಮಹಿಳಾ ಹಾಕಿ ಸರಣಿಯ ಸೆಮಿಫೈನಲ್ ಪಂದ್ಯವನ್ನು ಗೆದ್ದು ಒಲಿಪಿಂಕ್ಸ್  ಗೆ ಈಗಾಗಲೇ ಅರ್ಹತೆ ಪಡೆದುಕೊಂಡಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com