ಅಲಿ ಅಲಿಯೆವ್ ಕುಸ್ತಿ ಟೂರ್ನಿ: ಭಜರಂಗ್‌ ಪೂನಿಯಾಗೆ ಚಿನ್ನದ ಪದಕ

ವಿಶ್ವ ಅಗ್ರ ಕ್ರಮಾಂಕದ ಕುಸ್ತಿಪಟು ಭಾರತದ ಭಜರಂಗ್‌ ಪೂನಿಯಾ ಅವರು ಗುರುವಾರ ನಡೆದ 'ಅಲಿ ಅಲಿಯೆವ್ ಕುಸ್ತಿ ಟೂರ್ನಿ'ಯ ಫ್ರೀ ಸ್ಟೈಲ್ 65 ಕೆ.ಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

Published: 03rd May 2019 12:00 PM  |   Last Updated: 03rd May 2019 01:17 AM   |  A+A-


Bajrang Punia wins gold at Ali Aliyev wrestling tournament

ಭಜರಂಗ್‌ ಪೂನಿಯಾಗೆ ಚಿನ್ನ

Posted By : SVN
Source : UNI
ನವದೆಹಲಿ: ವಿಶ್ವ ಅಗ್ರ ಕ್ರಮಾಂಕದ ಕುಸ್ತಿಪಟು ಭಾರತದ ಭಜರಂಗ್‌ ಪೂನಿಯಾ ಅವರು ಗುರುವಾರ ನಡೆದ 'ಅಲಿ ಅಲಿಯೆವ್ ಕುಸ್ತಿ ಟೂರ್ನಿ'ಯ ಫ್ರೀ ಸ್ಟೈಲ್ 65 ಕೆ.ಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ರಷ್ಯಾದ ಕಾಸ್ಪಿಸ್ಕ್ ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತದ ಭಜರಂಗ್‌ ಪೂನಿಯಾ, ಫೈನಲ್‌ ಪಂದ್ಯದಲ್ಲಿ ವಿಕ್ಟರ್‌ ರಾಸಾಡಿನ್ ಅವರ ವಿರುದ್ಧ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡರು. ಫೈನಲ್ ಪಂದ್ಯದ ಆರಂಭದಲ್ಲಿ 0-5 ಹಿನ್ನಡೆ ಅನುಭವಿಸಿದ್ದ ಪೂನಿಯಾ ಬಳಿಕ ಪುಟಿದೆದ್ದರು. ಭಾರತದ ಕುಸ್ತಿಪಟು ಅಂತಿಮವಾಗಿ 13-8 ಅಂತರದಲ್ಲಿ ಜಯ ಸಾಧಿಸಿ ಸ್ವರ್ಣ ಪದಕಕ್ಕೆ ಮುತ್ತಿಟ್ಟರು. 

25ರ ಪ್ರಾಯದ ಭಜರಂಗ್‌, ಕಳೆದ ವಾರದಲ್ಲಷ್ಟೆೇ ಚೀನಾದಲ್ಲಿ ಮುಕ್ತಾಯವಾಗಿದ್ದ ಏಷ್ಯನ್‌ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಇದೀಗ ಅವರಿಗೆ ಮತ್ತೊಂದು ಚಿನ್ನದ ಪದಕ ಬಂದಿರುವುದು ಭಾರತ ಹೆಮ್ಮೆ ಪಡುವಂತಾಗಿದೆ.

Stay up to date on all the latest ಕ್ರೀಡೆ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp