ವಿದೇಶಿ ನೆಲದಲ್ಲಿ ಚಾರಿತ್ರಿಕ ಸಾಧನೆ ಮಾಡಿದ ಭಾರತದ ರಗ್ಬಿ ವನಿತೆಯರ ತಂಡ!

ಬಹುರಾಷ್ಟ್ರೀಯ ಟೂರ್ನಿಯಲ್ಲಿ ಜಯ ಗಳಿಸುವ ಮೂಲಕ ಭಾರತದ ವನಿತೆಯರ ರಗ್ಬಿ ತಂಡ ಇತಿಹಾಸ ಸೃಷ್ಟಿಸಿದೆ.

Published: 24th June 2019 12:00 PM  |   Last Updated: 24th June 2019 01:18 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ನವದೆಹಲಿ: ಬಹುರಾಷ್ಟ್ರೀಯ ಟೂರ್ನಿಯಲ್ಲಿ ಜಯ ಗಳಿಸುವ ಮೂಲಕ ಭಾರತದ ವನಿತೆಯರ ರಗ್ಬಿ ತಂಡ ಇತಿಹಾಸ ಸೃಷ್ಟಿಸಿದೆ.

ಏಷ್ಯಾ ರಗ್ಬಿ ವುಮೆನ್ಸ್ ಚಾಂಪಿಯನ್ ಡಿವಿಷನ್ 1 ಹಣಾಹಣಿಯಲ್ಲಿ ಸುಮಿತ್ರಾ ನಾಯಕ್ ಅವರ ಸಾಹಸದ ಫಲವಾಗಿ ಭಾರತ ಮಹಿಳಾ ತಂಡ ಸಿಂಗಾಪುರ ತಂಡವನ್ನು 21-19 ಅಂಕಗಳಿಂದ ಸೋಲಿಸಿದೆ.

ಈ ಜಯದೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿಕೊಂಡಿದೆ. ಮಹಿಳಾ ರಗ್ಬಿ ತಂಡದ ಈ ಅತ್ಯುತ್ತಮ ಸಾಧನೆ ದೇಶಾದ್ಯಂತ ಸಂಭ್ರಮದ ಅಲೆಯನ್ನೇ ಹುಟ್ಟುಹಾಕಿದೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp