ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಬಡ್ಡಿ ವಿಶ್ವಕಪ್ 2019: ಸೋನಿ ಟಿವಿ ತೆಕ್ಕೆಗೆ ಪಂದ್ಯಗಳ ಪ್ರಸಾರದ ಹಕ್ಕು

ಬಹು ನಿರೀಕ್ಷಿತ ವಿಶ್ವಕಪ್ ಕಬಡ್ಡಿ 2019ರ ನೇರ ಪ್ರಸಾರದ ಹಕ್ಕನ್ನು ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಮುಂಬೈ: ಬಹು ನಿರೀಕ್ಷಿತ ವಿಶ್ವಕಪ್ ಕಬಡ್ಡಿ 2019ರ ನೇರ ಪ್ರಸಾರದ ಹಕ್ಕನ್ನು ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಇದೇ ಜುಲೈ 20 ರಿಂದ 28ರವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ ಮಹತ್ವದ ಟೂರ್ನಿಯ ನೇರ ಪ್ರಸಾರದ ಹಕ್ಕನ್ನು ಸೋನಿ ಪಿಕ್ಟರ್ಸ್ ನೆಟ್ವರ್ಕ್ ಸಂಸ್ಥೆ ಪಡೆದುಕೊಂಡಿದೆ. ಈ ಮಹತ್ವದ ಟೂರ್ನಿಯ ನೇರ ಪ್ರಸಾರದ ಹಕ್ಕಿಗಾಗಿ ಒಟ್ಟು ಎಂಟು ದೇಶಗಳ ಕಂಪನಿಗಳು ಪ್ರಸಾರದ ಹಕ್ಕನ್ನು ಪಡೆಯಲು ಪ್ರಯತ್ನ ನಡೆಸಿದ್ದವು. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್, ಭೂತಾನ್ ಹಾಗೂ ಅಫ್ಘನಿಸ್ತಾನದಲ್ಲಿ ಪಂದ್ಯದ ಪ್ರಸಾರವಾಗಲಿದೆ.
ಭಾರತದ ಕ್ರೀಡೆ ಕಬಡ್ಡಿ ವಿಶ್ವದಲ್ಲಿ ಅಭಿಮಾನಿಗಳನ್ನು ಸೆಳೆಯುತ್ತಿದೆ. ವಿಶ್ವಕಪ್ ಟೂರ್ನಿಯಲ್ಲಿ ಪುರುಷರ 32 ಹಾಗೂ ಮಹಿಳೆಯರ 16 ತಂಡಗಳು ಭಾಗವಹಿಸಲಿವೆ. ಈ ಬಾರಿಯೂ ಸ್ಪರ್ಧಾ ಕಣದಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಮಲೇಷ್ಯಾ, ಪಾಕಿಸ್ತಾನ ದಂತಹ ಘಟಾನುಘಟಿ ತಂಡಗಳಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಾಗಿವೆ.

Related Stories

No stories found.

Advertisement

X
Kannada Prabha
www.kannadaprabha.com