ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್:ಎರಡನೇ ದಿನ ಭಾರತಕ್ಕೆ ಮೂರು ಪದಕ
ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್:ಎರಡನೇ ದಿನ ಭಾರತಕ್ಕೆ ಮೂರು ಪದಕ

ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್:ಎರಡನೇ ದಿನ ಭಾರತಕ್ಕೆ ಮೂರು ಪದಕ

ಟಾವೋವಾನ್ ನಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏರ್ ಗನ್ ಚಾಂಪಿಯನ್ ಶಿಪ್ ನ ಎರಡನೇ ದಿನವೂ ಭಾರತದ ಭರವಸೆಯ ಶೂಟರ್ ಗಳು ಪದಕ ಬೇಟೆ ಮುಂದುವರೆಸಿದ್ದಾರೆ.
ನವದೆಹಲಿ: ಟಾವೋವಾನ್ ನಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏರ್ ಗನ್ ಚಾಂಪಿಯನ್ ಶಿಪ್ ನ ಎರಡನೇ ದಿನವೂ ಭಾರತದ ಭರವಸೆಯ ಶೂಟರ್ ಗಳು ಪದಕ ಬೇಟೆ ಮುಂದುವರೆಸಿದ್ದಾರೆ. ಗುರುವಾರ ಒಂದು ಬಂಗಾರ ಹಾಗೂ ಎರಡು ಬೆಳ್ಳಿ ಸಾಧನೆ ಮಾಡಿ  ಬೀಗಿದ್ದಾರೆ. 
ಕಿರಿಯರ ವಿಭಾಗದ 10 ಮೀ. ರೈಫಲ್ ಮಿಶ್ರ ವಿಭಾಗದ ಫೈನಲ್ ಸುತ್ತಿನಲ್ಲಿ ರವಿ ಕುಮಾರ್ ಹಾಗೂ ಎಲ್ವೆನಿಲ್ ಅವರು ಅಮೋಘ ಪ್ರದರ್ಶನ ನೀಡಿದರು. ಈ ಜೋಡಿ 498.4 ಅಂಕ ಕಲೆ ಹಾಕಿ ರಜತ ಪದಕವನ್ನು ತನ್ನದಾಗಿಸಿಕೊಂಡಿತು. ಈ ವಿಭಾಗದ ಸ್ವರ್ಣವನ್ನು ಪಡೆದ ಕೊರಯಾ ಜೋಡಿ 499.6 ಅಂಕ ಗಳಿಸಿತು. 
ಜೂನಿಯರ್ ವಿಭಾಗದಲ್ಲಿ ಮೇಹುಲಿ ಘೋಷ್ ಹಾಗೂ ಕೇವಲ್ ಪ್ರಜಾಪತಿ ಅವರು 838.5 ಅಂಕಗಳೊಂದಿಗೆ, ಶ್ರೇಯಾ ಅಗರ್ ವಾಲ್ ಹಾಗೂ ಯಶ್ ವರ್ಧನ್ 831.2 ಅಂಕಗಳೊಂದಿಗೆ ಫೈನಲ್ ಗೆ ಪ್ರವೇಶ ಪಡೆದರು. ಫೈನಲ್ ನಲ್ಲಿ ಶ್ರೇಯಾ ಜೋಡಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ಅಲ್ಲದೆ ಈ ಜೋಡಿ 497.3 ಅಂಕ ಕಲೆ ಹಾಕಿ ಮೊದಲ ಸ್ಥಾನ ಪಡೆಯಿತು. ಇನ್ನು ಇದೇ ವಿಭಾಗದ ಬೆಳ್ಳಿಯನ್ನು ಮೇಹುಲಿ ಘೋಷ್ ಜೋಡಿ 496.9 ಅಂಕ ಗಳೊಂದಿಗೆ ರಜತ ಸಾಧನೆ ಮಾಡಿತು. 
ಬುಧವಾರ ನಡೆದ ಪಂದ್ಯದಲ್ಲಿ ಸೌರಭ್ ಚೌಧರಿ ಹಾಗೂ ಮನು ಭಕಾರ ಅವರು 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು.

Related Stories

No stories found.

Advertisement

X
Kannada Prabha
www.kannadaprabha.com