ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್: ಮನು ಭಾಕರ್-ಸೌರಭ್ ಚೌಧರಿ ಜೋಡಿಗೆ ಬಂಗಾರ

ಅರ್ಹತಾ ಸುತ್ತಿನಲ್ಲಿ ವಿಶ್ವದಾಖಲೆ ನಿರ್ಮಿಸಿದ ಭಾರತದ ಯುವ ಶೂಟರ್ ಗಳಾದ ಸೌರಭ್ ಚೌಧರಿ ಹಾಗೂ ಮನು ಭಾಕರ್ ಅವರು ತೈಪೆಯ ಟಾವೊವಾನ್ ನಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏರ್ ಗನ್ ಚಾಂಪಿಯನ್ ಶಿಪ್....

Published: 27th March 2019 12:00 PM  |   Last Updated: 27th March 2019 07:47 AM   |  A+A-


Manu Bhaker, Saurabh Chaudhary smash world record and wins mixed team gold at Asian Championship

ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್: ಮನು ಭಾಕರ್-ಸೌರಭ್ ಚೌಧರಿ ಜೋಡಿಗೆ ಬಂಗಾರ

Posted By : RHN RHN
Source : UNI
ನವದೆಹಲಿ: ಅರ್ಹತಾ ಸುತ್ತಿನಲ್ಲಿ ವಿಶ್ವದಾಖಲೆ ನಿರ್ಮಿಸಿದ ಭಾರತದ ಯುವ ಶೂಟರ್ ಗಳಾದ ಸೌರಭ್ ಚೌಧರಿ ಹಾಗೂ ಮನು ಭಾಕರ್ ಅವರು ತೈಪೆಯ ಟಾವೊವಾನ್ ನಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏರ್ ಗನ್ ಚಾಂಪಿಯನ್ ಶಿಪ್ ನ 10 ಮೀಟರ್ ಮಿಶ್ರ ತಂಡ ಏರ್ ಪಿಸ್ತೂಲ್ ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ. 
  
ಈ ಜೋಡಿ ಅರ್ಹತಾ ಸುತ್ತಿನಲ್ಲಿ ಒಟ್ಟು 784 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿತು. ಈ ಮೂಲಕ ಐದು ದಿನಗಳ ಹಿಂದೆ ರಷ್ಯಾ ಶೂಟರ್ ಗಳು ಮಾಡಿದ್ದ ಸಾಧನೆಯನ್ನು ಅಳಿಸಿ ಹಾಕಿದೆ. ಇನ್ನು ಫೈನಲ್ ಕಾದಾಟದಲ್ಲಿ ಭಾರತದ ಜೋಡಿ 484.8 ಅಂಕ ಕಲೆ ಹಾಕಿ ಸ್ವರ್ಣ ಸಾಧನೆ ಮಾಡಿದೆ. 
  
ಈ ವಿಭಾಗದ ಬೆಳ್ಳಿ ಪದಕ ಕೊರಿಯಾ ಪಾಲಾದರೆ, ಚೀನಾದ ಜೋಡಿ ಕಂಚು ಪಡೆದಿದೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp